ಗಾಂಜಾ ಗ್ಯಾಂಗ್ ಹಿಡಿಲು ಹೋಗಿದ್ದ ಸಿಪಿಐ ಮೇಲೆ‌ ಮಾರಣಾಂತಿಕ ಹಲ್ಲೆ

Must Read

ಬೀದರ – ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಹಿಡಿಯಲು ಹೋದ  ಸಿಪಿಐ ಅವರ ಮೇಲೆಯೇ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದು ಈ ಸಂಬಂಧ 31 ಆರೋಪಿಗಳನ್ನು ಬಂಧಿಸಲಾಗಿದೆ.

ಹಲ್ಲೆ ಮಾಡಿ ಸಿಪಿಐಯವರಿಂದ ಗಾಂಜಾ ಗ್ಯಾಂಗ್ ಲೋಡೆಡ್ ಪಿಸ್ತೂಲ್, ಮೊಬೈಲ್, ಹಣ, ಬಂಗಾರದ ಚೈನ್, ಎರಡು ಬಂಗಾರದ ರಿಂಗ್ ದೋಚಿ ಪರಾರಿಯಾಗಿತ್ತು.

ಈಗ ಬಂಧಿತ ಆರೋಪಿಗಳಿಂದ ಲೋಡೆಡ್ ಪಿಸ್ತೂಲ್, ಮೊಬೈಲ್, ಹಣ, ಬಂಗಾರದ ಚೈನ್, ಎರಡು ಬಂಗಾರದ ರಿಂಗ್ ಸ್ವಾಧಿನಪಡಿಸಿಕೊಳ್ಳುವಲ್ಲಿ  ನಮ್ಮ ಟೀಂ ಯಶಸ್ವಿಯಾಗಿದೆ ಎಂಬುದಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ಹಲ್ಲೆ ಮಾಡಿದ ಬಳಿಕ ಆರೋಪಿಗಳು ಮಹಾರಾಷ್ಟ್ರದ ಮುಂಬೈ, ಲಾಥೂರ್, ಉಮರ್ಗಾ, ಪುಣೆ ಕಡೆಗೆ ಪರಾರಿಯಾಗಿದ್ದರು.

ನಮ್ಮ ಪೊಲೀಸ್ ಟೀಂಗಳು ಆ ಪ್ರದೇಶಗಳಿಗೆ ಹೋಗಿ 31 ಜನ ಆರೋಪಿಗಳನ್ನು ಬಂಧಿಸಿವೆ. ಸಾಯಿಬಣ್ಣ ಚಿಂಚೋಳಿ, ಚಂದ್ರಕಾಂತ, ಹನುಮಂತ  ಪ್ರಮುಖ ಆರೋಪಿಗಳಾಗಿದ್ದಾರೆ. ಅಂದಾಜು 40 ರಿಂದ 50 ಆರೋಪಿಗಳಲ್ಲಿ 31 ಆರೋಪಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರಿಗೆ ವರಿಷ್ಠಾಧಿಕಾರಿಗಳು ಗೌರವ ಧನ ನೀಡಿ ಪ್ರಶಂಸಿಸಿದ್ದಾರೆ.


ವರದಿ: ನಂದಕುಮಾರ ಕರಂಜೆ,ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group