spot_img
spot_img

ಪಂಚಮಸಾಲಿಗಳಿಂದ ಸರ್ಕಾರದ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನ

Must Read

spot_img
- Advertisement -

ಮೂಡಲಗಿ: ರವಿವಾರದಂದು ಇಡೀ ರಾಜ್ಯಾದಾದ್ಯಂತ ಆಚರಿಸುವ ಕಿತ್ತೂರು ಚೆನ್ನಮ್ಮಳ ಜಯಂತಿಯನ್ನು ವಿಧಾನಸಭೆ ಉಪಸಭಾಪತಿ ಹಾಗೂ ಸವದತ್ತಿಯ ಶಾಸಕ ಆನಂದ ಮಾಮನಿ ಅವರು ನಿಧನರಾಗಿದ್ದರಿಂದ ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ಸರಳ ರೀತಿಯಲ್ಲಿ ಆಚರಿಸಲಾಯಿತು.

ಈ ವೇಳೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ, ಸಮಾಜದ ಮುಖಂಡರು ಸರ್ಕಾರದ ವಿರುದ್ದ ಕಪ್ಪು ಬಟ್ಟೆ ಪ್ರದರ್ಶನ ಮಾಡಿದರು.

ಪಂಚಮಸಾಲಿ ಸಂಘಟನೆಯ ಜಿಲ್ಲಾಕಾರ್ಯಾಧ್ಯಕ್ಷ ನಿಂಗಪ್ಪ ಪಿರೋಜಿ ಮಾತನಾಡಿ, ಬ್ರಿಟಿಷರ ವಿರುದ್ದ ಪ್ರತಿಭಟಿಸಿ ಹೋರಾಡಿದ ಭಾರತೀಯ ವೀರ ನಾರಿಯರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮೊದಲಿಗಳು. ಕಿತ್ತೂರು ಚೆನ್ನಮ್ಮ ಭಾರತದ ವೀರಪುತ್ರಿ, ಕನ್ನಡ ನಾಡಿನ ಹೆಮ್ಮಯ ಪ್ರತೀಕ, ಚೆನ್ನಮ್ಮಳ ನಿಷ್ಠೆ, ಧೈರ್ಯ, ಸಾಹಸಗಳು ತಲತಲಾಂತರದಿಂದ ಮೂಡಿಬಂದ ಕೆಚ್ಚೆದೆಯ ಕಾವ್ಯವಾಗಿದೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮಳ ತ್ಯಾಗ, ಬಲಿದಾನವನ್ನು ಅ.23ರಂದು ಪಂಚಮಸಾಲಿ ಸಮಾಜದ ಜನರು ಅಷ್ಟೇ ಅಲ್ಲದೇ ಎಲ್ಲ ಜನತೆ ಸ್ಮರಿಸುವಂಥ ದಿನವಾಗಿದ್ದು ಚೆನ್ನಮ್ಮ ಅವರ ಕೊಡುಗೆ ಇಂದಿನ ಯುವ ಪೀಳಿಗೆಗೆ ಮಾದರಿ ಎಂದರು.

- Advertisement -

ಪಂಚಮಸಾಲಿ ಸಂಘಟನೆ ರಾಜ್ಯ ಸಾಮಾಜಿಕ ಜಾಲತಾಣ ಅಧ್ಯಕ್ಷ ದೀಪಕ ಜುಂಜರವಾಡ ಮಾತನಾಡಿ, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡುವಂತೆ ಸಾಕಷ್ಟು ಹೋರಾಟಗಳನ್ನು ಮಾಡುತ್ತಾ ಬಂದಿದ್ದರೂ ಸಹ ಸರ್ಕಾರ ಮೀಸಲಾತಿ ನೀಡುವಲ್ಲಿ ವಿಳಂಬ ಮಾಡುತ್ತಿದೆ. ಸರ್ಕಾರ ಮಟ್ಟದಲ್ಲಿ ಕಿತ್ತೂರು ಚೆನ್ನಮ್ಮಳ ಜಯಂತಿಯನ್ನು ಆಚರಣೆ ಮಾಡಲಾಗುತ್ತಿರುವುದು ಪಂಚಮಸಾಲಿಗಳಿಗೆ ಹೆಮ್ಮೆಯ ಸಂಗತಿ ಆದರೆ ಆಂಗ್ಲರಿಗೆ ಸಿಂಹಸ್ವಪ್ನವಾಗಿದ್ದ ವೀರ ವನಿತೆ ಚೆನ್ನಮ್ಮಳ ವಂಶದಲ್ಲಿ ಹುಟ್ಟಿರುವ ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಸರ್ಕಾರ ವಿರುದ್ದ ಕಪ್ಪು ಬಟ್ಟೆ ಪ್ರದರ್ಶನ ಮಾಡುವಂತ ಪ್ರಸಂಗ ಬಂದಿರುವುದು ಬೇಸರದ ಸಂಗತಿ ಎಂದರು.

ಈ ಸಂದರ್ಭದಲ್ಲಿ ಗ್ರೇಡ್2 ತಹಶೀಲ್ದಾರ ಶಿವಾನಂದ ಬಬಲಿ, ಶಿರಸ್ತೇದಾರ ಪರಸಪ್ಪ ನಾಯಕ್, ಆಹಾರ ನಿರೀಕ್ಷಕ ಎಮ್ ಆರ್ ಕರಿಗಾರ, ಕಚೇರಿಯ ಸಿಬ್ಬಂದಿಗಳಾದ ಪಿ ಎಸ್ ಕುಂಬಾರ, ಅಕ್ಷಯ ಅವಾಡೆ, ಕರಿಷ್ಮಾ ನದಾಫ, ಬಿ ಎಸ್ ಕಾಳೆ, ಪಂಚಮಸಾಲಿ ಸಂಘಟನೆಯ ತಾಲೂಕಾ ಯುವ ಘಟಕದ ಅಧ್ಯಕ್ಷ ಸಂಗಮೇಶ ಕೌಲಜಗಿ, ತಾಲೂಕಾ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಮಲ್ಲು ಗೊಡಿಗೌಡರ, ಬಸವ ಸೇವಾ ಯುವಕ ಸಂಘದ ಅಧ್ಯಕ್ಷ ಕಲ್ಮೇಶ ಗೋಕಾಕ, ಉಪಾಧ್ಯಕ್ಷ ಪ್ರವೀಣ ಕುರುಬಗಟ್ಟಿ, ರವಿ ನಾಗನೂರು, ಸುರೇಶ ಸಕ್ರೆಪ್ಪಗೋಳ, ಮಲ್ಲು ಕುರುಬಗಟ್ಟಿ ಹಾಗೂ ಪಂಚಮಸಾಲಿ ಸಮುದಾಯ ಯುವಕರು ಉಸ್ಥಿತರಿದ್ದರು.

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group