ಬೆಳಗಾವಿಗೆ 100 ಹಾಸಿಗೆಗಳ ಇಎಸ್ಐಸಿ ಆಸ್ಪತ್ರೆ ನಿರ್ಮಾಣಕ್ಕೆ ಅರ್ಹತೆ

Must Read

ಮೂಡಲಗಿ: ಬೆಳಗಾವಿಯ ಇಎಸ್‍ಐಸಿ ಆಸ್ಪತ್ರೆಯ ಕಟ್ಟಡದ ಶಿಥಿಲಾವಸ್ಥೆಯನ್ನು ಪರಿಗಣಿಸಿ, ಕಾರ್ಮಿಕರ ಹಿತದೃಷ್ಟಿಯಿಂದ ಬೆಳಗಾವಿಯಲ್ಲಿ 100 ಹಾಸಿಗೆಗಳ ಇಎಸ್‍ಐಸಿ ಆಸ್ಪತ್ರೆ ನಿರ್ಮಿಸಲು ಅರ್ಹತೆ ಹೊಂದಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಭೂಪೇಂದರ್ ಯಾದವ್ ಅವರು ಪತ್ರದ ಮೂಲಕ ಉತ್ತರ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹೇಳಿದರು.

ಗುರುವಾರ ಅ.27 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ದಿನಾಂಕ 04.08.2022 ರಂದು ರಾಜ್ಯಸಭೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಬೆಳಗಾವಿಯಲ್ಲಿ 100 ಹಾಸಿಗೆಗಳ ಹೊಸ ಆಸ್ಪತ್ರೆಯ ನಿರ್ಮಾಣದ ಕುರಿತು ಪ್ರಸ್ತಾಪಿಸಲಾಗಿತ್ತು. ಅದಕ್ಕೆ ಸಚಿವರು ಪತ್ರದ ಮೂಲಕ ಉತ್ತರ ನೀಡುವುದಾಗಿ ತಿಳಿಸಿದ್ದರು.

ಆ ಹಿನ್ನೆಲೆಯಲ್ಲಿ ಸಂಸದ ಈರಣ್ಣ ಕಡಾಡಿ ಅವರಿಗೆ ಪತ್ರದ ಮೂಲಕ ಉತ್ತರಿಸುತ್ತಾ 94,636 ಕಾರ್ಮಿಕರು ಕಾರ್ಮಿಕ ವಿಮಾ ನಿಗಮದಡಿ ನೊಂದಣಿಯಾಗಿದ್ದಾರೆ. ಇಎಸ್‍ಐಸಿ ಮಾನದಂಡಗಳ ಆಧಾರದ ಮೇಲೆ ಬೆಳಗಾವಿಯಲ್ಲಿ 100 ಹಾಸಿಗೆಗಳ ಇಎಸ್‍ಐಸಿ ಸ್ಥಾಪಿಸಲು ಅರ್ಹತೆ ಹೊಂದಿದೆ ಎಂದು ಆಸ್ಪತ್ರೆಯ ನಿರ್ಮಾಣಕ್ಕೆ ಪೂರಕವಾಗಿ ಸಕಾರಾತ್ಮಕವಾಗಿ ಕೇಂದ್ರ ಸಚಿವರು ಉತ್ತರ ನೀಡಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

ಕರ್ನಾಟಕದ ಬೆಂಗಳೂರಿನಲ್ಲಿ ಎರಡು, ಕಲಬುರಗಿಯಲ್ಲಿ ಒಂದು ಇಎಸ್‍ಐಸಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿವೆ. ಇತ್ತೀಚೆಗೆ ಉಡುಪಿ ಜಿಲ್ಲೆಯನ್ನು ಈ ಪಟ್ಟಿಗೆ ನೂತನವಾಗಿ ಸೇರ್ಪಡೆ ಮಾಡಲಾಗಿದೆ. ಆದರೆ ಬಹುಕಾಲದ ಬೇಡಿಕೆಯಾದ ಉತ್ತರ ಕರ್ನಾಟಕದ ಮುಖ್ಯ ಕೇಂದ್ರವಾಗಿರುವ ಬೆಳಗಾವಿಗೆ ಇಎಸ್‍ಐಸಿ ಆಸ್ಪತ್ರೆಯ ನಿರ್ಮಾಣಕ್ಕಾಗಿ ಬೇಡಿಕೆ ಇದ್ದರೂ ಅನುಷ್ಠಾನವಾಗಿಲ್ಲ. ಕಳೆದ 8 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದದಲ್ಲಿ ಇಎಸ್‍ಐಸಿ ಆಸ್ಪತ್ರೆಗಳು ಬಹಳಷ್ಟು ಪ್ರಗತಿಯನ್ನು ಹೊಂದಿದ್ದು ರಾಜ್ಯ ಸರ್ಕಾರಗಳಿಂದ ನಡೆಸಲ್ಪಡುವ ಗುಜರಾತ, ಉತ್ತರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿನ ಇಎಸ್‍ಐಸಿ ಆಸ್ಪತ್ರೆಗಳನ್ನು ಕೇಂದ್ರ ಸರ್ಕಾರ ತೆಗೆದುಕೊಂಡು ಉತ್ತಮ ಆರೋಗ್ಯ ಸೇವೆಗಳನ್ನು ನೀಡುತ್ತಿದೆ ಎಂದರು.

ಬೆಳಗಾವಿಯ ಇಎಸ್‍ಐಸಿ ಆಸ್ಪತ್ರೆಯನ್ನು ಎಲ್ಲ ವೈದ್ಯಕೀಯ ಸೌಲಭ್ಯಗಳೊಂದಿಗೆ 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಮತ್ತು ಅದರ ನಿರ್ವಹಣೆಯನ್ನು ಕೇಂದ್ರ ಸರಕಾರ ತೆಗೆದುಕೊಂಡು ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವ ನಿರ್ಧಾರವನ್ನು ಇದೇ ಅಕ್ಟೋಬರ 29 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಭೆಯಲ್ಲಿ ಘೋಷಣೆ ಮಾಡಿ ಕಿತ್ತೂರು ಕರ್ನಾಟಕದ ಜನತೆಗೆ ಸಿಹಿಸುದ್ದಿ ನೀಡಬೇಕಾಗಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಭೂಪೇಂದರ್ ಯಾದವ್ ಅವರನ್ನು ಸಂಸದ ಈರಣ್ಣ ಕಡಾಡಿ ಆಗ್ರಹಿಸಿದ್ದಾರೆ ಮತ್ತು ಇದಕ್ಕೆ ಪೂರಕವಾಗಿ ಉತ್ತರ ನೀಡಿದ ಕೇಂದ್ರ ಸಚಿವರನ್ನು ಕಿತ್ತೂರು ಕರ್ನಾಟಕ ಜನತೆ ಪರವಾಗಿ ಸಂಸದರು ಅಭಿನಂದಿಸಿ ಧನ್ಯವಾದ ತಿಳಿಸಿದ್ದಾರೆ.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group