ಸತ್ಯ ಜ್ಞಾನದಿ ಆತ್ಮ ಜ್ಯೋತಿ ಬೆಳಗಲಿ – ರಾಜಯೋಗಿನಿ ಸುಧಾ ಅಕ್ಕನವರು

Must Read

ಮುನವಳ್ಳಿ: ಬೆಳಕಿನ ಹಬ್ಬವೆಂದೇ ಪ್ರಸಿದ್ಧವಾಗಿರುವ ದೀಪಾವಳಿ ಹಬ್ಬ ವಿಶೇಷತೆಯಿಂದ ಕೂಡಿದೆ. ಈ ಸಂದರ್ಭದಲ್ಲಿ ಮನೆ, ವ್ಯಾಪಾರ ಮಳಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಸುಣ್ಣ ಬಣ್ಣಗಳಿಂದ ಅಲಂಕರಿಸಿ ಶೃಂಗರಿಸುತ್ತಾರೆ. ತದ ನಂತರ ಪೂಜಾ ಕಾರ್ಯ ಕೈಗೊಂಡು ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸುತ್ತಾರೆ. ತಮಸೋಮಾ ಜ್ಯೋತಿರ್ಗಮಯ. ಸತ್ಯ ಜ್ಞಾನದ ಆತ್ಮಜ್ಯೋತಿಯು ಬೆಳಗಲಿ. ಆಚರಿಸೋಣ ನಾವೆಲ್ಲ ಸತ್ಯ ಸತ್ಯ ದೀಪಾವಳಿ. ಜಗದ ಅಜ್ಞಾನ ಅಂಧಕಾರವು ತೊಲಗಲಿ ಜ್ಞಾನ ಪ್ರಕಾಶದಿ ಜೀವನವು ಹೊಳೆಯಲಿ.ದೇಹವೆಂಬ ಪ್ರಣತಿಯಲ್ಲಿ ಆತ್ಮವೆಂಬ ಚೇತನ ಜ್ಯೋತಿಯು ಸುಖ-ಶಾಂತಿ,ಆನಂದ ಪವಿತ್ರತೆ ಜ್ಞಾನ. ಶಕ್ತಿಯಿಂದ ಕೂಡಿರುವ ಚೈತನ್ಯಪುಂಜವಾಗಿದೆ.ಭಕ್ತಿ, ಪೂಜೆ, ಸತ್ಸಂಗ, ತ್ಯಾಗ, ವೈರಾಗ್ಯದ ಬಲದಿಂದ ಇದರಲ್ಲಿರುವ ಅವಗುಣಗಳನ್ನು ದೂರ ಮಾಡಿ ಸದ್ಗುಣಗಳನ್ನು ತುಂಬಿದರೆ ಆತ್ಮವೂ ಚೊಕ್ಕ ಬಂಗಾರದಂತೆ ಪ್ರಜ್ವಲಿತವಾಗಿ ಆತ್ಮಬಲ, ಮನೋಬಲ.ಜ್ಞಾನಬಲ, ಬುದ್ದಿಬಲ ವೃದ್ಧಿಯಾಗುತ್ತದೆ”ಎಂದು ಸವದತ್ತಿಯ ರಾಜಯೋಗಿನಿ ಸುಧಾ ಅಕ್ಕನವರು ದೀಪಾವಳಿ ಆಚರಣೆಯ ಮಹತ್ವವನ್ನು ಕುರಿತು ತಿಳಿಸಿದರು.

ಅವರು ಮುನವಳ್ಳಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸೇವಾಕೇಂದ್ರದಲ್ಲಿ ದೀಪಾವಳಿ ಆಚರಣೆಯ ಕಾರ್ಯಕ್ರಮದ ಸತ್ಸಂಗದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಹಿರಿಯ ಸತ್ಸಂಗಿಗಳಾದ ಗಂಗಾಧರ ಗೋರಾಬಾಳ, ಸಂಚಾಲಕರಾದ ರಾಜಯೋಗಿನಿ ಗೀತಾ ಅಕ್ಕನವರು, ಲಕ್ಷ್ಮೀ ವೇಷಭೂಷಣ ಧರಿಸಿದ ಶಿವಾನಿ ವಗ್ಗಯ್ಯಗೋಳ, ಸರಸ್ವತಿ ವೇಷಭೂಷಣದಲ್ಲಿ ಅಪೇಕ್ಷಾ ಯಲಿಗಾರ ಬಾಲಕಿಯರು ಉಪಸ್ಥಿತರಿದ್ದರು.

ಒಂದು ಪಣತೆಯಲ್ಲಿರುವ ದೀಪವು ಅಮವಾಸೆಯ ಘೋರ ಕತ್ತಲನ್ನು ಕಳೆಯುವಂತೆ ಇಂಥಹ ಅನೇಕ ದೀಪಗಳಿಂದ ದೀಪಮಾಲೆಯಾಗಿ ಎಲ್ಲೆಡೆ ಪ್ರಕಾಶವೇ ಪ್ರಕಾಶ ಇದು ಅಧ್ಯಾತ್ಮದ ಶಕ್ತಿ. ಮಾನವ ಆತ್ಮದಲ್ಲಿ ಅಗಾಧವಾದ ಶಕ್ತಿ ಅಡಕವಾಗಿದೆ.ಅದು ಅಧ್ಯಾತ್ಮದ ಚಿಂತನೆಗಳಿಂದ ಸಾಧ್ಯ ಎಂದು ಗಂಗಾಧರ ಗೋರಾಬಾಳ ತಿಳಿಸಿದರು.

ಮಾನವೀಯ ತನುವಿನ ಆಧಾರ ಪಡೆದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮೂಲಕ ಮಾನವಾತ್ಮರ ಆತ್ಮ ಜ್ಯೋತಿಯನ್ನು ಪರಮಾತ್ಮನು ಬೆಳಗಿಸುತ್ತಿದ್ದಾನೆ ಎಂದು ಸಂಚಾಲಕರಾದ ರಾಜಯೋಗಿನಿ ಗೀತಾ ಅಕ್ಕನವರು ಪ್ರಾಸ್ತಾವಿಕ ನುಡಿಗಳಲ್ಲಿ ದೀಪಾವಳಿ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಬಿ.ಕೆ.ಕುಂದಿಲಮ್ಮ, ಯಲಿಗಾರ, ನೀಲಮ್ಮ ಬಟಕುರ್ಕಿ, ಶರಣೆ ಇಂದಿರಾ ಕದಂ, ಸಂಗಮ್ಮ ಬೆಣ್ಣಿ, ಗಂಗಮ್ಮ ವಗ್ಗಯ್ಯಗೋಳ, ಬಿ.ಕೆ.ಸಂಗಮೇಶ, ಮಡಿವಾಳೇಶ್ವರ ಗೋಮಾಡಿ, ಬಸನಗೌಡ ಹುಲಿಗೊಪ್ಪ, ಮಂಜುನಾಥ ಭಂಡಾರಿ, ವೈ.ಬಿ.ಕಡಕೋಳ ಸೇರಿದಂತೆ ಸತ್ಸಂಗದ ಸದ್ಭಕ್ತರು ಉಪಸ್ಥಿತರಿದ್ದರು.

ರಾಜಯೋಗಿನಿ ಗೀತಾ ಅಕ್ಕನವರು ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಭಂಡಾರಿ ವಂದಿಸಿದರು.

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group