“ಪುನೀತ” ನಿಗೊಂದು ನಮನ
ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ
ಈ ಜಗದಲಿ ಕಾಣೋ
ಪುನೀತ ನಿನ್ನ ಕಳಕೊಂಡ ಮ್ಯಾಲ
ಮತ್ತೆ ಸಿಗುವಿಯೇನೋ ತಮ್ಮಾ
ಮರಳಿ ಬರುವಿಯೇನೋ/ಪ/
46 ವರ್ಷದಿಂದ ನಟನೆಯ ಮಾಡಿ
ಜಗದಾಗ ಬೆಳೆದೆಲ್ಲೋ
ಹುಟ್ಟಿಬಂದು ನೀ ಮನುಜ ಕುಲಕ
ಎಷ್ಟು ಖುಷಿಯ ಕೊಟ್ಟೆಯಲ್ಲೋ
ಜನಸೇವೆಗೆ ಶ್ರಮಿಸಿದ ಪುನೀತನ ಬದುಕು ಅಪೂರ್ಣ ಆಯಿತಲ್ಲೋ
ತಾನು ಕಟ್ಟಿಕೊಂಡ ಆಸೆ ಕನಸೆಲ್ಲಾ
ನುಚ್ಚುನೂರಾಯ್ತಲ್ಲೋ
ಅನಾಥಾಶ್ರಮ ವೃದ್ಧಾಶ್ರಮಕ್ಕೆ ಕಡಿವಾಣ ಬಿತ್ತಲ್ಲೋ, ಶಕ್ತಿಧಾಮಕೆ ನೆಲೆಯಿಲ್ಲದಾಯಿತಲ್ಲೋ//೧/
ಬಡಜೀವಗಳ ಸೇವೆಗಾಗಿ ನಿಂತೆ ನೀ
ಬಾಳ ಕರುಣಿಯಂತ…..
ಕಣ್ಣು ಕೊಟ್ಟು ನಾಲ್ಕು ಕುರುಡ
ಜೀವಕ ಬೆಳಕ ಆದಿಯಂತ
ಕಲಿಕಾಲದಾಗ ಕೇಡುಗಾಲಕಂತ
ಈ ಸಾವು ನಿನಗೇಕೆ ಬಂತ
ಮುದುಕರೆನ್ನದೆ, ಯುವಕರೆನ್ನದೆ
ಜೀವ ಹಿಂಡಿ ಬಿಟ್ಟಿತ
ನಿನ್ನ ಕುಟುಂಬದ ಸುಖಃ ಶಾಂತಿ
ನುಚ್ಚುನೂರಾಯಿತ ಜನರಿಗೆ
ದಿಕ್ಕುತೋಚದಾಯಿತ /೨/
ಅಪ್ಪು ಹೃದಯಕ ಹಾರ್ಟ್ಅಟ್ಯಾಕ್
ಅಂತಾ ಬರಸಿಡಿಲು ಬಡಿಯಿತಲ್ಲಾ
ವಾಕಿಂಗ್ ಜಿಮ್ ಯೋಗ ನಿಯಮ
ನಿನ್ನ ಉಳಿಸಿಕೊಳ್ಳಲಿಲ್ಲವಲ್ಲಾ
ಕಷ್ಟವೆಂದು ಕೈಚಾಚಿದ ಜನಕೆ
ಆದೆಯಲ್ಲೋ ನೀ ಪರಮಾತ್ಮ
ಬೀದಿಮಕ್ಕಳ ಶಿಕ್ಷಣಕಾದೆ ಜ್ಞಾನದಾತ
ಗುರುಹಿರಿಯರಿಗೆ ಬಾಗಿನಮಿಸುವ ರಾಜರತ್ನಾ
ಕೋಟಿ ಹೃದಯಗಳ ಕೋಟ್ಯಧಿಪತಿ
ಯುವರತ್ನಾ…../೩/
ನೂರಲ್ಲಾ ಸಾವಿರಲ್ಲಾ ಲಕ್ಷಾಂತರ ಜನ
ಧಾವಿಸಿ ಬಂದರಲ್ಲೋ
ಹಾದ್ಯಾಗ ಬೀದ್ಯಾಗ ರಾಜ್ಯದ ತುಂಬೆಲ್ಲಾ ಸಾವಿಗೆ ಮರುಗಿದರಲ್ಲೋ
ಎಲ್ಲಾರೂ ಇದ್ದೂ ನಿನ್ನ ಉಳಿಸಿಕೊಳ್ಳದಂತ ಸ್ಥಿತಿಯು ಬಂತಲ್ಲೋ
ನೀ ಮಾಡಿದ ಪುಣ್ಯ ನಿನ್ನ ದೇವರಿಗೆ
ಕಾಣದಾಯಿತಲ್ಲೋ
ಅಭಿಮಾನಿಗಳ ಆಕ್ರಂದನ ಮುಗಿಲು
ಮುಟ್ಟಿತಲೋ,, ಯುವಶಕ್ತಿಗಳಲ್ಲಿಯ ಪವರ್ ಕಾಣದಾಯಿತಲ್ಲೋ /೪/
ತಂದೆ ತಾಯಿಯ ಪ್ರೇಮದ ಕಾಣಿಕೆ
ಭಾಗ್ಯವಂತ ಕಂದ ನೀನು
ಭಕ್ತಪ್ರಹ್ಲಾದ , ಅಪ್ಪು, ಆಕಾಶ,
ವೀರಕನ್ನಡಿಗ , ನೀನು
ಪೃಥ್ವಿ ಯ ಮೇಲಿನ ಚಕ್ರವ್ಯೂಹ
ಭೇದಿಸಿದ ರಣವಿಕ್ರಮ, ನೀನು
ಅರಸು, ಅಜೇಯ, ರಾಜಕುಮಾರ್,
ಮಿಲನ,ದ ದೊಡ್ಮನೆ ಹುಡುಗ ನೀನು
ಕೈಮುಗಿದು ಕೇಳತೇವು ಮರಳಿ
ಹುಟ್ಟಿ ಬಾ ಪುನೀತಾ
ಜನಮನದ ನಗುವಿನ ಶ್ರೀಮಂತಾ/೫/
ಮಹಾದೇವಿ ಬ. ಬೆಳಕೂಡ, ಕಾಕತಿ