ತಳವಾರ, ಪರಿವಾರ ಸಮಯದಾಯಗಳನ್ನು ಎಸ್ಟಿಗೆ ಸೇರಿಸಿದ್ದು ಸ್ವಾಗತಾರ್ಹ – ಶರಣಪ್ಪ

Must Read

ಸಿಂದಗಿ; ತಳವಾರ ಸಮುದಾಯದ ಬಹುದಿನಗಳ ಬೇಡಿಕೆಯಾಗಿದ್ದ ತಳವಾರ, ಪರಿವಾರ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೈ ಬಿಡುವ ಆದೇಶ ಹೊರಡಿಸುವ ಮೂಲಕ ನಮ್ಮ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕೆಂಬ ಹಲವು ದಿನಗಳ ಬೇಡಿಕೆ ಈಡೇರಿಸಿದ ಸರಕಾರಕ್ಕೆ ಅಭಿನಂದನೆಗಳನ್ನು ಸಲ್ಲಸುತ್ತೇವೆ ಎಂದು ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಶರಣಪ್ಪ ಕಣಮೇಶ್ವರ ಹೇಳಿದರು.

ತಾಲೂಕಿನ ದೇವಣಗಾಂವ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಕಳೆದ ಸಿಂದಗಿ ವಿಧಾನಸಭಾ ಉಪಚುನಾವಣೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಳವಾರ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡುವದಾಗಿ ಭರವಸೆ ನೀಡಿದ್ದರು.

ಅದೇ ರೀತಿ ನುಡಿದಂತೆ ನಡೆದು ನಮ್ಮ ಬೇಡಿಕೆ ಈಡೇರಿಸಿದ್ದಾರೆ ಆದ್ದರಿಂದ ಮುಂದಿನ ದಿನಗಳಲ್ಲಿ ಸದಾ ಬಿಜೆಪಿ ಸರಕಾರಕ್ಕೆ ಬೆಂಬಲ ನೀಡುತ್ತಾ ಸಿಂದಗಿ ಮತಕ್ಷೇತ್ರದಲ್ಲಿ ರಮೇಶ ಭೂಸನೂರ ಅವರನ್ನು ಬೆಂಬಲಿಸಿ ಇನ್ನೂ ಹೆಚ್ಚಿನ ಮತಗಳು ನಮ್ಮ ಸಮಾಜದಿಂದ ದೊರೆಯುವಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಈ ಮೀಸಲಾತಿ ನೀಡಿರುವದರಿಂದ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ, ನಿರುದ್ಯೋಗಿ ಯುವಕರಿಗೆ ಸಮಾಜಕ್ಕೆ ಒಳ್ಳೆಯದಾಗುವದಿಂದ ಬಸವರಾಜ ಬೊಮ್ಮಯಿ ಸರಕಾರಕ್ಕೆ ಮತ್ತೊಮ್ಮೆ ಅಭಿನಂದಿಸಿದರು.

ವೇ.ವೀರಭದ್ರಯ್ಯ ವಿರಕ್ತಮಠ, ಜಿಪಂ ಮಾಜಿಸದಸ್ಯ ಕಾಶಿನಾಥ ಗಂಗನಳ್ಳಿ, ಸಿದ್ದಾರಾಮ ಹಂಗರಗಿ, ಬಸವರಾಜ ತಾವರಖೇಡ, ವಿರುಪಾಕ್ಷಿ ಗಂಗನಳ್ಳಿ, ಪಂಚಾಕ್ಷರಿ ಖೇಳಗಿ, ವಿಠ್ಠಲ ಯರಗಲ್ಲ, ಪ್ರಕಾಶ ಗಂಗನಳ್ಳಿ, ದತ್ತಾತ್ರೇಯ ಸೊನ್ನ, ಸುರೇಶ ಗಂಗನಳ್ಳಿ, ಕಾಶಿನಾಥ ಕಲಬಾ, ಚಂದು ಧೂಳಬಾ, ರಮೇಶ ನಾಗಠಾಣ, ರಾಜು ಅತಾಪಿ, ರಮೇಶ ಸೋಮನಾಯಕ, ಗುರು ನಿಂಬಾಳ, ಜಗನ್ನಾಥ ಕಲಬಾ, ಭಾಗಣ್ಣ ನಾವಿ, ರಾಮಣ್ಣ ಕಲಬಾ, ಬಾಬು ನಾಗಾವಿ, ಶಿವಾನಂದ ಗಂಗನಳ್ಳಿ, ಸಿದ್ದಪ್ಪ ಹೆಗ್ಗಣದೊಡ್ಡಿ, ಶಿವಲಿಂಗ ಬಗಲಿ, ಶರಣು ಕಟ್ಟಿ, ಚಾಂದಸಾಬ ಅಡಾಡಿ ಇದ್ದರು.

ಇದೇ ಸಂದರ್ಭದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ, ಘೋಷಣೆ ಕೂಗಿ ಸಂಭ್ರಮಿಸಿದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group