ಸಿದ್ದರಾಮಯ್ಯ ಗೆ ನನ್ನ ಕ್ಷೇತ್ರ ಬಿಟ್ಟು ಕೊಡಲು ಸಿದ್ದ – ಶಾಸಕ ರಹೀಂಖಾನ್

0
340

ಬೀದರ – ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬೀದರ್ ನಗರ ಕ್ಷೇತ್ರ ಬಿಟ್ಟು ಕೊಡುತ್ತೆನೆ ಎಂಬುದಾಗಿ ಶಾಸಕ ರಹೀಂ ಖಾನ್ ಹೇಳಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಯವರ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಮಾಜಿ ಸಿಎಂ ಸಿದ್ದರಾಮಯ್ಯಗೆ ‌ಕ್ಷೇತ್ರ ಬಿಟ್ಟು ಕೊಡಲು ನಾನು ರೆಡಿ ಎಂದರು.

ಸಿದ್ದರಾಮಯ್ಯ ಯಾವುದೇ ಕ್ಷೇತ್ರದಲ್ಲಿ ನಿಂತರೂ ಗೆಲ್ತಾರೆ, ಬೀದರ್ ನಲ್ಲಿ ನಿಂತರೂ ಗೆಲ್ತಾರೆ. ನಮ್ಮ ಕ್ಷೇತ್ರದಲ್ಲಿ ನಿಲ್ಲಿ ಎಂದು ಆಹ್ವಾನ ಇದೆ. ಸಿದ್ದರಾಮಯ್ಯನವರು ಬೀದರ್ ನ ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.

ಡಾ. ಪುನೀತ್ ರಾಜ್‍ಕುಮಾರ್ ಕರ್ನಾಟಕ ರತ್ನ ಕಾರ್ಯಕ್ರಮವನ್ನು ಬಿಜೆಪಿಯವರು ಅವ್ಯವಸ್ಥೆಯಾಗಿ ಮಾಡಿದ್ದಾರೆ. ಇನ್ನೂ ಉತ್ತಮವಾಗಿ ಮಾಡಬಹುದಿತ್ತು. ತಮ್ಮ ರಾಜಕೀಯ‌ ಲಾಭ ಪಡೆದುಕೊಳ್ಳಲು ಬಿಜೆಪಿ ಈ ಕಾರ್ಯಕ್ರಮ ಮಾಡಿದೆ ಎಂದು ಖಂಡ್ರೆ ಹೇಳಿದರು.

ಬೆಂಗಾಲ್ ನಲ್ಲಿ ಸೇತುವೆ ಕುಸಿತ ದುರಂತದಲ್ಲಿ 150 ಜನ ಮೃತ ಪಟ್ಟಿದ್ದಾರೆ. ಇದು ಕಳೆಪೆಯಾಗಿದೆ ಇದಕ್ಕೆ ನೇರ ಹೊಣೆ‌ ಪಶ್ಚಿಮ ಬೆಂಗಾಲ್ ಸಿಎಂ ಎಂದು ಪ್ರಧಾನಿಗಳು ಹೇಳಿದರು ಆದರೆ ಅವರು ಆತ್ಮ ಅವಲೋಕನ ಮಾಡಿಕೊಳ್ಳಲಿ ಗುಜರಾತ್ ನಲ್ಲಿ ನಡೆದ ಸೇತುವೆ ಕುಸಿತದ  ಶಾಪ ಯಾರಿಗೆ ತಟ್ಟಬೇಕು ಎಂದು ಅವರು ಪ್ರಶ್ನೆ ಮಾಡಿದರು.


ವರದಿ: ನಂದಕುಮಾರ ಕರಂಜೆ, ಬೀದರ