ದಿ.೫ ರಂದು ಸಮೀರವಾಡಿ ಕಬ್ಬು ಬೆಳೆಗಾರರ ಸಭೆ

Must Read

ಸಭೆಯಲ್ಲಿ ರೈತರು ಪಾಲ್ಗೊಳ್ಳಲು ಕರೆ

ಮೂಡಲಗಿ: ಸಮೀಪದ ಸೈದಾಪೂರ ಸಮೀರವಾಡಿಯ ಶ್ರೀ ಶಿವಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ನ. ೫ ರಂದು ಬೆಳಗ್ಗೆ ೧೧ ಗಂಟೆಗೆ ರೈತರ ವಿಶೇಷ ಸರ್ವಸಾಧಾರಣ ಸಭೆ ಕರೆಯಲಾಗಿದೆ.

ಸಮೀರವಾಡಿಯ ಕಬ್ಬು ಬೆಳೆಗಾರರ ಸಂಘ ಹಾಗೂ ಗೋದಾವರಿ ಸಕ್ಕರೆ ಕಾರ್ಖಾನೆಯವರು ಸೇರಿ ನ. 2 ರಂದು ಜರುಗಿದ ಸಭೆಯಲ್ಲಿ ಕಬ್ಬಿನ ಬೆಲೆ ಕುರಿತು ಚರ್ಚಿಸಿ 2021-22 ನೇ ಸಾಲಿನ 2 ನೇ ಕಂತಿನ ಹಣ ರೂ.62 ಹಾಗೂ 2022-23 ನೇ ಸಾಲಿನ ಮೊದಲ ಕಂತು ರೂ.2800 ನೀಡುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ನ. 3 ರಂದು ಕೆಲವು ರೈತರು ಅಸಮಾಧಾನಗೊಂಡು ಈ ಒಪ್ಪಂದಕ್ಕೆ ಸಮ್ಮತಿಸದೇ ಹೆಚ್ಚಿನ ಬೇಡಿಕೆಯ ದರ ಘೋಷಣೆಯಾಗುವವರೆಗೆ ಕಾರ್ಖಾನೆ ಪ್ರಾರಂಭ ಮಾಡಬಾರದೆಂದು ಪಟ್ಟು ಹಿಡಿದಿದ್ದಾರೆ. ಒಂದು ಕಡೆ ಒಪ್ಪಂದ, ಮತ್ತೊಂದು ಕಡೆ ವಿರೋಧದಿಂದ ರೈತರಲ್ಲಿ ಉಂಟಾದ ಗೊಂದಲ ನಿವಾರಣೆಗೆ, ಎಲ್ಲ ರೈತರ ಸಲಹೆ ಸೂಚನೆ ಆಲಿಸಲು ಸಮೀರವಾಡಿ ಕಾರ್ಖಾನೆಗೆ ಕಬ್ಬು ಪೂರೈಸುವ ಎಲ್ಲ ರೈತರು ಈ ಸಭೆಯಲ್ಲಿ ಭಾಗವಹಿಸಿ ಅಭಿಪ್ರಾಯ ತಿಳಿಸಬೇಕೆಂದು ಸೈದಾಪೂರ-ಸಮೀರವಾಡಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ ಕಾರ್ಯದರ್ಶಿ ರಂಗನಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group