spot_img
spot_img

ಎನ್‍ಪಿಎಸ್ ನೌಕರರ ಹಳೇ ಪಿಂಚಣಿ ಮುಂದುವರೆಸುವಂತೆ ಆಗ್ರಹಿಸಿ ಪ್ರತಿಭಟನೆ

Must Read

- Advertisement -

ಸಿಂದಗಿ: 01.04.2006 ರಿಂದ ಸರ್ಕಾರಿ ಸೇವೆಗೆ ಸೇರಿರುವರಾಷ್ಟ್ರೀಯ ಪಿಂಚಣಿ ಯೋಜನೆಗೆ ಒಳಪಡುವ ನೌಕರರ ಸಂಧ್ಯಾಕಾಲದ ಬದುಕಿಗೆ ಭದ್ರತೆಯನ್ನು ತಂದುಕೊಡುವ ನಿಟ್ಟಿನಲ್ಲಿ ಹಾಗೂ ಈಗಾಗಲೇ ಮರಣ ಹೊಂದಿರುವ ಎನ್‍ಪಿಎಸ್ ನೌಕರರ ಅವಲಂಬಿತ ಕುಟುಂಬಗಳಿಗೆ ನ್ಯಾಯ ಒದಗಿಸುವ ಹಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯ ತನದಿಂದ ನೌಕರರ ಇಳಿವಯಸ್ಸಿನ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಾಗಿ ರೂಪಿಸಿದ ನಿಶ್ಚಿತ ಪಿಂಚಣಿಯನ್ನು ಕೇಂದ್ರ ಸರ್ಕಾರವು ದಿನಾಂಕ 01/01/2004 ರ ನಂತರ ಹಾಗೂ ತಮ್ಮ ರಾಜ್ಯ ಸರ್ಕಾರವು ದಿನಾಂಕ 01/04/2006ರ ನಂತರ ಸರ್ಕಾರಿ ಸೇವೆಗೆ ನೇಮಕಗೊಳ್ಳುವ ನೌಕರರಿಗೆ ನಿಶ್ಚಿತ ಪಿಂಚಣಿ ಪದ್ಧತಿಯನ್ನು ರದ್ದು ಮಾಡಿತು  ಅದನ್ನು ಮುಂದುವರೆಸುವಂತೆ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಶೀಲ್ದಾರ ನಿಂಗಣ್ಣ ಬಿರಾದಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಡಾ. ಅಂಬೇಡ್ಕರ ವೃತ್ತದಲ್ಲಿ ಜಮಾಯಿಸಿದ ಎನ್.ಪಿಎಸ್ ನೌಕರರು ರಸ್ತೆಯುದ್ದಕ್ಕು ತಮ್ಮ ಹಕ್ಕೊತ್ತಾಯಗಳನ್ನು ಕೂಗುತ್ತ ತಹಶೀಲ್ದಾರ ಕಾರ್ಯಾಲಯಕ್ಕೆ ತಲುಪಿ ಪ್ರತಿಭಟಿಸಿದರು.

ನಂತರ ಕ.ರಾ. ಎನ್‍ಪಿಎಸ್ ನೌಕರರ ಸಂಘದ  ರಾಜ್ಯಾಧ್ಯಕ್ಷ ಶಾಂತಾರಾಮ್ ತೇಜ್ ಮಾತನಾಡಿ,  ಪಿಂಚಣಿ ಯೋಜನೆಯಡಿ ನೌಕರರಿಗೆ ಪಿಂಚಣಿ ನೀಡುವ ಉದ್ದೇಶಕ್ಕಾಗಿ ನೌಕರನ ಶೇ% 10 ರಷ್ಟನ್ನು ಕಟಾವುಗೊಳಿಸುತ್ತಿದೆ ಹಾಗೂ ಸರ್ಕಾರವು ಅದಕ್ಕೆ ಸಮಾನವಾದ ಮೊತ್ತವನ್ನು ವಂತಿಗೆ ರೂಪದಲ್ಲಿ ನೀಡುತ್ತದೆ, ಹಾಗೆ ಶೇಖರಣೆಗೊಳ್ಳುವ ಮೊತ್ತವನ್ನು ವಿವಿಧ ಖಾಸಗಿ ಹಣಕಾಸಿನ ಸಂಸ್ಥೆಗಳ ಮೂಲಕ ಷೇರು ಪೇಟೆಯಲ್ಲಿ ತೊಡಗಿಸಲಾಗುತ್ತದೆ. 30-35 ವರ್ಷಗಳ ನಂತರ ಅದರಿಂದ ಬಂದ ಲಾಭದಲ್ಲಿ ಈ ಹಣವನ್ನು ಉಪಯೋಗಿಸಿದ ಕಂಪನಿಗಳು ನೌಕರರಿಗೆ ಪಿಂಚಣಿಯನ್ನು ನೀಡುತ್ತವೆ. ಇದಕ್ಕಾಗಿ ಯಾವುದೇ ನಿರ್ದಿಷ್ಟ ಕಾನೂನುಗಳನ್ನು ರಚಿಸದೆ, ನೌಕರರ ಹಾಗೂ ಸರ್ಕಾರವು ತೊಡಗಿಸಿದ ಹಣಕ್ಕೆ ಯಾವುದೇ ಭದ್ರತೆ ನೀಡದೆ, ಈ ಹೊಸ ಪಿಂಚಣಿ ಯೋಜನೆಯನ್ನು ಘೋಷಿಸಲಾಗಿದೆ. ಸದರಿ ಕಾಯಿದೆಯನ್ವಯ ನೌಕರರ ವಂತಿಗೆ ಹಣಕ್ಕೆ ಯಾವುದೇ ಕನಿಷ್ಠ ಭದ್ರತೆಯನ್ನು ನೀಡಿರುವುದಿಲ್ಲ. ಇದು ನೌಕರರ ಸಂಧ್ಯಾಕಾಲದ ಜೀವನವನ್ನು ಅಭದ್ರತೆಗೆ ತಳ್ಳಲು ಕಾರಣವಾಗುತ್ತ. ಅಲ್ಲದೇ ನೂತನ ಪಿಂಚಣಿ ವ್ಯವಸ್ಥೆಯು ಸರ್ಕಾರ ಹಾಗೂ ಸರ್ಕಾರಿ ನೌಕರರ ನಡುವೆ ಇರುವ ಸಂಬಂಧವನ್ನು ದೂರ ಮಾಡಿದೆ.

- Advertisement -

ಪ್ರಸ್ತುತ ಜಾರಿಗೊಳಿಸಿರುವ ಈ ಯೋಜನೆಯು ಪ್ರಪಂಚದ ಅನೇಕ ದೇಶಗಳಲ್ಲಿ ವಿಫಲಗೊಂಡಿರುವ ಪಿಂಚಣಿ ಯೋಜನೆಯಾಗಿದ್ದು, ಫ್ರಾನ್ಸ್, ಸ್ಪೇನ್, ಗ್ರೀಸ್, ಡೆನ್ಮಾರ್ಕ್ ಅಮೆರಿಕಾ ಮತ್ತು ಬ್ರಿಟನ್‍ನಲ್ಲಿ ಈ ಯೋಜನೆಯಡಿ ಹೂಡಿರುವ ನೌಕರರ ಹಣವು 2008ರಲ್ಲಿ ಉಂಟಾದ ಷೇರು ಮಾರುಕಟ್ಟೆ ಕುಸಿತದಿಂದ ಸಂಪೂರ್ಣ ನಷ್ಟ ಹೊಂದಿರುತ್ತವೆ. ನೌಕರರ ಹಾಗೂ ಜನ ಸಾಮಾನ್ಯರ ಹಣವನ್ನು ಹೂಡಿಕೆ ಮಾಡಿದ್ದ ಕಂಪನಿಗಳು ದಿವಾಳಿಯಾಗಿವೆ. (ಉದಾ: ಅಮೆರಿಕದ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್) ಇದರಿಂದಾಗಿ ಅಲ್ಲಿನ ನೌಕರರು ಪಿಂಚಣಿ ವಿಮೆ ಹಣ ಹಾಗೂ ಉಳಿತಾಯದ ಹಣವನ್ನು ಸಂಪೂರ್ಣವಾಗಿ ಕಳೆದುಕೊಂಡು ನಿರ್ಗತಿಕ ರಾಗಿದ್ದಾರೆ. ಇದೆಲ್ಲವನ್ನು ತಿಳಿದಿದ್ದರೂ ಸರ್ಕಾರಗಳು ತಮ್ಮ ನೌಕರರನ್ನು ಅನಿಶ್ಚಿತ ಸ್ಥಿತಿಗೆ ನೂಕುತ್ತಿರುವುದು ಒಂದು ವಿಪರ್ಯಾಸದ ಸಂಗತಿಯಾಗಿದೆ.

ಆಕ್ಟೋಬರ್ 3 2018 ರಂದು ಅಕ್ಟೋಬರ್-3, 2018 ರಂದು ರಾಜ್ಯದ ಎಲ್ಲಾ ಜಿಲ್ಲೆಯೂ ಸೇರಿದಂತೆ “ರಕ್ತ ಕೊಟ್ಟೇವು ಪಿಂಚಣಿ ಬಿಡೇವು” ಹೋರಾಟದಲ್ಲಿ 20,250 ಸಾವಿರ ಯುನಿಟ್‍ಗಳಷ್ಟು ಸ್ವಯಂ ಪ್ರೇರಿತವಾಗಿ ರಕ್ತದಾನ ನೀಡುವ ಮೂಲಕ ನಮ್ಮ ಸಂಘಟನೆ ಸಾಮಾಜಿಕ ಕಳಕಳಿಯ ಹೋರಾಟಕ್ಕೆ ಮುನ್ನುಡಿ ಬರೆದಿರುವ ಹಿನ್ನೆಲೆಯಲ್ಲಿ ಎನ್‍ಪಿಎಸ್  ನೌಕರರ ನ್ಯಾಯೋಚಿತವಾದ ಬೇಡಿಕೆಯನ್ನು ಪರಿಗಣಿಸಿ, ಹಳೆಯ ಪಿಂಚಣಿ ಯೋಜನೆಯನ್ನೇ” ಮರುಸ್ಥಾಪಿಸುವಂತೆ ಆಗ್ರಹಿಸಿದರು.

ಅಲ್ಲದೇ ಡಿಸೆಂಬರ್ 10 ರಿಂದ ಆರಂಭವಾಗುವ ‘ಬೆಳಗಾವಿ ಚಳೆಗಾಲದ ಅಧಿವೇಶನದಲ್ಲಿ ಎನ್‍ಪಿಎಸ್ ರದ್ದತಿಗೊಳಿಸುವಂತೆ ಎಲ್ಲ ಶಾಸಕರಲ್ಲಿ ಮನವಿ ಮಾಡಿದರು.

- Advertisement -

ಈ ಸಂದರ್ಭದಲ್ಲಿ ಪ್ರಧಾನಕಾರ್ಯದರ್ಶಿ ನಾಗನಗೌಡ ಎಂ.ಎ, ಜಿಲ್ಲಾದ್ಯಕ್ಷ ಮಲ್ಲನಗೌಡ ಹಡಲಗೇರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಭೂಸನೂರ, ಪ್ರೌಡಾಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಆರ್ ಎಚ್ ಬಿರಾದಾರ, ಸಿಂದಗಿ, ದೇವರ ಹಿಪ್ಪರಗಿ ಎನ್‍ಪಿಎಸ್ ನೌ ಸಂಘದ ಅಧ್ಯಕ್ಷರಾದ  ಶಿವಕುಮಾರ ಕಲ್ಲೂರ ಅಧ್ಯಕ್ಷರು,ಕ ರಾ ಸ ದೇ ಹಿಪ್ಪರಗಿ. ರಮೇಶ ಚಟ್ಟರಕಿ, ಎ.ಎಚ್.ವಾಲಿಕಾರ, ಅನುದಾನಿತ ಪಿಂಚಣಿ ವಂಚಿತ ನೌಕರರ ಸಂಘದ ಅಧ್ಯಕ್ಷ ಅರುಣ ನಾಯ್ಕೋಡಿ, ಉರ್ದು ಸೋಸೈಟಿ ಸಂಘದ ಅಧ್ಯಕ್ಷ ಅಲ್ತಾಪ್ ಎಮ್ ಸಾಲೋಟಗಿ ದೈಹಿಕ ಶಿಕ್ಷಕರ ಸಂಘದ ಎಮ್ ಎಮ್ ಕೆಂಭಾವಿ, ಸುಭಾಸ ಸುಂಬಡ,  ರಾಯಪ್ಪ ಇವಣಗಿ, ಶಿವು ಉಮ್ಮರಗಿ, ಸೋಮೇಶ ಪಾಟೀಲ ಮಹಾಂತೇಶ ಬಾಗೇವಾಡಿ, ಪಿ ಎಸ್ ಅಗ್ನಿ ಸೇರಿದಂತೆ ಸಾವಿರರು ನೌಕರರು ಭಾಗಿಯಾಗಿದ್ದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group