ಖೂಬಾ ರಾಜಕೀಯದಲ್ಲಿ ಇರಲು ನಾಲಾಯಕ್ – ಈಶ್ವರ ಖಂಡ್ರೆ

Must Read

ಬೀದರ – ಕೇಂದ್ರ ಸಚಿವ ಭಗವಂತ್ ಖೂಬಾ ರಾಜಕೀಯದಲ್ಲಿ ಇರಲು ನಾಲಾಯಕ್ ಹಾಗೂ ಮಾಜಿ ಶಾಸಕ ಪ್ರಕಾಶ್ ಖಂಡ್ರೆ, ಬಿಜೆಪಿ ಮುಖಂಡ ಡಿಕೆ ಸಿದ್ರಾಮ್ ಇವರೆಲ್ಲ ರಾಜಕೀಯದಲ್ಲಿ ಇರಲು ನಾಲಾಯಕ್ ಎಂದು ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದರು.

ವಸತಿ ಮನೆ ಮಂಜೂರು ಮಾಡದಂತೆ ದೂರು ಕೊಟ್ಟ ಇವರು ರಾಜಕೀಯದಲ್ಲಿ‌ ಇರಲು ನಾಲಾಯಕ್ ಎಂದು ಅವರು ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತ ಹೇಳಿದರು.

ಬಿಜೆಪಿಯ ಕೇಂದ್ರದ ಸಚಿವ ಭಗವಂತ್ ಖೂಬಾ, ಡಿಕೆ ಸಿದ್ರಾಮ್, ಮಾಜಿ ಶಾಸಕ ಪ್ರಕಾಶ್ ಖಂಡ್ರೆ ಇವರೆಲ್ಲ ದೂರು ಕೊಟ್ಟಿದ್ದಾರೆ.ಇವರಿಗೆ ಮತ ಕೇಳಲು ನೈತಿಕತೆ ಇದೆಯಾ ಎಂದ ಅವರು, ಒಂದು ತಿಂಗಳ ಒಳಗಾಗಿ ಮನೆಗೆ ಮಂಜೂರಾದ ಕಂತು ನೀಡಬೇಕು.ನಾನು ಹಣ ಕೊಡಿಸದೆ ಇದ್ದರೆ ರಾಜಕೀಯಿಂದ ನಿವೃತ್ತಿಯಾಗುತ್ತೇನೆ.ಬಿಜೆಪಿ ಸರ್ಕಾರ ಬಂದು 3 ವರ್ಷವಾಗಿದೆ ಒಂದು ಮನೆ ಕೊಟ್ರಾ.ನಾವು ಸಾವಿರಾರು ಮನೆ ಕೊಟ್ಟಿದ್ದೇವೆ.ನಾನು ಭ್ರಷ್ಟಾಚಾರ ಮಾಡಿದ್ದೇನೆ ಎಂದರೆ ನಾನು ರಾಜೀನಾಮೆ ಕೊಡುತ್ತೇನೆ.ಇದು ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಪ್ರತಿಭಟನೆ ಮಾಡಿದ್ದೇವೆ ಎಂದು ಬೀದರ್ ನ ಭಾಲ್ಕಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group