Homeಸುದ್ದಿಗಳುಡಾ.ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಣೆ

ಡಾ.ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಣೆ

ಸಿಂದಗಿ: ಪ್ರತಿಯೊಂದು ಮಹಿಳೆಯರಿಗೂ ಕೂಡಾ ಮುಂದೆ ಬರಲು ಪ್ರತಿಯೊಂದು ಕ್ಷೇತ್ರದಲ್ಲಿ ಭಾಗವಹಿಸುವಂತೆ ಮಾಡಿರುವುದು ನಮ್ಮ ಸಂವಿಧಾನ ಇದನ್ನು ಉಳಿಸಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಂಗಮ ಸಂಸ್ಥೆಯ ಸಹ ನಿರ್ದೇಶಕರಾದ ಸಿಸ್ಟರ್ ಸಿಂತಿಯಾ ಡಿಮೆಲ್ಲೊರವರು ಹೇಳಿದರು.

ಪಟ್ಟಣದ ಸಂಗಮ ಸಂಸ್ಥೆಯಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ ರವರ ಪರಿನಿರ್ವಾಣ ದಿನದ ಅಂಗವಾಗಿ ಮಹಿಳೆಯರಿಗೆ ಉದ್ಯಮಶೀಲತಾಭಿವೃದ್ಧಿ ತರಬೇತಿ ಹಮ್ಮಿಕೊಳ್ಳಲಾಯಿತು ನಂತರ ಮಾತನಾಡಿದರು.

ವಿಜಯಪೂರ ಜಿಲ್ಲೆಯ ಜೆ.ಸಿ.ಐ ಅಧ್ಯಕ್ಷ ಎಸ್.ಬಿ ಪಾಟೀಲ್ ಮಾತನಾಡಿ, ಭಾರತದ ಸರಕಾರ ಹೇಗೆ ನಡೆಯಬೇಕು ಮತ್ತು ಪ್ರತಿಯೊಬ್ಬ ಪ್ರಜೆಗೂ ಸಮಾನವಾದ ನ್ಯಾಯ ಸಿಗಬೇಕು ಎಲ್ಲರಿಗೂ ಎಲ್ಲ ರಂಗದಲ್ಲಿ ಭಾಗವಹಿಸುವ ಅವಕಾಶ ಸಿಗಬೇಕು ತಾನು ಅನುಭವಿಸಿದ ಕಷ್ಟಗಳು ನಮ್ಮ ಮುಂದಿನ ಪೀಳಿಗೆ ಅನುಭವಿಸಬಾರದು ಎನ್ನುವ ಉದ್ದೇಶದಿಂದ ನಮಗೆಲ್ಲರಿಗೂ ಒಂದು ಗ್ರಂಥ ರಚನೆ ಮಾಡಿರುವ ಒಬ್ಬ ಶ್ರೇಷ್ಟ ವ್ಯಕ್ತಿ ಅವರೇ ನಮ್ಮ ಡಾ. ಬಿ.ಆರ್ ಅಂಬೇಡ್ಕರ್‍ರವರು ಇಹ ಲೋಕ ತ್ಯಜಿಸಿರುವುದನ್ನು ನಾವು ಪರಿನಿರ್ವಾಹಣ ದಿನ ಎಂದು ಕರೆಯತ್ತೇವೆ. ಈ ಶಬ್ದವನ್ನು ನಾವು ಶ್ರೇಷ್ಠ ವ್ಯಕ್ತಿಗೆ ಮಾತ್ರ ಬಳಸುತ್ತೇವೆ ಎಂದು ತಿಳಿಸಿದರು.

ಸಿಡಾಕ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಉದ್ಯಮಶೀಲತಾಭಿವೃದ್ಧಿ ತರಬೇತಿಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಸಿಡಾಕ್ ಸಂಸ್ಥೆಯ ಜಂಟಿ ನಿರ್ದೇಶಕರು ಸುಪ್ರಿತಾ ಬಳ್ಳಾರಿ ಇವರು ಮಾತನಾಡಿದರು.

ಸಿಡಾಕ್ ವಿಜಯಪೂರ ಸಂಸ್ಥೆಯ ತರಬೇತುದಾರರಾದ ಸರಸ್ವತಿ ಕ್ಯಾಡಿ, ಸ್ವ-ಸಹಾಯ ಸಂಘದ ಮಹಿಳೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದರು. ಕಾರ್ಯಕ್ರಮವನ್ನು  ಮಲಕಪ್ಪ ಹಲಗಿ ಇವರು ನಿರೂಪಿಸಿದರು, ಸರಸ್ವತಿ ಕ್ಯಾಡಿ  ಸ್ವಾಗತಿಸಿದರು, ರಾಜೀವ ಕುರಿಮನಿ  ಸಂವಿಧಾನದ ಪ್ರಸ್ಥಾವನೆಯನ್ನು ಓದಿದರು ಹಾಗೂ  ವಿಜಯ ವಿ ಬಂಟನೂರ  ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group