ಕವನ: ನಾನೇನು ಸಾಧಿಸಿದೆ?

Must Read

ನಾನೇನು ಸಾಧಿಸಿದೆ?

ವರುಷವೊಂದು ಸಂದುತಲಿದೆ
ಬದುಕಿನಲಿ ಒಂದು ವರುಷ ಕಳೆದು ಹೋಗಿದೆ
ಸುಮ್ಮನೇ ಹಿಂತಿರುಗಿ ನೋಡಿದೆ
ಈ ಕಳೆದ ವರುಷದಲಿ ನಾನೇನು ಮಾಡಿದೆ?

ಕಳೆದು ಹೋದ ದಿನಗಳ ಜಾಲಾಡಿದೆ
ಗುಟ್ಟಿನಲಿ ಮನವು ಮಾತಾಡಿದೆ
ಸಾಧನೆಯ ಹಾದಿಯ ಮೊದಲ ಮೆಟ್ಟಲು ನಿರ್ಮಿಸಿದೆ
ನಿನ್ನ ಬದುಕಿನಲಿ ಈ ವರುಷ ವ್ಯರ್ಥ ಮಾಡಿದೆ

ಬರಹದ ಹಾದಿಯಲಿ ತೊಡಗಿದ್ದೆ
ಸಾಧನೆಯ ಶಿಖರವನೇರುವ ಬಯಕೆಯಿದೆ
ಪ್ರೋತ್ಸಾಹ, ಅವಕಾಶಗಳೂ ಸಿಗುತಲಿದೆ
ಛಲವಿದೆ, ಮನವೂ ಖುಶಿಯಾಗಿದೆ.

ಹೊಸ ವರುಷದ ಸಂಭ್ರಮವು ಬರುತಿದೆ
ಬದುಕಿನಲಿ ಒಂದು ವರುಷವು ಸಂದಿದೆ
ನಿನಗೆ ನೀನೇ ಪ್ರಶ್ನಿಸುವ ಸಮಯವು ಬಂದಿದೆ ಈ ಕಳೆದ ವರುಷದಲಿ ನೀನೇನು ಸಾಧಿಸಿದೆ?

ಮತ್ತೊಮ್ಮೆ ನೀ ಪಯಣಿಸು ಹಿಂತಿರುಗಿ
ಹೊರಗೆಡಹು  ಅದರೊಳಗೆ ಹುಡುಕಾಡಿ
ನೀ ಮಾಡಿದ ಸಾಧನೆಗಳ ಸಾಲಾಗಿ
ಗುರಿಯಿರಲಿ ಹೆಚ್ಚಿನ ಸಾಧನೆಗಾಗಿ

ಹೊಸ ವರುಷವು ಬದುಕಿನಲಿ ವ್ಯರ್ಥವಾಗದಿರಲಿ
ಮನದೊಳಗೆ  ಕನಸುಗಳ ಲೋಕವಿರಲಿ
ಮನತುಂಬ ಗುರಿ ಮುಟ್ಟುವ ಛಲವಿರಲಿ
ಪ್ರತಿದಿನವು ಸಾಧನೆಗಾಗಿ ಪ್ರಯತ್ನವಿರಲಿ


ರೇಣುಕಾ ಸುಧೀರ್
ಅರಸಿನಮಕ್ಕಿ
ಬೆಳ್ತಂಗಡಿ

Latest News

ಸ್ವಾತಂತ್ರ ಹೋರಾಟಗಾರ, ಹೈ. ಕ. ವಿಮೋಚನಾ ರೂವಾರಿ ಚಂದ್ರಶೇಖರ ಪಾಟೀಲ ಮಹಾಗಾಂವ

ಚಂದ್ರಶೇಖರ ಸಂಗಶೆಟ್ಟಿ ಪಾಟೀಲ , ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದ ಶಾಸಕಾಂಗ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ ಹೋರಾಟಗಾರ ಮತ್ತು ರಾಜಕಾರಣಿ. ಸ್ವಾತಂತ್ರ ಹೋರಾಟಗಾರ ಹೈದ್ರಾಬಾದ...

More Articles Like This

error: Content is protected !!
Join WhatsApp Group