ಬೆಳಗಾವಿ: ಜಿಲ್ಲಾ ಪಂಚಾಯತ್ ಬೆಳಗಾವಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಚಿಕ್ಕೋಡಿ ವಿಭಾಗ ಹಾಗೂ ಅನುಷ್ಠಾನ ಬೆಂಬಲ ಸಂಪನ್ಮೂಲ ಸಂಸ್ಥೆ, ಗ್ರಾಮೋದಯ ಬೈಲಹೊಂಗಲ ಸಂಸ್ಥೆ ಇವರ ಸಹಯೋಗದಲ್ಲಿ ‘ಜಲ ಜೀವನ ಮಿಷನ್ ‘ ಯೋಜನೆಯಡಿಯಲ್ಲಿ ದಿನಾಂಕ 09/01/2023 ರಂದು ಆಟೋ ಜಾಗೃತಿ ಮೂಡಿಸುವ ಕಾರ್ಯ ಕ್ರಮ ನಡೆಯಿತು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿಕ್ಕೋಡಿ ವಿಭಾಗ ,ಜೆ.ಜೆ.ಯಂ ಕಾರ್ಯ ನಿರ್ವಾಹಕ ಅಭಿಯಂತರ ಆನಂದ ಎಸ್ ಬಣಗಾರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯೋಜನೆಯ ಉದ್ದೇಶಗಳು, ನೀರಿನ ಗುಣಮಟ್ಟ ಪರೀಕ್ಷೆ ಮಾಡುವ ಅಗತ್ಯತೆ ಬಗ್ಗೆ , ನೀರಿನ ಮಿತ ಬಳಕೆ ಬಗ್ಗೆ ಹಾಗೂ ಸಮುದಾಯದ ಪಾಲ್ಗೊಳ್ಳುವಿಕೆ, ಆಟೋ ಜಾಗ್ರತೆ ಮೂಡಿಸುವ ಬಗ್ಗೆ ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಯೋಜನೆ ವ್ಯವಸ್ಥಾಪಕರಾದ ದೀಪಕ್.ಕೆ ಆಟೋ ಜಾಗೃತಿ ಮೂಡಿಸುವ ಕುರಿತು ಮಾಹಿತಿಯನ್ನು ನೀಡಿದರು.
ಮನೋಹರ್ ಪೊದ್ದಾರ್, ಎಸ್.ಕುಂಬಾರ್, ಕೆ ಪಿ ಹರ್ಷ, ವೀರ್ ಗೌಡರ್, ಅಮಿತ್ ಪ್ರತಾಪ್, ಮಾಂತೇಶ್ ಅಂಬಿ, ದೀಪಾಲಿ, ISRA ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.