ಮಸೀದಿ, ಮಂದಿರಗಳಲ್ಲಿ ಮದ್ಯ ಮಾರಾಟ; ಮಾಜಿ ಶಾಸಕ ಅಶೋಕ ಖೇಣಿ ವಿವಾದಾತ್ಮಕ ಹೇಳಿಕೆ

Must Read

ಬೀದರ: ಅಕ್ರಮವಾಗಿ ಮಸೀದಿ ಹಾಗೂ ಮಂದಿರ ಗಳಲ್ಲಿ ಮದ್ಯ ಮಾರಾಟ ‌ಮಾಡುತ್ತಾರೆ ಎಂದು ಬೀದರ್ ನಲ್ಲಿ ನೈಸ್ ಖ್ಯಾತಿಯ ಅಶೋಕ್ ಖೇಣಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇವರ ಈ ಮಾತಿಗೆ ಬೀದರ ನಗರದಾದ್ಯಂತ ಮುಸ್ಲಿಂ ಸಮುದಾಯದ ಜನರು ಅಶೋಕ ಖೇಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಿಂದು ಮುಸ್ಲಿಮರು ಅಣ್ಣ ತಮ್ಮಂದಿರಂತೆ ನಾವು ಇದ್ದು ಇಂಥ ಹೇಳಿಕೆ ನೀಡಿದ್ದು ಸರಿಯಲ್ಲ. ಖೇಣಿಯವರು ಕ್ಷಮಾಪಣೆ ಕೇಳಬೇಕು ಎಂದು ಸ್ಥಳೀಯ ಮುಸ್ಲಿಂ ಸಮುದಾಯದ ಜನರು ಆಗ್ರಹಿಸಿದರು.

ಸ್ಥಳೀಯ ಖಾಸಗಿ ಚಾನಲ್ ಜೊತೆ ಮಾತನಾಡುವಾಗ  ತಮ್ಮ ನಾಲಿಗೆ ಹರಿ ಬಿಟ್ಟಿರುವ ಅಶೋಕ್ ಖೇಣಿ, ಅಕ್ರಮವಾಗಿ ಕಿರಾಣಿ ಸ್ಟೋರ್, ಮಸೀದಿ, ಮಂದಿರಗಳಲ್ಲಿ ಮದ್ಯ ಮಾರಾಟ ಮಾಡುತ್ತಾರೆ ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ ಇನ್ನು ಇದೇ ವೇಳೆ ಮತ್ತೊಬ್ಬ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಚಂದ್ರ ಸಿಂಗ್ ರನ್ನು ಅಶೋಕ್ ಖೇಣಿ ಬೀದಿ ನಾಯಿಗೆ ಹೋಲಿಸಿದ್ದಾರೆ.

ನಿಮ್ಮ ಮನೆಯಲ್ಲಿ ಜರ್ಮನ್ ಶೆಪಡ್೯ ನಾಯಿ, ಹೊರಗಡೆ ಬೀದಿ ನಾಯಿ ಇದೆ. ನೀವು ಯಾವ ನಾಯಿಯನ್ನು ಇಷ್ಟ ಪಡುತ್ತಿರಾ…? ನೀವು ಬೀದಿ ನಾಯಿಯನ್ನು ಇಷ್ಟ ಪಟ್ರೆ ಅದನ್ನೆ ನಿಮ್ಮ ಮನೆ ಕಳಿಸುತ್ತೇನೆ ಆದ್ರೆ ಯಾರಾದರೂ ಜರ್ಮನ್ ಶೆಪಡ್೯ ನಾಯಿಗೆ ಬಿಟ್ಟು ಬೀದಿಗೆ ನಾಯಿ ಇಷ್ಟ ಪಡುತ್ತಾರಾ ಎಂದು ತಮ್ಮದೆ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಹಾಗೂ ಮಾಜಿ ಸಿಎಂ ಎನ್ ಧರ್ಮಸಿಂಗ್ ಅಳಿಯ ಚಂದ್ರಸಿಂಗ್ ರನ್ನು  ಅಶೋಕ್ ಖೇಣಿ ಬೀದಿ ನಾಯಿಗೆ ಹೋಲಿಸಿದ್ದಾರೆ.

ಖೇಣಿಯವರ ವಿರುದ್ಧ ಬೀದರ್ ನಲ್ಲಿ ಪ್ರತಿಭಟನೆ ಮಾಡಲಾಯಿತು. ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ನಿರ್ಣಾ ಗ್ರಾಮದಲ್ಲಿ ಅಶೋಕ್ ಖೇಣಿ ವಿರುದ್ಧ ಪ್ರತಿಭಟನಾರ್ಥವಾಗಿ ಅವರ ಭಾವಚಿತ್ರಕ್ಕೆ ಚಪ್ಪಲಿ ಯಿಂದ ಹೊಡೆದು ಭಾವಚಿತ್ರಕ್ಕೆ ಬೆಂಕಿ ಹಾಕಿ ಬೀದರ್ ದಕ್ಷಿಣ ಕ್ಷೇತ್ರದ ಜನರು ಪ್ರತಿಭಟನೆ ಮಾಡಿದರು. ಕಳೆದ ಬಾರಿಯೂ ಜೂಜು, ಇಸ್ಪೀಟ್ ಆಡಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಖೇಣಿ ದೇಶಾದ್ಯಂತ ‌ಬಾರಿ ಸುದ್ದಿಗೆ ಸಾಕ್ಷಿಯಾಗಿದ್ದರು.

ಇಂಥವರನ್ನು ಎಲ್ಲಾ ಪಕ್ಷದಿಂದ ಉಚ್ಚಾಟನೆ ಮಾಡಬೇಕು, ಡಿಕೆಶಿ ಹಾಗೂ ಸಿದ್ದರಾಮಯ್ಯಗೆ‌ ನಾವು ಮನವಿ ಮಾಡುತ್ತೇವೆ ಮೊದಲು ಇವರನ್ನು ಪಾರ್ಟಿಯಿಂದ ತೆಗೆದು ಹಾಕಿ‌ ಇಲ್ಲವಾದರೆ ಸರ್ಕಾರ ಮಾಡಲು ಪಕ್ಷಕ್ಕೆ ಮುಂದೆ ಹಾನಿಯಾಗುತ್ತದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಜನರು ಆಕ್ರೋಶ ವ್ಯಕ್ತಪಡಿಸಿದರು.


ವರದಿ: ನಂದಕುಮಾರ ಕರಂಜೆ,ಬೀದರ

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group