Homeಸುದ್ದಿಗಳುರಸ್ತೆ ಸುರಕ್ಷತಾ ಸಪ್ತಾಹ

ರಸ್ತೆ ಸುರಕ್ಷತಾ ಸಪ್ತಾಹ

ಸಿಂದಗಿ: ಯಾವುದೇ ತಾಂತ್ರಿಕ ದೋಷಗಳು ತಮ್ಮ ವಾಹನಗಳಲ್ಲಿ ಇದ್ದಾಗ ಮುಂಜಾಗ್ರತೆ, ಸಮಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಿ ಯಾವುದೇ ಅಪಾಯ ಹಾಗು ಅನಾಹುತಗಳಾಗದಂತೆ ಎಚ್ಚರ ವಹಿಸಬೇಕು ಎಂದು ಆರಕ್ಷಕ ಉಪನಿರೀಕ್ಷಕ ಸೋಮೇಶ ಗೆಜ್ಜಿ ಕಿವಿಮಾತು ಹೇಳಿದರು.

ಪಟ್ಟಣದ ಬಸ್ ಡಿಪೋದಲ್ಲಿ  ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಸಾರಿಗೆ ನಿಗಮದಲ್ಲಿ ಕಾರ್ಯ ನಿರ್ವಹಿಸುವ ತಾವುಗಳು ಮೊದಲಿಗೆ ಸಾರ್ವಜನಿಕರಿಗಿಂತ ಹೆಚ್ಚಾಗಿ ಚಾಲಕರ ಜವಾಬ್ದಾರಿ ಹೆಚ್ಚಿದ್ದು ಕಾರಣ ರಸ್ತೆ ನಿಯಮಗಳನ್ನು ಪಾಲಿಸಬೇಕಾಗಿರುವುದು ಅವಶ್ಯಕ ವಾಗಿರುತ್ತದೆ. ಯಾವುದೇ ರೀತಿಯ ಅಪಘಾತ ಗಳಾಗದಂತೆ ಎಚ್ಚರಿಕೆ ಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದರು. 

ಈ ಸಂದರ್ಭದಲ್ಲಿ ಡಿಪೋ ವ್ಯವಸ್ಥಾಪಕ ಎ.ಎ.ಭೋವಿ, ಸಂಚಾರಿ ನಿರೀಕ್ಷಕ ಸಾಹೇಬಗೌಡ ಬಿರಾದಾರ, ಸೇರಿದಂತೆ ಸುಪ್ರೋಜರ, ಚಾಲಕರು, ನಿರ್ವಹಕರು ಇದ್ದರು.

RELATED ARTICLES

Most Popular

error: Content is protected !!
Join WhatsApp Group