- Advertisement -
ಬೆಳಗಾವಿ: ತನ್ನ ಧಾಡಸಿತನ, ಸೌಂದರ್ಯದಿಂದ ಅಪಾರ ಪ್ರವಾಸಿಗರ ಕಣ್ಮನ ತಣಿಸುತ್ತಿದ್ದ ಅಂಬೋಲಿ ಜಲಪಾತವೀಗ ನೀರಿಲ್ಲದೆ ಸೊರಗಿ ಪಾಳು ಮುಖದಿಂದ ಕಾಣುತ್ತಿದೆ.
ಬೆಳಗಾವಿ ತಾಲೂಕಿನ ಗೋವಾ ರಸ್ತೆಯಲ್ಲಿರುವ ಅಂಬೋಲಿ ಜಲಪಾತ ತನ್ನ ಮಳೆಯ ಕೊರತೆಯಿಂದಾಗಿ ತನ್ನ ವೈಭವ ಕಳೆದುಕೊಂಡಿದೆ.
ಪಶ್ಚಿಮ ಘಟ್ಟಗಳಲ್ಲಿ ಗೋವಾ ರಸ್ತೆಯಲ್ಲಿ ಕಂಡುಬರುವ ಅನೇಕ ಜಲಪಾತಗಳಲ್ಲಿ ಅಂಬೋಲಿ ಜಲಪಾತ ಪ್ರಮುಖವಾದದ್ದು ಮಳೆಗಾಲದಲ್ಲಿ ತನ್ನ ಸೌಂದರ್ಯದಿಂದ ಕಂಗೊಳಿಸುವ ಈ ಜಲಪಾತಕ್ಕೆ ಸಾವಿರಾರು ಪ್ರವಾಸಿಗರು ಭೇಟಿಕೊಟ್ಟು ಜಲಪಾತದ ಸೌಂದರ್ಯ ಸವಿಯುತ್ತಾರೆ. ಆದರೆ ಈ ವರ್ಷ ಮಳೆಯ ಕೊರತೆಯಿಂದಾಗಿ ಅಂಬೋಲಿ ಜಲಪಾತ ತೀರಾ ಸೊರಗಿದೆ.
- Advertisement -
ದಕ್ಷಿಣ ಕೊಂಕಣದ ಸಿಂಧುದುರ್ಗ ಜಿಲ್ಲೆಯ ಅಂಬೋಲಿ ಗ್ರಾಮದ ಜಲಪಾತ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಪ್ರದೇಶದಲ್ಲಿ ಸಾಕಷ್ಟು ಪ್ರಸಿದ್ಧವಾಗಿದ್ದು ಈ ದಿನಗಳಲ್ಲಿ ನೀರಿಲ್ಲದೆ ಬಣಗುಟ್ಟುತ್ತಿದೆ.