ಬೀದರ್ ನಲ್ಲಿ ಒಂದು ಮನಕಲಕುವ ಘಟನೆ
ಬೀದರ – ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ, ಮಲಗಿದ್ದ ಸ್ಥಳದಲ್ಲೇ ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿರುವ ಮನಕಲಕುವ ಘಟನೆ ಬೀದರನಿಂದ ವರದಿಯಾಗಿದೆ.
ಬೀದರ್ ನ ಭಾಲ್ಕಿ ತಾಲೂಕಿನ ನೀಲಮನಳ್ಳಿ ತಾಂಡಾದಲ್ಲಿ ಘಟನೆ ನಡೆದಿದ್ದು.
ಮೀರಾಬಾಯಿ ದಯಾನಂದ(೨೪) ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಅದೇ ಕೋಣೆಯಲ್ಲಿ ನಾಲ್ಕು ವರ್ಷ, ೨.೫ ವರ್ಷದ ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿವೆ.
ಇತ್ತ ಮೀರಾಬಾಯಿ ಪತಿ ಮತ್ತು ಕುಟುಂಬಸ್ಥರು ಪರಾರಿಯಾಗಿದ್ದಾರೆ. ಮೀರಾಬಾಯಿ ಕುಟುಂಬಸ್ಥರಿಂದ ಮೂವರ ಕೊಲೆಯ ಆರೋಪ ಬಂದಿದ್ದು ಇಬ್ಬರೂ ಚಿಕ್ಕ ಮಕ್ಕಳಿಗೆ ವಿಷ ನೀಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಪರಾರಿಯಾಗಿರುವ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ