ವಿಶ್ವ ಆಹಾರ ದಿನದ ಶುಭಾಶಯಗಳು

Must Read

ಅನ್ನ ಬಿಟ್ಟೆ ನೀ ಸತ್ತೆ

ತುತ್ತು ಅನ್ನ ಬೊಗಸೇ ನೀರು ಕೊಟ್ಟ ಮಾಡಿದ ಫಲದಿಂದ
ಕಷ್ಟ ನಷ್ಟ ದಲ್ಲೋ ಅನ್ನವನ್ನು ಇತ್ತ ಆ ಪರಬ್ರಹ್ಮ
ಮಾಡಿದ ಕರ್ಮಾನುಸಾರ ಪಡೆಯುವುದು ಅನ್ನದ ಬಂಧ
ಹಾಯಾಗಿರೋಕೆ,ಮತ್ತೇನು ಬೇಕು ಅನ್ನ ಒಂದಿದ್ದರೆ ಸಾಕು||

ಸಕಲ ಜೀವ ರಾಶಿ ಗಳ ಮೇಲೆ ಅವನ ಕಣ್ಣು
ಮನಸಿನನುಸಾರ ಸ್ವರ್ಗ-ನರಕ ಬಳಿಯುವನು ಬಣ್ಣ
ಅನ್ನ ಎಲ್ಲಾ ಪೀಳಿಗೆಗೂ ಬೇಕು ಕಾಯ್ದುಕೋ ಅಣ್ಣ
ಹಾಯಾಗಿರೋಕೆ,ಮತ್ತೇನು ಬೇಕು ಅನ್ನ ಒಂದಿದ್ದರೆ ಸಾಕು||

ಅನ್ನಯಾರ ಸ್ವತ್ತಲ್ಲ,ಕೆಡಿಸುವ ಹಕ್ಕಿಲ್ಲ
ದುಡಿದು ತಿಂದಂತೆ ಮೈಯ್ಯ ತುಂಬಾ ಶಕ್ತಿ
ಭೇದವಿಲ್ಲ, ಸಾಯೋವರೆಗೂ ಅನ್ನದ ಮೇಲೆ ನಿನ್ನ ಹೆಸರು
ಹಾಯಾಗಿರೋಕೆ,ಮತ್ತೇನು ಬೇಕು ಅನ್ನ ಒಂದಿದ್ದರೆ ಸಾಕು||

ಕರೆದಾಯ್ತು ಎಂದರೆ,ಹೋಗಲೇಬೇಕು ಎಲ್ಲವ ಬಿಟ್ಟು
ಇದ್ದಾಗ ಶ್ರೀಮಂತಗೊಳಿಸು ಅನ್ನದಿಂದ ಈ ಹೊಟ್ಟೆಯ
ಹೃದಯವೇ ಪರಬ್ರಹ್ಮ , ಬಳಸಿಕೋ ಆ ದೇವರ.
ಹಾಯಾಗಿರೋಕೆ,ಮತ್ತೇನು ಬೇಕು ಅನ್ನ ಒಂದಿದ್ದರೆ ಸಾಕು||

ಬಿ.ಎನ್. ಹೂಗಾರ್

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group