ಡಾ.ಗಡ್ಡಿಗೌಡರ ‘ದಾಸರ ದಾರಿಯಲ್ಲಿ’ ಕೃತಿ ಬಿಡುಗಡೆ ಕಾರ್ಯಕ್ರಮ

0
254

ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ಕನ್ನಡ ಸಂಘದ ವತಿಯಿಂದ ಮಾರ್ಚ  6 ರಂದು ಸೋಮವಾರ ಮಧ್ಯಾಹ್ನ 3.30 ಗಂಟೆಗೆ ಉಪನ್ಯಾಸ ಹಾಗೂ ಡಾ.ಎಫ್.ಡಿ.ಗಡ್ಡಿಗೌಡರ ಅವರ ದಾಸರ ದಾರಿಯಲ್ಲಿ ಕೃತಿ ಲೋಕಾರ್ಪಣೆ ಜರುಗಲಿದೆ.

ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎನ್.ಪ್ಯಾಟಿ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ಜಿಲ್ಲಾಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಕೃತಿ ಲೋಕಾರ್ಪಣೆಗೊಳಿಸುವರು. ಬೂದಿಹಾಳ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಎನ್.ಆರ್.ಠಕ್ಕಾಯಿ ಅಧ್ಯಕ್ಷತೆ ವಹಿಸುವರು.

ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಕಸಾಳೆ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಪ್ರಕಾಶ ಮೆಳವಂಕಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಬೈಲಹೊಂಗಲದ ಹಿರಿಯ ದಿವಾಣಿ ನ್ಯಾಯಾಲಯದ ಪ್ರಥಮ ದರ್ಜೆ ಸಹಾಯಕರು, ಕವಿಗಳಾದ ಸುಖದೇವಾನಂದ ಚವತ್ರಿಮಠ ದಾಸರ ಕೀರ್ತನೆಗಳಲ್ಲಿ ಜೀವನ ಮೌಲ್ಯಗಳು ಎಂಬ ವಿಷಯದ ಮೇಲೆ ಉಪನ್ಯಾಸ ಹಾಗೂ ಕೃತಿ ಪರಿಚಯ ಮಾಡುವರು. ಬೈಲಹೊಂಗಲದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ  ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ  ಡಾ. ಎಫ್.ಡಿ.ಗಡ್ಡಿಗೌಡರ ಉಪಸ್ಥಿತಿ ವಹಿಸಲಿದ್ದಾರೆ.

ಶಿಕ್ಷಕಿಯರಾದ ರೇಖಾ ಸೊರಟೂರ ಪ್ರಾಸ್ತಾವಿಕ ನುಡಿಗಳನ್ನಾಡುವರು. ಕುಮಾರಿ ತನುಜಾ ಬಡಿಗೇರ ಪ್ರಾರ್ಥಿಸುವರು. ಕುಮಾರಿ ರಾಜೇಶ್ವರಿ ಸೊಗಲದ ನಿರೂಪಿಸುವರು. ಶಿಕ್ಷಕರಾದ ಎಸ್.ಬಿ. ಭಜಂತ್ರಿ ಸ್ವಾಗತಿಸುವರು. ದೈಹಿಕ ಶಿಕ್ಷಣ ಶಿಕ್ಷಕರಾದ ಪಿ.ಎಸ್. ಗುರುನಗೌಡರ ವಂದಿಸುವರು. ಕುಮಾರಿ ಚೈತ್ರಾ ಸೊಗಲದ, ಕುಮಾರಿ ಕಾವೇರಿ ಬೋಬಡೆ , ಕುಮಾರಿ ಮಲ್ಲಮ್ಮ ಅಳಗೋಡಿ, ಕುಮಾರಿ ಸುಶ್ಮಿತಾ ಸೊಗಲದ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.