spot_img
spot_img

ಗ್ರಾಮೀಣ ಬಡ ರೈತರಿಗೆ ಉಚಿತ ಆರೋಗ್ಯ ಸೇವೆ ದೊರೆಯುವಂತಾಗಲಿ- ಅರವಿಂದ ದಳವಾಯಿ

Must Read

- Advertisement -

ಮೂಡಲಗಿ: ಗ್ರಾಮೀಣ ಭಾಗದ ಬಡವರಿಗೆ, ರೈತರಿಗೆ  ಕೂಲಿಕರ್ಮಿಗಳಿಗೆ,  ಮಹಿಳೆಯರು ಮಕ್ಕಳಿಗೆ ದುಡ್ಡು ಕೊಟ್ಟು ಆರೋಗ್ಯವನ್ನು ತಪಾಸಿಸಿಕೊಂಡು ಚಿಕಿತ್ಸೆ ಪಡೆಯುವುದು ತುಂಬಾ ಕಷ್ಟದ ಕೆಲಸ. ಬಡವರ ರೈತರ ಮಹಿಳೆಯರ ಮಕ್ಕಳ ಅನುಕೂಲಕ್ಕಾಗಿ ಕೆಎಲ್‍ಇ ಯವರು ಉಚಿತ ಆರೋಗ್ಯ ಚಿಕಿತ್ಸಾ ಶಿಬಿರವನ್ನು ಕೌಜಲಗಿಯಲ್ಲಿ ಹಮ್ಮಿಕೊಂಡಿದ್ದು, ಈ ಭಾಗದ ಜನರಿಗೆ ಉಚಿತ ಆರೋಗ್ಯ ಚಿಕಿತ್ಸೆ ದೊರೆಯಲು ಅನುಕೂಲವಾಗುತ್ತದೆ ಎಂದು ಸಿಂಧುತಾಯಿ ಮಹಾದೇವರಾವ್ ದಳವಾಯಿ ಎಜುಕೇಶನ್ ಟ್ರಸ್ಟ್ ಧರ್ಮದರ್ಶಿ ಅರವಿಂದ ದಳವಾಯಿ ಹೇಳಿದರು.

ಶನಿವಾರದಂದು ಕೌಜಲಗಿ ಕರ್ನಾಟಕ ಪಬ್ಲಿಕ್ ಶಾಲಾ ಆವರದಲ್ಲಿ ಕೆಎಲ್‍ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆಯವರ ಹುಟ್ಟು ಹಬ್ಬದ ಅಮೃತ ಮಹೋತ್ಸವದ ಅಂಗವಾಗಿ ಕೆಎಲ್‍ಇ ಅಂಗ ಸಂಸ್ಥೆಗಳು ಮತ್ತು ಕೌಜಲಗಿಯ  ಸಿಂಧೂತಾಯಿ ಮಹಾದೇವರಾವ್ ದಳವಾಯಿ ಎಜುಕೇಶನ್ ಟ್ರಸ್ಟ್ ಆಶ್ರಯದಲ್ಲಿ ಜರುಗಿದ  ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಅವರು, ಕೆಎಲ್‍ಇ ಸಂಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಡಾ. ಪ್ರಭಾಕರ ಕೋರೆಯವರ ಪರಿಶ್ರಮ ಮೇರು ಪರ್ವತದಷ್ಟೇ ಸಮಾನವಾಗಿದೆ. ಕೋರೆಯವರ 75ನೇ ಹುಟ್ಟುಹಬ್ಬದ ಸಂಭ್ರಮಾಚರಣೆ ಅಂಗವಾಗಿ ಕೌಜಲಗಿ ಪಟ್ಟಣದ ಹಾಗೂ ಸುತ್ತಲಿನ 40 ಗ್ರಾಮಗಳ ಜನತೆಗೆ ಅನುಕೂಲವಾಗಲೆಂದು ಇಂದು ಸುಮಾರು 200 ಸಿಬ್ಬಂದಿಗಳೊಂದಿಗೆ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದಾರೆ.ಪ್ರಭಾಕರ್ ಕೋರೆಯವರ ಸಾಮಾಜಿಕ ಕಳಕಳಿಯ ಭಾಗವಾದ ಉಚಿತ ಆರೋಗ್ಯ ತಪಾಸಣ ಶಿಬಿರವನ್ನು ಜನರು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕೆಎಲ್‍ಇ  ಹಿರಿಯ ವೈದ್ಯ ಡಾ.ಅನ್ವರ್ ಮುಜಾವರ ಮಾತನಾಡಿ,  ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿಯನ್ನು ಹೊಂದಬೇಕು. ಬಡವರಿಗೆ ಅನುಕೂಲವಾಗಲೆಂದು ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕೆಎಲ್‍ಇ ಯವರು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಇಂದಿನ ನಮ್ಮೆಲ್ಲರ ಸೇವೆ ಉಚಿತವಾಗಿದ್ದು, ಔಷದೋಪಚಾರವೂ ಕೂಡ ಉಚಿತವಾಗಿದ್ದು ಜನರು ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ ಎಂದು ಹೇಳಿದ ಅವರು ಕೌಜಲಗಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲು ಸಹಯೋಗ ನೀಡಿರುವ ಸಿಂಧುತಾಯಿ ಮಹಾದೇವರಾವ್  ದಳವಾಯಿ ಎಜುಕೇಶನ್ ಟ್ರಸ್ಟಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

- Advertisement -

ಪ್ರಾಸ್ತಾವಿಕವಾಗಿ ಕಲ್ಲೋಳಿಯ ಬಸವೇಶ್ವರ ಶಿಕ್ಷಣ ಸಂಸ್ಥೆಯ ಚೇರ್ಮನ್ ರಮೇಶ್ ಬೆಳಕೂಡ  ಅವರು  ಕೆಎಲ್‍ಇ ಯ ಕಾರ್ಯ ಸಾಧನೆಯನ್ನು ಶ್ಲಾಘಿಸಿ,  ಅವರ ಸಾರ್ವಜನಿಕ ಆರೋಗ್ಯ ಸೇವೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾನ್ನಿಧ್ಯ ವಹಿಸಿದ ಬಾಗೋಜಿಕೊಪ್ಪದ ಡಾ. ಮುರುಘರಾಜೇಂದ್ರ ಶಿವಲಿಂಗ ಶಿವಾಚಾರ್ಯ ಶ್ರೀಗಳು ಮಾತನಾಡಿ, ವೈದ್ಯರು ಸಾಕ್ಷಾತ್ ದೇವರಾಗಿದ್ದು, ನಮಗೆ ಆರೋಗ್ಯ ಭಾಗ್ಯವನ್ನು ದಯಪಾಲಿಸುವವರಾಗಿದ್ದಾರೆ. ಇನ್ನೂರಕ್ಕೂ  ಹೆಚ್ಚು ಆರೋಗ್ಯ ದೇವರುಗಳನ್ನು ಕೌಜಲಗಿ ನೆಲಕ್ಕೆ ಕರೆಸಿದ ಕೀರ್ತಿ ಅರವಿಂದ್ ದಳವಾಯಿ ಅವರಿಗೆ ಸಲ್ಲುತ್ತದೆ. ಅವರು ಒಬ್ಬ ರಾಜಕಾರಣಿಗಳಾಗಿದ್ದರೂ ಕೂಡ ಅದನ್ನು ಬದಿಗಿತ್ತು, ಸಾಮಾನ್ಯ ಬಡವರ, ರೈತರ, ಮಹಿಳೆ ಮಕ್ಕಳ ಆರೋಗ್ಯ ರಕ್ಷಣೆಯಂತಹ ಸಾಮಾಜಿಕ ಕಳಕಳಿಯನ್ನು ಹೊಂದಿರುವುದು ಶ್ಲಾಘನೀಯವಾಗಿದೆ. ಉಚಿತ ಆರೋಗ್ಯ ಶಿಬಿರವೆಂದರೆ ಜನರು ಇದನ್ನು ಕೀಳು ಮಟ್ಟದಲ್ಲಿ ಕಾಣಬಾರದು. ಆಚಾರಕ್ಕಿಂತ ಆರೋಗ್ಯ ಸೇವೆ ಶ್ರೇಷ್ಠವಾಗಿದೆ ಎಂದರು.

ವೇದಿಕೆಯಲ್ಲಿ ಕೆಎಲ್‍ಇ ಆಸ್ಪತ್ರೆಯ ವೈದ್ಯ ಆಡಳಿತಾಧಿಕಾರಿ ಡಾ.ಅಲ್ಲಮಪ್ರಭು ಕುಡಚಿ, ನ್ಯಾಯವಾದಿ ಗುಂಡಪ್ಪ ಕಮತೆ, ರವೀಂದ್ರ ತುಪ್ಪದ, ವೆಂಕನಗೌಡ ಪಾಟೀಲ, ಸುರೇಶ್ ಮಗದುಮ, ವಿದ್ಯಾ ಹಿರೇಮಠ, ಕೆಪಿಎಸ್ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಎನ್.ಜಿ. ನಾರಾಯಣಕರ್ ಉಪಸ್ಥಿತರಿದರು. 

- Advertisement -

ವೈದ್ಯಕೀಯ ತಪಾಸಣೆಯಲ್ಲಿ ಒಟ್ಟು 5500ಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಭಾಗವಹಿಸಿ ವಿವಿಧ ವಿಭಾಗದಲ್ಲಿ ತಮ್ಮ ಆರೋಗ್ಯವನ್ನು ತಪಾಸಣೆಯನ್ನು ಮಾಡಿಕೊಂಡರು

ಮುಖ್ಯೋಪಾಧ್ಯಾಯ ವಿವೇಕಾನಂದ ಹಳ್ಳೂರ್ ಸೇರಿದಂತೆ ಸಿಂಧುತಾಯಿ ಮಹದೇವರಾವ್  ದಳವಾಯಿ ಎಜುಕೇಶನ್ ಟ್ರಸ್ಟ್ ನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಎಲ್ಲಾ ಶಿಕ್ಷಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಸಹಾಯ ಸಹಕಾರ ನೀಡಿದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group