ಇಚ್ಚಂಗಿಯವರ ಕೃತಿಗಳು ಸಮಾಜದ ಪ್ರತಿಬಿಂಬಗಳು – ಡಾ. ಗುರುದೇವಿ

Must Read

ಬೆಳಗಾವಿ: ಡಾ. ರಾಜಶೇಖರ ಇಚ್ಚಂಗಿ ಬೆಳಗಾವಿ ಜಿಲ್ಲೆಯ ಸಾಂಸ್ಕೃತಿಕ ಸಾಹಿತ್ಯಿಕ ರಾಯಭಾರಿ ಶ್ರೀಯುತರ ಎಲ್ಲ ಕೃತಿಗಳು ಸಮಾಜದ ಪ್ರತಿಬಿಂಬಗಳಾಗಿ ಲೋಕಕ್ಕೆ ದಿವ್ಯ ಸಂದೇಶವನ್ನು ನೀಡಿವೆ ಎಂದು ಡಾ. ಗುರುದೇವಿ ಹುಲೆಪ್ಪನವರಮಠ ವಿವರಿಸಿದರು.

ತನ್ಮಯ ಚಿಂತನ ಚಾವಡಿ ಬೆಳಗಾವಿ ಹಾಗೂ ಮಹೇಶ ಪಿ.ಯ. ಕಾಲೇಜಿನಲ್ಲಿ ಡಾ. ರಾಜಶೇಖರ ಇಚ್ಚಂಗಿ ಅವರ ಬೆಳಗಾವಿ ಜಿಲ್ಲೆ ಸಾಂಸ್ಕೃತಿಕ ವೈವಿಧ್ಯತೆ ಗ್ರಂಥ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಗ್ರಂಥ ಪರಿಚಯವನ್ನು ಡಾ.ಪಿ..ಜಿ. ಕೆಂಪಣ್ಣವರ ಪರಿಚಯಿಸಿ ಚಿಕ್ಕಬಾಗೇವಾಡಿ, ಕಾದ್ರೊಳ್ಳಿ, ವಿವಿಧ ಶಾಸನಗಳ ಬಗ್ಗೆ ಈ ಕೃತಿಯಲ್ಲಿ ಮಾಹಿತಿ ನೀಡಲಾಗಿದೆ ಎಂದರು.

ಮುಖ್ಯ ಅತಿಥಿ  ಎಂ.ವಿ. ಭಟ್ ಮಾತನಾಡಿ, ನೈತಿಕತೆಯ ಚೌಕಟ್ಟಿಲ್ಲದ ಸಂಸ್ಕೃತಿ ಅರ್ಥಹೀನ ಎಂದರು. ಸಾಹಿತಿ ಗುರುಪಾದ ಮರಿಗುದ್ದಿ ಮಾತನಾಡಿ, ಅರ್ಜುನವಾಡಿ ಶಿಲಾಶಾಸನ ಅತಿ ಪ್ರಸಿದ್ಧ ರಾಜ ಪುರೋಹಿತರು ಕಂಡುಹಿಡಿದರು ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೊಫೆಸರ್ ಎಲ್. ವಿ.ಪಾಟೀಲ ಮಾತನಾಡಿ, ಬೆಳಗಾವಿ ರಾಜ್ಯದಲ್ಲಿ ಅತಿ ದೊಡ್ಡ ಜಿಲ್ಲೆ ಇನ್ನೂ ಸಂಶೋಧನೆಗಳು ನಡೆಯಬೇಕು ಸಮಗ್ರ ವಾದ ಬೆಳಗಾವಿ ನಾಡಿನಲ್ಲಿ ಸಾಹಿತಿಗಳು ವಿದ್ವಾಂಸರು ತಮ್ಮದೇ ಆದ ಸಾಹಿತ್ಯಿಕ ಕೊಡುಗೆ ಕೊಟ್ಟ ನಾಡು ಎಂದರು.

ಪ್ರಾರಂಭದಲ್ಲಿ ಬಿ.ಬಿ. ದೇಸಾಯಿ ಪ್ರಾರ್ಥಿಸಿದರು. ಮೋಹನ ಗೌಡ ಪಾಟೀಲ ಸ್ವಾಗತಿಸಿದರು.ಸ.ರಾ. ಸುಳಕೂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ವೈ.ಮೆಣಸಿನಕಾಯಿ ನಿರೂಪಿಸಿದರು.

ಸಮಾರಂಭದಲ್ಲಿ ಬಸವರಾಜ ಗಾಗಿ೯, ಕಮಲಾ ಗಣಾಚಾರಿ, ಪ್ರಕಾಶ ಗಿರಿಮಲ್ಲನ್ನವರ, ಆರ್ ಬಿ ಬನಶಂಕರಿ, ಡಾ.ಭಾರತಿ ಮಠದ, ಬಾಳಗೌಡ ದೊಡಬಂಗಿ, ಸುನಿಲ ಸಾಣಿಕೊಪ್ಪ, ಡಾ ಎ ಡಿ ಇಟಗಿ, ಎಂ ಬಿ ಮರಲ್ಲಕನ್ನವರ, ಎ ಎ ಸನದಿ, ಎಸ್ಎಸ್ ಪಾಟೀಲ, ಪ್ರಕಾಶ ಅವಲಕ್ಕಿ, ಬಿ ಜಗದೀಶ, ಬಿಬಿ ಮಲಾಬಾಡಿ, ಎಬಿ ಘಾಟಗೆ ಉಪಸ್ಥಿತರಿದ್ದರು

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group