ದೇವಣಗಾಂವ ಬಕ್ಕೇಶ್ವರ ಜಾತ್ರೆ ಮಾ.27,28 ರಂದು

Must Read

ಸಿಂದಗಿ: ತಾಲೂಕಿನ ದೇವಣಗಾಂವ ಗ್ರಾಮದ ಆರಾಧ್ಯದೈವ ಗುರುಬಕ್ಕೇಶ್ವರ ಜಾತ್ರಾ ಮಹೋತ್ಸವವು ಮಾರ್ಚ 27, 28 ರಂದು ಜರುಗುವದು.

ದಿ.27 ರಂದು ಬೆಳಿಗ್ಗೆ 6ಕ್ಕೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಸಹಸ್ರನಾಮಾವಳಿ, ಮಂಗಳಾರತಿ ನಡೆಯುವದು, 8ಕ್ಕೆ ಎತ್ತಿನ ಗಾಡಿಯಲ್ಲಿ ಬಕ್ಕೇಶ್ವರರ, ಲಿಂ.ಶಿವಶಂಕರ ಸ್ವಾಮಿಗಳ ಭಾವಚಿತ್ರ ಮೆರವಣಿಗೆ, ಸುಮಂಗಲೆಯರಿಂದ ಕುಂಭ ಕಳಸದ ಮೆರವಣಿಗೆಯೂ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಭೀಮಾನದಿಗೆ ತೆರಳಿ ಗಂಗಾಪೂಜೆ ನೆರವೇರುವದು ನಂತರ ಪ್ರಸಾದ ವಿತರಣೆ. 

ಸಂಜೆ 4ಕ್ಕೆ ಕಳಸದ ಮೆರವಣಿಗೆಯೂ ಪುರವಂತರ ಸೇವೆ, ಮದ್ದು ಸುಡುವದು, ನವಿಲು ಕುಣಿತ, ಕರಡಿ ಕುಣಿತ, ಕುದುರೆ ಕುಣಿತ, ಬ್ಯಾಂಜೋ, ಹಲಿಗೆಮೇಳ, ಡೊಳ್ಳು, ಭಜನೆಗಳ ಮೂಲಕ ಗ್ರಾಮದೆಲ್ಲೆಡೆ ಸಂಚರಿಸಿ ಶ್ರೀ ಬಕ್ಕೇಶ್ವರ ಮಠಕ್ಕೆ ತಲುಪುವದು, 5ಕ್ಕೆ ರಥೋತ್ಸವವು ಅದ್ದೂರಿಯಾಗಿ ಜರುಗುವದು.

ಸಂಜೆ 7ಕ್ಕೆ ಧರ್ಮಸಭೆ ಸಾನ್ನಿಧ್ಯ ಅಫಜಲಪುರ ಹಿರೇಮಠದ ವಿಶ್ವರಾಧ್ಯಮಳೇಂದ್ರ ಶ್ರೀಗಳು, ನರೋಣಾದ ಗುರುಮಹಾಂತ ಶ್ರೀಗಳು, ಅಕ್ಕಲಕೋಟ ವಿರಕ್ತಮಠದ ಬಸವಲಿಂಗ ಶ್ರೀಗಳು, ಗೌರ(ಬಿ) ಹಿರೇಮಠದ ಕೈಲಾಸಲಿಂಗ ಶ್ರಿಗಳು, ಹತ್ತಿಕಣಬಸದ ಪ್ರಭುಶಾಂತ ಶ್ರೀಗಳು ಸೇರಿದಂತೆ ಅನೇಕ ಮಠಾಧಿಪತಿಗಳು ಆಗಮಿಸುವರು.

ದಿ.28 ರಂದು ಸಂಜೆ 5ಕ್ಕೆ ಕರ್ನಾಟಕ ಮಹಾರಾಷ್ಟ್ರದ ಪ್ರಸಿದ್ದ ಪೈಲ್ವಾನರಿಂದ ಜಂಗಿ ಕುಸ್ತಿಗಳು ಜರುಗುವವು ಎಂದು ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

Latest News

ಮಹಿಳೆಯರ ಅಬಲೆಯರ ಅನಾಥರ ಆಶಾಕಿರಣ ಎಸ್. ಜಿ. ಸುಶೀಲಮ್ಮ

ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಸಮಸಮಾಜವನ್ನು ಕಟ್ಟ ಬಯಸಿದ ಅಣ್ಣ ಬಸವಣ್ಣನವರ ಆದರ್ಶ ವ್ಯಕ್ತಿತ್ವಗಳಿಗೆ ಮಾರು ಹೋಗಿ ತಮ್ಮ ಬದುಕಿನ ಆರು...

More Articles Like This

error: Content is protected !!
Join WhatsApp Group