Homeಸುದ್ದಿಗಳುಡಿಕೆಶಿ ಕಾಂಗ್ರೆಸ್ ಟಿಕೆಟ್ ಮಾರಿಕೊಂಡಿದ್ದಾರೆ - ಚಂದ್ರ ಸಿಂಗ್ ಆರೋಪ

ಡಿಕೆಶಿ ಕಾಂಗ್ರೆಸ್ ಟಿಕೆಟ್ ಮಾರಿಕೊಂಡಿದ್ದಾರೆ – ಚಂದ್ರ ಸಿಂಗ್ ಆರೋಪ

ಬೀದರ: ರಾಜಕೀಯ ಹಿನ್ನೆಲೆಯೇ ಇರದ ಅಶೋಕ ಖೇಣಿಯವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟನ್ನು  ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಮಾರಾಟ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಅಳಿಯ ಚಂದ್ರ ಸಿಂಗ್ ಆರೋಪಿಸಿದ್ದಾರೆ

ಬೀದರ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ಅಶೋಕ ಖೇಣಿ ಮತ್ತು ಡಿ ಕೆ ಶಿವಕುಮಾರ್ ಬಿಸಿನೆಸ್ ಪಾಲುದಾರರಾಗಿದ್ದಾರೆ. ಅಶೋಕ ಖೇಣಿ ಗೆ ಸರಿಯಾಗಿ ಮಾತಾಡಲು ಬರೋದಿಲ್ಲ. ಕ್ಷೇತ್ರದಲ್ಲಿ ಅವರನ್ನು ಯಾರೂ ಗುರುತು ಕೂಡ ಹಿಡಿಯುವುದಿಲ್ಲ ಅಂಥವರಿಗೆ ಟಿಕೆಟ್ ಕೊಟ್ಟು ಕಾಂಗ್ರೆಸ್ ಪಕ್ಷ ಕೇವಲ ದುಡ್ಡು ಇದ್ದವರಿಗೆ ಮಾತ್ರ ಟಿಕೆಟ್ ನೀಡುವುದನ್ನು ಸಾಬೀತುಪಡಿಸಿದ್ದಾರೆ ಎಂದರು.

ಖೇಣಿಯವರಿಗೆ ಟಿಕೆಟ್ ಕೊಡುವಲ್ಲಿ ಜಿಲ್ಲೆಯಿಂದ ಹಿಡಿದು ರಾಜ್ಯದವರೆಗೂ ನಾಯಕರ ಪಿತೂರಿ ಇದೆ ಎಂದು ಆರೋಪಿಸಿದ ಅವರು, ತಮಗೆ ಟಿಕೆಟ್ ಕೊಡದೆ ಇದ್ದರೆ ತಾವು ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದರು.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

close
error: Content is protected !!
Join WhatsApp Group