- Advertisement -
ಬೆಳವಲ ನಾಡಿನ ಕುರುಚಲು ಗಿಡ. ಗಿಡದ ತುಂಬಾ ಮುಳ್ಳು ಆದರೆ ಒಳ್ಳೆಯ ಔಷಧೀಯ ಗುಣ ಹೊಂದಿರುವ ಕಾಯಿ ಇಂಗಳ ಕಾಯಿ.
ಮಾರ್ಚ್ ಇಂದ ಜೂನ್ ತಿಂಗಳ ಕಾಲ ಹೆಚ್ಚಾಗಿ ಬೆಳೆಯುವ ಕಾಯಿ.
ಹಣ್ಣು ಹಳದಿ ಬಣ್ಣ ನೆಲಕ್ಕೆ ಬೀಳುತ್ತದೆ. ಮೇಲಿನ ಸಿಪ್ಪೆ ತೆಗೆದು ಹುಣಸೆ ಹಣ್ಣಿನ ರೀತಿಯ ಪಲ್ಪ್ ಬರುತ್ತದೆ. ಇದನ್ನು ಸಂಗ್ರಹಿಸಿ ವರ್ಷಾನುಗಟ್ಟಲೆ ಇಡಬಹುದು.
- ಒಂದು ಕಡಲೆ ಗಾತ್ರದ ಪಲ್ಪನ್ನು ನುಂಗಿ ನೀರು ಕುಡಿಯುವುದರಿಂದ ಗ್ಯಾಸ್ಟ್ರಿಕ್ ನಿವಾರಣೆ ಆಗುತ್ತದೆ.
- ಸಿಪ್ಪೆ ತೆಗೆದ ಕಾಯಿಯನ್ನು ನೀರಲ್ಲಿ ಹಾಕಿ ನೀರನ್ನು ಕುಡಿಯುತ್ತಿದ್ದರೆ ಪಿತ್ತ ಶಮನವಾಗುತ್ತದೆ.
- ಹಣ್ಣನ್ನು ಉಪ್ಪಿನಲ್ಲಿಟ್ಟು ಆ ಉಪ್ಪನ್ನು ಅಡಿಗೆಗೆ ಉಪಯೋಗಿಸುವುದರಿಂದ ದೇಹದಲ್ಲಿ ಗ್ಯಾಸ್ಟ್ರಿಕ್ ಆಗುವುದಿಲ್ಲ.
- ಶರಭತ್ ಮಾಡಿ ಕುಡಿಯುವುದರಿಂದ ದಾಹ ಶಮನವಾಗುತ್ತದೆ.
- ಪ್ರತಿ ದಿನ ಹಣ್ಣಿನ ಪಲ್ಪ್ ಉಪಯೋಗಿಸುವುದರಿಂದ ಕರುಳಿನ ಹುಣ್ಣು ಗುಣವಾಗುತ್ತದೆ.
- ಹಣ್ಣಿನ ಉಪಯೋಗದಿಂದ ಜೀರ್ಣಶಕ್ತಿ ಹೆಚ್ಚುತ್ತದೆ.
- ಥೈರಾಯ್ಡ್ ಇದ್ದವರು ಉಪಯೋಗಿಸುವುದು ಒಳ್ಳೆಯದು.
- Advertisement -
ಸುಮನಾ ಮಳಲಗದ್ದೆ 9980182883