ಬಿಜೆಪಿಯಲ್ಲಿ ಬಂಡಾಯ; ಶರಣು ಸಲಗರಗೆ ಕಂಟಕ

Must Read

ಬೀದರ: ಮೂಲ ಬಿಜೆಪಿಯವರಿಗಷ್ಟೇ ಟಿಕೆಟ್ ಕೊಡಬೇಕು ಶರಣು ಸಲಗರ ಗೆ ಟಿಕೆಟ್ ಕೊಡಬಾರದು ಎಂದು ಜಿಲ್ಲೆಯ ಬಸವಕಲ್ಯಾಣದಲ್ಲಿ ಬಂಡಾಯವೊಂದು ತಲೆಯೆತ್ತಿದ್ದು ಶಾಸಕ ಸಲಗರ ಅವರಿಗೆ ಕಂಟಕ ಪ್ರಾಯವಾಗಲಿದೆ.

ಇದರಿಂದ ಬಸವಣ್ಣನ ನಾಡಿನಲ್ಲಿ ಬಿಜೆಪಿ ಬಚಾವೊ ಆಂದೋಲನ ಶುರುವಾದಂತಾಗಿದೆ. ಕ್ಷೇತ್ರದಲ್ಲಿ ಒಳಗಿನವರು ಹೊರಗಿನವರು ಎಂಬ ಕೂಗು ಕೇಳಿಬರುತ್ತಿದ್ದು ಬಸವಕಲ್ಯಾಣ ಶಾಸಕ ಶರಣು ಸಲಗರ ವಿರುದ್ಧ  ಬಿಜೆಪಿ ಮೂಲ ಕಾರ್ಯಕರ್ತರಿಂದ ಹೋರಾಟ ಆರಂಭವಾಗಿದೆ. 

ಈ ಮುಂಚೆ ಕೇಂದ್ರ ಗ್ರಹ ಸಚಿವ ಅಮಿತ್ ಷಾ ಅವರು ಶರಣು ಅವರಿಗೇ ಟಿಕೆಟ್ ಘೋಷಣೆ ಮಾಡುತ್ತಿದ್ಧಂತೆಯೇ ಭುಗಿಲೆದ್ದ ಬಂಡಾಯ ಬಸವಕಲ್ಯಾಣದ ಮಹಾ ಮನೆ ಕಲ್ಯಾಣ ಮಂಟಪದಲ್ಲಿ ಬೃಹತ್ ಆಂದೋಲನ ಶುರುವಾಗಿದೆ.

ಶರಣು ಸಲಗರಗೆ ಟಿಕೆಟ್ ನೀಡಬಾರದೆಂದು ಕಾರ್ಯಕರ್ತರು ಹೋರಾಟ ಮಾಡಿ ಶರಣು ಸಲಗರ ಬದಲು ಸ್ಥಳೀಯ ನಾಯಕರಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ.

ಮೂಲ ಬಿಜೆಪಿ ನಾಯಕರನ್ನು ಶರಣು ಸಲಗರ ಅವರು  ಕಡೆಗಣಿಸುತ್ತಿದ್ದಾರೆಂದು ಆರೋಪವಿದೆ. ಇದು ಕೇಂದ್ರದ ನಾಯಕರಲ್ಲಿ ಕಸಿವಿಸಿ ಉಂಟುಮಾಡಿದ್ದು ಮುಂದೆ ಅವರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆಂಬುದು ಕುತೂಹಲಕಾರಿಯಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group