ಬೀದರ: ಮೂಲ ಬಿಜೆಪಿಯವರಿಗಷ್ಟೇ ಟಿಕೆಟ್ ಕೊಡಬೇಕು ಶರಣು ಸಲಗರ ಗೆ ಟಿಕೆಟ್ ಕೊಡಬಾರದು ಎಂದು ಜಿಲ್ಲೆಯ ಬಸವಕಲ್ಯಾಣದಲ್ಲಿ ಬಂಡಾಯವೊಂದು ತಲೆಯೆತ್ತಿದ್ದು ಶಾಸಕ ಸಲಗರ ಅವರಿಗೆ ಕಂಟಕ ಪ್ರಾಯವಾಗಲಿದೆ.
ಇದರಿಂದ ಬಸವಣ್ಣನ ನಾಡಿನಲ್ಲಿ ಬಿಜೆಪಿ ಬಚಾವೊ ಆಂದೋಲನ ಶುರುವಾದಂತಾಗಿದೆ. ಕ್ಷೇತ್ರದಲ್ಲಿ ಒಳಗಿನವರು ಹೊರಗಿನವರು ಎಂಬ ಕೂಗು ಕೇಳಿಬರುತ್ತಿದ್ದು ಬಸವಕಲ್ಯಾಣ ಶಾಸಕ ಶರಣು ಸಲಗರ ವಿರುದ್ಧ ಬಿಜೆಪಿ ಮೂಲ ಕಾರ್ಯಕರ್ತರಿಂದ ಹೋರಾಟ ಆರಂಭವಾಗಿದೆ.
ಈ ಮುಂಚೆ ಕೇಂದ್ರ ಗ್ರಹ ಸಚಿವ ಅಮಿತ್ ಷಾ ಅವರು ಶರಣು ಅವರಿಗೇ ಟಿಕೆಟ್ ಘೋಷಣೆ ಮಾಡುತ್ತಿದ್ಧಂತೆಯೇ ಭುಗಿಲೆದ್ದ ಬಂಡಾಯ ಬಸವಕಲ್ಯಾಣದ ಮಹಾ ಮನೆ ಕಲ್ಯಾಣ ಮಂಟಪದಲ್ಲಿ ಬೃಹತ್ ಆಂದೋಲನ ಶುರುವಾಗಿದೆ.
ಶರಣು ಸಲಗರಗೆ ಟಿಕೆಟ್ ನೀಡಬಾರದೆಂದು ಕಾರ್ಯಕರ್ತರು ಹೋರಾಟ ಮಾಡಿ ಶರಣು ಸಲಗರ ಬದಲು ಸ್ಥಳೀಯ ನಾಯಕರಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ.
ಮೂಲ ಬಿಜೆಪಿ ನಾಯಕರನ್ನು ಶರಣು ಸಲಗರ ಅವರು ಕಡೆಗಣಿಸುತ್ತಿದ್ದಾರೆಂದು ಆರೋಪವಿದೆ. ಇದು ಕೇಂದ್ರದ ನಾಯಕರಲ್ಲಿ ಕಸಿವಿಸಿ ಉಂಟುಮಾಡಿದ್ದು ಮುಂದೆ ಅವರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆಂಬುದು ಕುತೂಹಲಕಾರಿಯಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ