spot_img
spot_img

ಸರಕಾರದ ಉಚಿತ ಸೇವೆ ಸದುಪಯೋಗ ಮಾಡಿಕೊಳ್ಳಿ – ಡಾ. ಮಂಜುನಾಥ

Must Read

- Advertisement -

ಸಿಂದಗಿ: ಇಂದಿನ ವಿಷಪೂರಿತ ಆಹಾರ ಸೇವನೆಯಿಂದ ಅಲ್ಲದೆ ಪ್ರತಿಯೊಬ್ಬರೂ ಸಾಂಸಾರಿಕ ಜೀವನದಲ್ಲಿ ಮಾನಸಿಕ ಒತ್ತಡದಿಂದ ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ವೈದ್ಯಾಧಿಕಾರಿ ಮಂಜುನಾಥ ಟಿ ಹೇಳಿದರು.

ತಾಲೂಕಿನ ಮೋರಟಗಿ ಸಮುದಾಯ ಕೇಂದ್ರದ ಉಪಕೇಂದ್ರ ಗಬಸಾವಳಗಿ ಗ್ರಾಮದಲ್ಲಿ ಹಮ್ಮಿಕೊಂಡ ಸಮುದಾಯ ಆಧಾರಿತ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ರೊಳಗೆ ಹೆಚ್.ಐ.ವಿ/ಏಡ್ಸ್, ಹೆಪಟೈಟಸ್ ಬಿ, ಮತ್ತು ಸಿಫಿಲಿಸ್, ಮುಕ್ತ ದೇಶವನ್ನಾಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ನವದೆಹಲಿಯಲ್ಲಿ ಹಾಗೂ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೂಸೈಟಿ ಬೆಂಗಳೂರು ಇವರು ಹೆಚ್.ಐ.ವಿ/ಏಡ್ಸ್ ಹೆಪಟೈಟಸ್ ಬಿ ಮತ್ತು ಸಿಫಿಲಿಸ್ ನಿಯಂತ್ರಿಸಲು ಮತ್ತು ತಡೆಗಟ್ಟಲು ಬದ್ಧವಾಗಿವೆ  ಸರಕಾರದ ಉಚಿತ ಸೇವೆಯ ಸದುಪಯೋಗ ಮಾಡಿಕೊಳ್ಳಿ ಎಂದರು.

ಚನ್ನಬಸವಣ್ಣ.ಎಂ.ದೇಗಿಲ ಆಪ್ತ ಸಮಾಲೋಚಕರು ಐ.ಸಿ.ಟಿ.ಸಿ ಸಮುದಾಯ ಆರೋಗ್ಯ ಕೇಂದ್ರ ಮೋರಟಗಿ ಮಿತ್ರ ಈರಣ್ಣ ಪಾಟೀಲ ಮಾತನಾಡಿ ನಮ್ಮ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ಹೆಚ್.ಐ.ವಿ, ಹೆಪಟೈಟಸ್ ಬಿ ಮತ್ತು ಸಿಫಿಲಿಸ್ ಬಿ.ಪಿ, ಶುಗರ್, ಆಭಾಕಾರ್ಡ್, ಟಿ.ಬಿ ಹಾಗೂ ಆರೋಗ್ಯಕ್ಕೆ ಸಂಬಂದಿಸಿದ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತದೆ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

- Advertisement -

ಜಿಲ್ಲಾ ಏಡ್ಸ್ ಸಂಯೋಜಕ ಬಾಬುರಾವ ತಳವಾರ ಮಾತನಾಡಿ, ದೇಶದಲ್ಲಿ ಪ್ರತಿಯೊಬ್ಬರೂ ಆರೋಗ್ಯದಿಂದ ಇರಬೇಕಾದರೆ ಕ್ರಮಬದ್ಧ ತಪಾಸಣೆ ಅಗತ್ಯ ಇರುತ್ತದೆ.  ಅಸಾಂಕ್ರಾಮಿಕ ರೋಗಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿ ಇತ್ತೀಚಿನ ದಿನ ಮಾನಗಳಲ್ಲಿ 30 ವರ್ಷ ಮೇಲ್ಪಟ್ಟ ಜನ ಸಾಮಾನ್ಯರಲ್ಲಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೆಚ್ಚಾಗಿ ಕಂಡು ಬರುತ್ತಿದ್ದು ಇದರಿಂದ ಮುಂದೆ ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಅದಕ್ಕೆ ಕಾರಣ ಮತ್ತು ಪರಿಹಾರಗಳನ್ನು ತಿಳಿಸಿ, ಜನರು ಸೇವಿಸುವ ಆಹಾರ ಪದ್ದತಿ ಮತ್ತು ಜೀವನಶೈಲಿ ಬಗ್ಗೆ ಮಾಹಿತಿಯನ್ನು ನೀಡಿ ಪ್ರತಿಯೊಂದು ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಪರೀಕ್ಷಿಸಿಕೊಳ್ಳಲು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಬಿ.ಎಸ್.ರಾಮಗಿರಿಮಠ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಬಸವರಾಜ ಆಲೂರ, ನಾನಾಗೌಡ, ಯಶವಂತ್ರಾಯ ಬಿರಾದಾರ, ಶಾಂತಗೌಡ ಬಿರಾದಾರ, ಸೇರಿದಂತೆ ಆರೋಗ್ಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.

ಕಾರ್ಯಕ್ರಮದಲ್ಲಿ ಒಟ್ಟು 125 ಜನರಿಗೆ ಉಚಿತ ಹೆಚ್.ಐ.ವಿ/ಏಡ್ಸ್ ಹೆಪಟೈಟಸ್ ಬಿ ಮತ್ತು ಸಿಫಿಲಿಸ್ ಪರೀಕ್ಷೆ ಮಾಡಲಾಯಿತು.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group