spot_img
spot_img

ಮೂಡಲಗಿಯಲ್ಲಿ ಶಿವಶರಣ ಮೇದಾರ ಕೇತಯ್ಯನವರ 892ನೇ ಜಯಂತಿ ಆಚರಣೆ

Must Read

- Advertisement -

ಮೂಡಲಗಿ: ಇಲ್ಲಿಯ ವಿದ್ಯಾನಗರದಲ್ಲಿನ ಮೇದಾರ ಸಮಾಜ ಬಾಂಧವರಿಂದ ಶಿವಶರಣ ಮೇದಾರ ಕೇತಯ್ಯ ಅವರ 892ನೇ ಜಯಂತಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಮಾತನಾಡಿ, ಶಿವಶರಣ ಮೇದಾರ ಕೇತಯ್ಯನವರು  ಹನ್ನೆರಡನೆಯ ಶತಮಾನದ ಶ್ರೇಷ್ಠ ವಚನಕಾರ ಹಾಗು ಶರಣ.

ಬಿದಿರುಬುಟ್ಟಿ, ಮೊರ ಮುಂತಾದವುಗಳನ್ನು ಮಾಡಿ ಅದರ ಕಾಯಕದ ಹಣದಿಂದ ದಾಸೋಹ ನಡೆಸಿ, ಪವಿತ್ರಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದ ಶರಣ. ವೀರಶೈವ ತತ್ತ್ವವನ್ನು ಅನುಸರಿಸಿ ಜನರಿಗೆ ಬೋಧಿಸಿದ ವಚನಗಳನ್ನು ಪಸರಿಸಿದ ತತ್ವ ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

- Advertisement -

ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಮತ್ತು ಬಿ.ವಾಯ್.ಶಿವಾಪೂರ ಮಾತನಾಡಿ, ಶಿವಶರಣ ಮೇದಾರ ಕೇತಯ್ಯನವರ ಮಾಡಿರುವ ಕಾರ್ಯಗಳು ಅಜರಾಮರವಾಗಿವೆ, ಜಯಂತಿಗಳು ಸೂರ್ಯ,ಚಂದ್ರ, ಭೂಮಿ ಇವರಿಗೆ ಇರುತ್ತವೆ, ಜಯಂತಿಗಳು ಜಯಂತಿಗಾಗಿ ಸೀಮಿತವಾಗಬಾರದು ಶರಣರಲ್ಲಿನ ತತ್ವಗಳನ್ನು ಅಳವಡಿಸಿಕೊಂಡು ಎಲ್ಲರೂ ಅನುಕರಣೆ ಮಾಡಿದರೆ ಸಾರ್ಥಕತೆಯಾಗುತ್ತದೆ ಎಂದರು.

ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಡಾ. ಮಾರುತಿ ಮೇದಾರ, ಸಮಾಜದ ಮುಖಂಡರಾದ ಸುಭಾಸ ಮೇದಾರ, ಭೀಮಶಿ ಮೇದಾರ, ರಮೇಶ ಮೇದಾರ, ಶಿವಾಜಿ ಮೇದಾರ, ಮಹೇಶ ಮೇದಾರ, ಸಾಗರ ಮೇದಾರ, ಆನಂದ ಮೇದಾರ, ಮಯೂರ ಮೇದಾರ,  ಪುರಸಭೆ ಸದಸ್ಯರಾದ ಆನಂದ ಟಪಾಲದಾರ, ಶಿವು ಸಣ್ಣಕ್ಕಿ, ಪ್ರಕಾಶ ಮಾದರ, ಪಾಂಡು ಮಹೇಂದ್ರಕರ, ಸಿದ್ದಪ್ಪ ಮಗದುಮ್ ಮತ್ತು ಬಸವರಾಜ ಪಾಟೀಲ, ಕಲ್ಮೇಶ ಗೋಕಾಕ, ಶಿವಬಸು ಸುಣಧೋಳಿ, ಮಲ್ಲು ಯಾದವಾಡ, ಈಶ್ವರ ಗೋಲಶೆಟ್ಟಿ, ವೀಜಪ್ಪ ಆಸಂಗಿ, ಸದಾ ನಿಡಗುಂದಿ, ಚೇತನ ಹೊಸಕೋಟಿ, ಬಾಲು ಮುಗಳಖೋಡ ಮತ್ತು ಮೇದಾರ ಸಮಾಜ ಬಾಂಧವರು  ಮತ್ತಿತರು ಇದ್ದರು.

- Advertisement -
- Advertisement -

Latest News

ತಾಯ ಹಾಲಿಗಿಂತಲೂ ‘ಇಪ್ಪೆ’ ಹಣ್ಣಿನ ರಸವೇ ಶ್ರೇಷ್ಠ !

ನೀವಿದನ್ನು ನಂಬಲೇಬೇಕು! HONEY TREE ಎಂದು ಇಂಗ್ಲೀಷ್ ನಲ್ಲಿ ಕರೆಯಲ್ಪಡುವ ಮಾದಕ ಅಂಶಗಳುಳ್ಳ, ಆದಿವಾಸಿಗಳು ಪೂಜಿಸುವ ಒಂದು ಪವಿತ್ರ ಮರ. ಇದನ್ನು BUTTER TREE ಎಂದೂ...
- Advertisement -

More Articles Like This

- Advertisement -
close
error: Content is protected !!
Join WhatsApp Group