spot_img
spot_img

ಕಬ್ಬು ಸಾಗಿಸುವ ಟ್ರಾಕ್ಟರ್ ಗಳಿಗೆ ರಸ್ತೆ ಸುರಕ್ಷತಾ ಸೂಚಿ ಬಿಡುಗಡೆ

Must Read

- Advertisement -

ಸದ್ಯ ಕಬ್ಬು ಸಾಗಿಸುವ ಹಂಗಾಮು ಆರಂಭವಾಗಿರುವುದರಿಂದ ಸಂಭವಿತ ಅಪಘಾತಗಳನ್ನು ತಪ್ಪಿಸಲು ಟ್ರಾಕ್ಟರ್ ಚಾಲಕರಿಗೆ ಮೂಡಲಗಿ ಪೊಲೀಸ್ ಠಾಣೆಯಿಂದ ಸುರಕ್ಷತಾ ಸೂಚಿ ಬಿಡುಗಡೆ ಮಾಡಲಾಗಿದೆ.

ಈ ಮೂಲಕ ಮೂಡಲಗಿ ಪೊಲೀಸ್‌ ಠಾಣಾ ವ್ಯಾಪ್ತಿಯ ಎಲ್ಲಾ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ, ಈ ವರ್ಷದ ಕಬ್ಬು ಕಟಾವು ಪ್ರಾರಂಭವಾಗಿದ್ದು, ಈ ಸಂದರ್ಭದಲ್ಲಿ ರೈತರು ತಮ್ಮ ಜಮೀನುಗಳಿಂದ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ಗಳಿಂದಾಗಿ ಮತ್ತು ವಾಹನ ಸವಾರರು ವಾಹನ ಚಾಲನೆ ಮಾಡುವ ಸಂದರ್ಭಗಳಲ್ಲಿ ಮಾಡುವ ಕೆಲವು ತಪ್ಪುಗಳಿಂದ ರಸ್ತೆ ಅಪಘಾತಗಳು ಸಂಭವಿಸಿ, ಸಾರ್ವಜನಿಕರ ಪ್ರಾಣಹಾನಿಗೆ ಕಾರಣವಾಗುತ್ತಿರುವುದರಿಂದ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ತರಹದ ವಾಹನ ಸವಾರರು ಮತ್ತು ಟ್ರ್ಯಾಕ್ಟರ್ ಲಾರಿ, ಚಾಲಕರಿಗೆ ಈ ಕೆಳಗಿನ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಪೊಲೀಸ್ ಇಲಾಖೆಯಿಂದ ಸೂಚಿಸಲಾಗಿದೆ.

ಸಾರ್ವಜನಿಕರಿಗೆ ಮತ್ತು ವಾಹನ ಚಾಲಕರಿಗೆ ಸೂಚನೆಗಳು:

  • ಕಬ್ಬು ತುಂಬಿದ ಟ್ರ್ಯಾಕ್ಟರ ಮತ್ತು ಲಾರಿಗಳ ಹಿಂದೆ ಹಿಂಬದಿ ಸವಾರರಿಗೆ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ರಿಫ್ಲೆಕ್ಟರಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳತಕ್ಕದ್ದು.
  • ಕಬ್ಬು ತುಂಬಿದ ಟ್ರ್ಯಾಕ್ಟರ ಮತ್ತು ಲಾರಿಗಳ ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ತಕ್ಕ ಕ್ರಮ ಜರುಗಿಸಲಾಗವುದು.
  • ವಾಹನ ಸವಾರರು ಮೊಬೈಲ್ ಮತ್ತು ಹೆಡ್‌ಫೋನ್ ಬಳಸುತ್ತಾ ವಾಹನ ಚಾಲನೆ ಮಾಡಬಾರದು.
  • ಕಬ್ಬು ತುಂಬಿದ ಹಾಗೂ ಖಾಲಿ ಟ್ರ್ಯಾಕ್ಟರ ಮತ್ತು ವಾಹನಗಳನ್ನು ರಸ್ತೆಯ ಮೇಲೆ ಸಾರ್ವಜನಿಕ ಸಂಚಾರಕ್ಕೆ ಮತ್ತು ಸುರಕ್ಷತೆಗೆ ಅಡಚಣೆಯಾಗದಂತೆ ನಿಲ್ಲಿಸುವುದು.
  • ಕಬ್ಬು ತುಂಬಿದ ಟ್ರ್ಯಾಕ್ಟರಗಳಲ್ಲಿ ಸಾರ್ವಜನಿಕ ಉಪದ್ರವದ ಧ್ವನಿವರ್ಧಕ / ಟೇಪ್ / ಸೌಂಡಗಳನ್ನು ಬಳಸತಕ್ಕದ್ದಲ್ಲ.
  • ಕಬ್ಬು ತುಂಬಿದ ಟ್ರ್ಯಾಕ್ಟರ ಮತ್ತು ಲಾರಿಗಳಲ್ಲಿ ಕಬ್ಬು ಹೊರಗೆ ಚಾಚುವಂತೆ ಮತ್ತು ಮಾನವ ಜೀವಕ್ಕೆ ಅಪಾಯವಾಗುವಂತೆ ಲೋಡ್ ಮಾಡಬಾರದು.
  • ಕಬ್ಬು ತುಂಬಿದ ಟ್ರ್ಯಾಕ್ಟರ್ ಮತ್ತು ಲಾರಿಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಸರಿಯಾಗಿ ನಿರ್ವಹಿಸಿಕೊಳ್ಳುವುದು.
  • ಹೈ ವೋಲ್ವೇಜ್ ಮತ್ತು ಹೈ ಭೀಮ್ ಬಲ್ಡ್ ಹೊಂದಿದ ಹೆಡ್‌ಲೈಟ್‌ಗಳನ್ನು ಬಳಸಬಾರದು.
  • ವಾಹನಕ್ಕೆ ನಿಗದಿ ಪಡಿಸಿದ ತೂಕದ ಪ್ರಮಾಣದಲ್ಲಿ ಕಬ್ಬನ್ನು ಲೋಡ್ ಮಾಡುವುದು.
  • ಕಬ್ಬು ತುಂಬಿದ ಟ್ರ್ಯಾಕ್ಟರ್ ಲೋಡ್ ಮತ್ತು ಸರಕು ವಾಹನಗಳನ್ನು ಕಡ್ಡಾಯವಾಗಿ ಬೈಪಾಸ್‌ ರಸ್ತೆಯ ಮೂಲಕ ಸಂಚರಿಸಬೇಕು.
  • ಮೂಡಲಗಿ ಪಟ್ಟಣದಲ್ಲಿ ಕಬ್ಬು ತುಂಬಿದ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ.
  • ಕಬ್ಬು ತುಂಬಿದ ಟ್ರ್ಯಾಕ್ಟರ್ ವಾಹನ / ಇತರೇ ವಾಹನ ಚಾಲಕರು ರಸ್ತೆಯ ಸುರಕ್ಷತಾ ನಿಯಮಗಳನ್ನು ಉಲ್ಲಂಘನೆ ಮಾಡಿದಲ್ಲಿ ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ದೂರು ನೀಡಲು ಕೋರಿದೆ.
  • ದೂರು ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು.
  • ಈ ಮೇಲಿನ ನಿಯಮಗಳನ್ನು ಪಾಲಿಸದೇ ಉಲ್ಲಂಘಿಸಿದಲ್ಲಿ ಅಂತಹ ಚಾಲಕರ /ಮಾಲಕರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗವುದು ಎಂಬುದಾಗಿ
  • ಡಿವೈಎಸ್ ಪಿ  ಗೋಕಾಕ ಉಪವಿಭಾಗ 9480804023
  • ಸಿಪಿಐ ಮೂಡಲಗಿ ವೃತ್ತ 9480804070
  • ಪಿಎಸ್ಐ ಮೂಡಲಗಿ 9480804068
  • ಮೂಡಲಗಿ ಪೊಲೀಸ್ ಠಾಣೆ 08334-251333 ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group