spot_img
spot_img

ಶೀಘ್ರದಲ್ಲೇ ‘ಲವಂಗಿ’ ಚಿತ್ರೀಕರಣ ಆರಂಭ

Must Read

spot_img

ಗದಗ: ಜಯಗಂಗಾ ಫಿಲಂ ಪ್ರೊಡಕ್ಷನ್ ಧಾರವಾಡ ಲಾಂಚನದಲ್ಲಿ ಪ್ರೇಮಕಥಾ ಹಂದರ ಹೊಂದಿದ ‘ಲವಂಗಿ’ ಕನ್ನಡ ಚಲನಚಿತ್ರ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ.

೧೬ನೇ ಶತಮಾನದ ಸತ್ಯಘಟನೆಯುಳ್ಳ ಪ್ರೇಮಕಥೆ ಇದಾಗಿದ್ದು, ರಾಷ್ಟೀಯ ಭಾವೈಕ್ಯತೆ ಮತ್ತು ಹಿಂದು-ಮುಸ್ಲಿಂ ಸಾಮರಸ್ಯ ಸಂದೇಶವನ್ನು ಚಿತ್ರ ಒಳಗೊಂಡಿದೆ.

ಡಾ.ಚಂದ್ರಮೌಳಿ ಶಿ. ನಾಯ್ಕರ ಅವರ ‘ಅಲಂಕಾರ ಸಾಮ್ರಾಟ’ ಕಾದಂಬರಿ ಆಧಾರಿತ ಚಿತ್ರವನ್ನು ಉತ್ತರ ಕರ್ನಾಟಕದವರೇ ಆದ ಪತ್ರಕರ್ತ, ಚಲನಚಿತ್ರ ನಿರ್ದೇಶಕ ಎಮ್.ಟಿಪ್ಪುವರ್ಧನ್  ನಿರ್ದೇಶನ ಮಾಡುತ್ತಿದ್ದಾರೆ.

ಅದ್ದೂರಿ ತಾರಾಬಳಗವು ಚಿತ್ರದಲ್ಲಿರಲಿದ್ದು ಛಾಯಾಗ್ರಹಣ ಗುರುದತ್ ಮುಸುರಿ, ಡಾ.ಟಿ.ಆರ್.ಜೋಡಟ್ಟಿ, ಡಾ.ಚಂದ್ರಮೌಳಿ ನಾಯ್ಕರ ಗೀತರಚನೆ, ಸುರೇಶ್ ಸಂಗೀತ , ಸಂಕಲನ ಟಿ.ಸೂರಜ್, ಪಿ.ಆರ್.ಓ ವಿಜಯಕುಮಾರ್, ಪತ್ರಿಕಾ  ಸಂಪರ್ಕ ಡಾ.ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಿಗಿ ಅವರದಿದೆ. ತುಮಕೂರಿನ ಕೆ.ಎನ್.ಚಂದ್ರಪ್ರಸಾದ ಸಹ ನಿರ್ಮಾಪಕರಾಗಿದ್ದಾರೆ.

ಚಿತ್ರೀಕರಣ ಬೆಂಗಳೂರು, ಧಾರವಾಡ, ಬಾಗಲಕೋಟೆ, ಗದಗ, ಗಜೇಂದ್ರಗಡ, ಸಿಂಗಟಾಲೂರ ಸುತ್ತಮುತ್ತ ೨೫ ದಿನಗಳ ಕಾಲ ಚಿತ್ರೀಕರಣವನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ ಎಂದು ನಿರ್ದೇಶಕ ಎಮ್.ಟಿಪ್ಪುವರ್ಧನ್ ಮತ್ತು ನಿರ್ಮಾಪಕ ಸಿ.ಎಸ್.ಎನ್ ತಿಳಿಸಿದ್ದಾರೆ.


ವರದಿ:
ಡಾಪ್ರಭು ಅ ಗಂಜಿಹಾಳ
ಮೊ-೯೪೪೮೭೭೫೩೪೬

- Advertisement -
- Advertisement -

Latest News

ಮೊರೆ ಕೇಳು ಮಹಾದೇವ

ಮೊರೆ ಕೇಳು ಮಹಾದೇವ ವರುಷದ ಮೊದಲ ಹಬ್ಬ ಯುಗಾದಿ ತರಲಿ ನಮಗೆಲ್ಲ ಹರುಷ ಅನುದಿನದಿ ಕೋಪ ತಾಪ ದ್ವೇಷ ಅಸೂಯೆ ತನುಮನಗಳಿಂದ ‌ ದೂರಾಗಲಿ ಮಹಾದೇವ|| ಚಿಗುರೆಲೆಗಳು  ಚಿಗುರುವಂತೆ ತರುಲತೆಗಳು ಬೆಳೆಯುವಂತೆ ನವ ಯುಗದಿ ನವ...
- Advertisement -

More Articles Like This

- Advertisement -
close
error: Content is protected !!