- Advertisement -
ಮೂಡಲಗಿ: ಇಲ್ಲಿಯ ಈರಣ್ಣ ನಗರದ ಕೆಇಬಿ ಪ್ಲಾಟ್‍ದ ಶ್ರೀ ದುರ್ಗಾದೇವಿ ಜಾತ್ರೆಯು ಏ. 11 ಮತ್ತು 12ರಂದು ಜರುಗಲಿದೆ.
ಏ. 11ರಂದು ರಾತ್ರಿ 8ಕ್ಕೆ ದುರ್ಗಾದೇವಿ ಭಜನಾ ಮಂಡಳಿಯಿಂದ ಭಜನೆ ಇರುವುದು, ರಾತ್ರಿ 10ಕ್ಕೆ ಸವದಿಯ ವೀರಭದ್ರೇಶ್ವರ ಕಲಾ ಸಂಘದವರಿಂದ ಶ್ರೀ ಕೃಷ್ಣ ಪಾರಿಜಾತ ಬಯಲಾಟ ಇರುವುದು.
ಏ. 12ರಂದು ಬೆಳಿಗ್ಗೆ 10ಕ್ಕೆ ದೇವಿಗೆ ಅಭಿಷೇಕ, 12ಕ್ಕೆ ಪಲ್ಲಕ್ಕಿ ಉತ್ಸವ, ಸತ್ಯವ್ವ ಪೂಜೇರಿ ಅವರಿಂದ ಭಂಡಾರ ಹಾರಿಸುವುದು, ಮಧ್ಯಾಹ್ನ 2ಕ್ಕೆ ಅನ್ನಪ್ರಸಾದ ಇರುವುದು.
- Advertisement -
ಉದ್ಘಾಟನೆ: ಜಾತ್ರಾ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಬಾಲಚಂದ್ರ ಬಾಲಚಂದ್ರ ಜಾರಕಿಹೊಳಿ ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ಯಲ್ಲಪ್ಪ ಮಾನಕಪ್ಪಗೋಳ, ಆರ್.ಬಿ. ಹಂದಿಗುಂದ, ಯಲ್ಲಪ್ಪ ಸಣ್ಣಕ್ಕಿ, ಮರೆಪ್ಪ ಮರೆಪ್ಪಗೋಳ, ಈರಪ್ಪ ಬನ್ನೂರ, ರಮೇಶ ಸಣ್ಣಕ್ಕಿ, ಸುರೇಶ ಸಣ್ಣಕ್ಕಿ, ರವಿ ಸಣ್ಣಕ್ಕಿ, ಶಾಬು ಸಣ್ಣಕ್ಕಿ ಭಾಗವಹಿಸುವರು.
ಕಲಾವಿದರಿಗೆ ಚಟುಕುಸಾಬ ಜಾತಗಾರ ಬಹುಮಾನಗಳನ್ನು ನೀಡುವರು.