spot_img
spot_img

ಕಕ್ಕಳಮೇಲಿ ಪಂಚಾಯಿತಿಗೆ ಅವಿರೋಧ ಆಯ್ಕೆ

Must Read

spot_img
- Advertisement -

ಸಿಂದಗಿ: ತಾಲೂಕಿನ ಮೋರಟಗಿ ಗ್ರಾಮದ  ಸಮೀಪದ ಕಕ್ಕಳಮೇಲಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಚುನಾವಣೆ ಯಲ್ಲಿ  ಅಧ್ಯಕ್ಷರಾಗಿ ಜಯಶ್ರೀ  ತಳವಾರ ಉಪಾಧ್ಯಕ್ಷರಾಗಿ ಬಸಮ್ಮ ಕೊಳಕೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಗುರುನಾಥ ಸಜ್ಜನ್ ಘೋಷಣೆ ಮಾಡಿದರು.

ಘೋಷಣೆಯ ನಂತರ ಪಟಾಕಿ ಸಿಡಿಸಿ ಗುಲಾಲ ಹಚ್ಚಿಕೊಂಡು ಸಿಹಿ ಹಂಚಿ ಸಂಭ್ರಮಿಸಿದರು ವಿಜಯೋತ್ಸವ ಕಾರ್ಯಕ್ರಮದಲ್ಲಿ  ನೂತನ ಅಧ್ಯಕ್ಷ ಜಯಶ್ರೀ ಮಾತನಾಡಿ ಗ್ರಾಮದ ಪ್ರಮುಖರು ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಜೊತೆಗೆ ಗ್ರಾಮವನ್ನು ಅಭಿವೃದ್ಧಿ ಪಡಿಸಲು ಸಲಹೆ ಸೂಚನೆ ಮತ್ತು ಮಾರ್ಗದರ್ಶನ ಕೂಡಾ ನೀಡಿದ್ದಾರೆ ಸದಸ್ಯರು ಮತ್ತು  ಗ್ರಾಮದ ಹಿರಿಯರು ಇಟ್ಟಂತ ವಿಸ್ವಾಸವನ್ನು  ಉಳಿಸಿಕೊಂಡು ಹೋಗುವುದರ ಜೊತೆಗೆ ಅಭಿವೃದ್ಧಿ ಯತ್ತ ದಾಪುಗಾಲು ಹಾಕುತ್ತೇನೆ ಎಂದು ಭರವಸೆ ನೀಡಿದರು.

ಚುನಾವಣೆ ಸಂದರ್ಭದಲ್ಲಿ ಗಲಾಟೆ ಆಗದಂತೆ ಪಿ ಎಸ್ ಐ ಭೀಮಪ್ಪ ರಬಕವಿ ತಂಡ ಸೂಕ್ತ ಬಂದೋಬಸ್ತಿ ನೀಡಿದರು.

- Advertisement -

ಇದೇ ಸಂದರ್ಭದಲ್ಲಿ ಮಾಜಿ ಜಿ ಪಂ ಸದಸ್ಯ ಬಿಂದುರಾಯಗೌಡ ಪಾಟೀಲ್, ಬಿ,ಸಿ,ಹಳ್ಳೆಪ್ಪಗೊಳ, ಶಂಕರ ಕೊರಕಿ, ಶರಣಪ್ಪ ಹಳ್ಳೆಪ್ಪಗೊಳ, ಶಂಕರ ಮಾಹೂರ್, ಈರಯ್ಯ ಮಠಪತಿ, ಭಗವಂತರಾಯ್ ಕಂಟಗಿ, ಮೈಬೂಬ ಮುಜಾವರ್ ಸೇರಿದಂತೆ ಗ್ರಾ.ಪಂ ಸರ್ವ ಸದಸ್ಯರು ಇದ್ದರು.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group