ಶ್ರೀ ರಾಮನ ತೊಡೆ ಮೇಲೆ ನಿಂತ ಶಾಸಕ ಶರಣು ಸಲಗರ್

Must Read

ಬೀದರ: ಶ್ರೀ ರಾಮ ನವಮಿಯ ನಿಮಿತ್ತ ಮರ್ಯಾದ ಪುರುಷೋತ್ತಮ ಶ್ರೀ ರಾಮನ ಕೊರಳಿಗೆ ಬೃಹತ್ ಹೂವಿನ ಹಾರ ಹಾಕಲು ಹೋದ ಬಿಜೆಪಿ ಶಾಸಕ ಶರಣು ಸಲಗರ ಶ್ರೀ ರಾಮನ ತೊಡೆಯ ಮೇಲೆ ಹತ್ತಿ ಹಾರ ಹಾಕಿದ ಪ್ರಸಂಗ ನಡೆಯಿತು.

ಇದು ಶ್ರೀ ರಾಮನವಮಿಯಂದೇ ನಡೆದ ಬಿಜೆಪಿ ಶಾಸಕನ ಮಹಾ ಎಡವಟ್ಟು ಎಂದು ಸಾಮಾಜಿಕ ಜಾಲತಾಣಗಳಲ್ಲಿ ರಾಮ ಭಕ್ತರಿಂದ ಆಕ್ರೋಶ ವ್ಯಕ್ತವಾಗಿದೆ.

ಬಸವಕಲ್ಯಾಣದಲ್ಲಿ‌ ನಡೆದ ರಾಮನವಮಿ‌ ಶೋಭಾ ಯಾತ್ರೆ ವೇಳೆ ಘಟನೆ ನಡೆದಿದ್ದು ಶಾಸಕ ಶರಣು ಸಲಗರ ಅವರು ಶ್ರೀ ರಾಮನ‌ ಮೂರ್ತಿಯ ಮೇಲೆ ನಿಂತು ಪುಷ್ಪಾರ್ಚಣೆ ಮಾಡಿದ್ದಕ್ಕೆ ಮಾಜಿ ಶಾಸಕ‌ ಮಲ್ಲಿಕಾರ್ಜುನ ಖೂಬಾ ತಮ್ಮ ಫೇಸ್‌ಬುಕ್‌ನಲ್ಲಿ‌ ಪೊಸ್ಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

ಈ ಮುಂಚೆ ಮೆರವಣಿಗೆಯಲ್ಲಿ ಭಾಗವಹಿಸಿದ ಸಲಗರ ಅವರು ಶ್ರೀ ರಾಮ ಭಕ್ತರೊಂದಿಗೆ ಡಾನ್ಸ್ ಮಾಡಿ, ಉತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಂಡರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group