spot_img
spot_img

ನೆರೆ ಸಂತ್ರಸ್ತರಿಗೆ ಮೂರು ತಿಂಗಳಲ್ಲಿ ಮನೆ: ಬಾಲಚಂದ್ರ ಜಾರಕಿಹೊಳಿ ಆಶ್ವಾಸನೆ

Must Read

- Advertisement -

 

ಗೋಕಾಕ: ಬಾಕಿ ಉಳಿದಿರುವ ನೆರೆ ಸಂತ್ರಸ್ತರ ಮನೆಗಳನ್ನು ಮೂರು ತಿಂಗಳೊಳಗೆ ನಿರ್ಮಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಅರಭಾವಿ ಶಾಸಕ ಮತ್ತು ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಅವರು, ಕಳೆದ ಭಾನುವಾರದಂದು ತಾಲೂಕಿನ ತಳಕಟ್ನಾಳ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿ ಸಂತ್ರಸ್ತರ ಸಮಸ್ಯೆಗಳನ್ನು ಬಗೆಹರಿಸಿ ಬಡಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವದಾಗಿ ತಿಳಿಸಿದರು.

- Advertisement -

ಪ್ರವಾಹ ಬಂದ ಸಂದರ್ಭದಲ್ಲಿ ನದಿ ತೀರದ ಗ್ರಾಮಗಳು ಮುಳುಗಡೆಯಾಗಿದ್ದರಿಂದ ಇನ್ನು ಕೆಲವರಿಗೆ ಮನೆಗಳು ಮಂಜೂರಾಗಿಲ್ಲ. ದಂಡಿನ ಮಾರ್ಗ ರಸ್ತೆಗೆ ಹೊಂದಿಕೊಂಡಿರುವ ನದಿ ತೀರದ ನೆರೆಸಂತ್ರಸ್ತರಿಗೆ ಮುಂದಿನ ದಿನಗಳಲ್ಲಿ ಅನುಕೂಲ ಮಾಡಿಕೊಡಲಾಗುವದೆಂದು ಹೇಳಿದರು.

  ಚುನಾವಣೆಗೆ ಇನ್ನು ಕೆಲವೇ ದಿನಗಳ ಬಾಕಿ ಇದೆ. ಕಾರ್ಯಕರ್ತರು ನಾವು ಮಾಡಿರುವ ಪ್ರಗತಿ ಕಾರ್ಯಗಳನ್ನು ಪ್ರತಿ ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಬೇಕು. ಕಳೆದ ಚುನಾವಣೆಗಿಂತ ಈ ಬಾರಿ ಅತಿ ಹೆಚ್ಚಿನ ಮತಗಳ ಮುನ್ನಡೆ ದೊರಕಿಸಿ ಕೊಡಬೇಕು. ನಿಮ್ಮ ಸೇವೆಗೆ ಸದಾ ಸಿದ್ಧನಾಗಿದ್ದೇನೆಂದು ಅವರು ತಿಳಿಸಿದರು.

ಪಿಕೆಪಿಎಸ್ ಅಭಿವೃದ್ಧಿಗೆ ಸದಸ್ಯರು ಸಹಕಾರ ತತ್ವದಡಿ ಕಾರ್ಯನಿರ್ವಹಿಸಬೇಕು. ಸದಸ್ಯರಿಗೆ ಸಾಲ ಸೌಲಭ್ಯ ನೀಡುವ ಮೂಲಕ ಅವರ ಆರ್ಥಿಕ ಅಭಿವೃದ್ಧಿಗೆ ನೆರವು ನೀಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

- Advertisement -

ಇದೇ ಸಂದರ್ಭದಲ್ಲಿ ತಳಕಟ್ನಾಳ ಗ್ರಾಮಸ್ಥರು, ವಿವಿಧ ಸಂಘಗಳ ಸದಸ್ಯರು ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿದರು.

ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಲಕ್ಷ್ಮಣ ಮುಸಗುಪ್ಪಿ, ಮುಖಂಡರಾದ ಲಕ್ಷ್ಮಣಗೌಡ ಪಾಟೀಲ, ಹನಮಂತ ನಾಯಕ, ನಿಂಗಪ್ಪ ದೊಡ್ಡಮನಿ, ಲಕ್ಕಪ್ಪ ಹುಲಕುಂದ ಕೆಂಪಣ್ಣ ಬೆಣ್ಣಿ, ವಿಠ್ಠಲ ಹುಲ್ಲಾರ, ವಿರುಪಾಕ್ಷಿ ಮುಂಗರವಾಡಿ, ರಾಮಣ್ಣ ಬಾನಿ, ಗುರುಸಿದ್ದಪ್ಪ ಕಲ್ಲವ್ವಗೋಳ, ಬಾಳೇಶ ಬಾಗೇವಾಡಿ, ಅನ್ನವ್ವಾ ಅಜ್ಜನ್ನವರ, ಯಲ್ಲಪ್ಪ ಕೌಜಲಗಿ, ಪುಂಡಲೀಕ ಹುಚ್ಚನಟ್ಟಿ, ನಾಗಪ್ಪ ಮಾದರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಊರಿಗೆ ಬಸ್ ಇಲ್ಲವೆಂದು ಕುಡಿದು ಬಸ್ ತೆಗೆದುಕೊಂಡು ಹೊದ ಭೂಪ!

ಬೀದರ: ತನ್ನ ಊರಿಗೆ ಬಸ್‌ ಇಲ್ಲವೆಂದು ಕುಡಿದ ಮತ್ತಿನಲ್ಲಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಾರಿಗೆ ಬಸ್‌ ಚಲಾಯಿಸಿಕೊಂಡು ಹೋದ ಭೂಪ! ಗಡಿ ಬೀದರ್ ಜಿಲ್ಲೆಯ ಔರಾದ ಬಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group