ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದ ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರೆಯ ನಿಮಿತ್ತವಾಗಿ ರವಿವಾರದಂದು ಜರುಗಿದ ಜೋಡೆತ್ತಿನ ಒಂದು ನಿಮಿಷ ಗಾಡಿ ಓಟದ ಸ್ಪರ್ಧೆಯಲ್ಲಿ ಜೋಡೆತ್ತುಗಳು ಚಿನ್ನಾಟವಾಡುತ್ತಾ ಮಿಂಚಿನತೆ ಓಡಿದ್ದೇ ಓಡಿದ್ದು ಕಂಡ ಜನರ ಹರ್ಷೋದ್ಗಾರದೊಂದಿಗೆ ಮನ ರಂಜಿಸಿತು.
ಒಂದು ನಿಮಿಷ ಗಾಡಿ ಓಟದ ಸ್ಪರ್ಧೆಯಲ್ಲಿ ಸುಮಾರು ೨೬ ಬಂಡಿಗಳು ಭಾಗಹಿಸಿದವು. ಸ್ಪರ್ಧೆಯಲ್ಲಿ ಹಲಗಲಿಯ ನಾಗಲಿಂಗೇಶ್ವರ ಪ್ರಸನ್ನ ಎತ್ತುಗಳು ಪ್ರಥಮ ಸ್ಥಾನ, ಮರಿಕಟ್ಟಿಯ ಜೈ ಹನುಮಾನ ಪ್ರಸನ್ನ ಎತ್ತುಗಳು ದ್ವಿತೀಯ ಸ್ಥಾನ, ನಾಗರಾಳದ ಜೈ ಹನುಮಾನ ಪ್ರಸನ್ನ ಎತ್ತುಗಳು ತೃತೀಯ ಸ್ಥಾನ, ಗೋರಬಾಳದ ಗ್ರಾಮದೇವಿ ಪ್ರಸನ್ನ ಎತ್ತುಗಳು ಚತುರ್ಥಸ್ಥಾನ, ಇಟ್ಟಾಳದ ಬೀರೇಶ್ವರ ಎತ್ತುಗಳು ಐದನೇ ಸ್ಥಾನ, ಉದಗಟ್ಟಿಯ ರಾಜು ಪೂಜೇರಿ ಎತ್ತುಗಳು ಆರನೇ ಸ್ಥಾನ ಮತ್ತು ಲಕ್ಷ್ಮೀ ದೇವಿ ಪ್ರಸನ್ನ ಎತ್ತುಗಳು ಏಳನೇ ಸ್ಥಾನ, ಹೂಲಿಕಟ್ಟಿಯ ಮಾರುತೇಶ್ವರ ಪ್ರಸನ್ನ ಎತ್ತುಗಳು ಎಂಟನೇ ಸ್ಥಾನ, ತೇರದಾಳದ ಪ್ರಭುಲಿಂಗೇಶ್ವರ ಪ್ರಸನ್ನ ಎತ್ತುಗಳು ಒಂಬತ್ತನೇ ಸ್ಥಾನ, ನೇಗಿನಹಾಳದ ಮಹಾಲಿಂಗೇಶ್ವರ ಪ್ರಸನ್ನ ಎತ್ತುಗಳು ಹತ್ತನೇ ಸ್ಥಾನ ಪಡೆದುಕೊಂಡವು.
ಭಾರಿ ಬಿಸಿಲಿನಲ್ಲಿ ಜೋಡೆತ್ತಿನ ಒಂದು ನಿಮಿಷ ಗಾಡಿ ಓಟದ ಸ್ಪರ್ಧೆಯನ್ನು ವೀಕ್ಷಿಸಲು ಆಗಮಿಸಿ ಜನರಿಗೆ ಯಾದವಾಡ ಗ್ರಾಮದ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಪಾದಾಯಾತ್ರಾ ಸೇವಾ ಸಮಿತಿಯವರು ಸಾವಿರಾರು ಜನರಿಗೆ ತಂಪಾದ ಮೊಸರು-ಅವಲಕ್ಕಿ ವಿತರಿಸಿದರು.
ಜಾತ್ರಾ ಕಮೀಟಿಯ ಪದಾಧಿಕಾರಿಗಳು ಮತ್ತು ಬಹುಮಾನ ನೀಡಿದವರು ಸ್ಪರ್ಧೆಗೆ ಚಾಲನೆ ನೀಡಿದರು.