spot_img
spot_img

ವ್ಯವಸ್ಥೆಗೊಂದು ಕಪಾಳ ಮೋಕ್ಷ; ಸಂತ್ರಸ್ತರ ನುಡಿ

Must Read

- Advertisement -

೨೦೧೭ ರ ಗ್ಯಾಂಗ್ ರೇಪ್ ಪ್ರಕರಣದ ೧೩ ಆರೋಪಿಗಳು ಖುಲಾಸೆ

ಹೈದರಾಬಾದ್: ಸನ್ ೨೦೦೭ ರ ಆ. ೨೦ ರಂದು ಸುಮಾರು ೩೦ ಸದಸ್ಯರ ಮಾವೋ ನಕ್ಸಲ ವಿರೋಧಿ ಪಡೆಯ ಪೊಲೀಸರು ಹಳ್ಳಿಯೊಂದರಲ್ಲಿ ಶೋಧ ಕಾರ್ಯ ಕೈಗೊಳ್ಳುವಾಗ ವಿಶೇಷ ಆದಿವಾಸಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದ ೧೩ ಪೊಲೀಸರನ್ನು ಹೈದರಾಬಾದ್ ಕೋರ್ಟು ಖುಲಾಸೆಗೊಳಿಸಿ ತೀರ್ಪು ನೀಡಿದೆ.

ಇದು ವ್ಯವಸ್ಥೆಯ ಕಪಾಳಮೋಕ್ಷ ಎಂದು ಸಂತ್ರಸ್ತರು ಹತಾಶೆಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

- Advertisement -

ಈ ಬಗ್ಗೆ ಮಾಧ್ಯಮಗಳಿಗೆ ಮಾತನಾಡಿದ ಒಬ್ಬ ೪೫ ರ ಮಹಿಳೆ, ಪೊಲೀಸರು ಪೊಲೀಸರ ವಿರುದ್ಧ ತನಿಖೆ ನಡೆಸುವುದಿಲ್ಲ. ನ್ಯಾಯ ನಮಗೆ ಸಿಗುವುದಿಲ್ಲ. ನಮಗೆ ಪರಿಹಾರ ನೀಡಬೇಕೆಂದು ಕೋರ್ಟು ಹೇಳಿದೆ ಇದರಿಂದಲೇ ತಿಳಿಯುತ್ತದೆ ನಾವು ಬಲಿಪಶುಗಳಾಗಿದ್ದೇವೆ ಎಂದು, ಎಂದಿದ್ದಾಳೆ.

ಗುರುವಾರದಂದು ಹೈದರಾಬಾದ್ ನ ಎಸ್ ಸಿ ಎಸ್ಟಿ ಶೋಷಣೆ ತಡೆ ಹಾಗೂ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ತೀರ್ಪು ಹೊರಬಿದ್ದಿದ್ದು, ೨೦೧೭ ರ ಗ್ಯಾಂಗ್ ರೇಪ್ ನ ಎಲ್ಲಾ ೧೩ ಪೊಲೀಸರನ್ನು ಖುಲಾಸೆಗಲೊಳಿಸಲಾಗಿದೆ. 

ಬಲಾತ್ಕಾರಕ್ಕೊಳಗಾದ ೧೧ ಮಹಿಳೆಯರ ಪೈಕಿ ಇಬ್ಬರು ಮರಣ ಹೊಂದಿದ್ದಾರೆ. ತೀರ್ಪಿನ ಕುರಿತು ಮಾತನಾಡಿದ ಸಂತ್ರಸ್ತೆಯೊಬ್ಬಳು, ಪ್ರಕರಣ ಜರುಗಿದ ನಂತರ ನಮ್ಮ ಪತಿ ಹಾಗೂ ಹಳ್ಳಿಯ ಹಿರಿಯರು ನಮ್ಮನ್ನು ತುಂಬಾ ಕೀಳಾಗಿ ನೋಡುತ್ತಿದ್ದರು.

- Advertisement -

ಕುಟುಂಬದಿಂದ ದೂರ ಇಟ್ಟಿದ್ದರು. ನಮ್ಮ ಮಕ್ಕಳೊಡನೆಯೇ ಮಾತನಾಡಲು ನಮಗೆ ಅವಕಾಶ ಇರಲಿಲ್ಲ. ಹಲವು ದಿನಗಳ ನಂತರ ಶುದ್ಧೀಕರಣ ಕೈಗೊಂಡನಂತರ ನಮ್ಮನ್ನು ಮನೆಯೊಳಗೆ ಕರೆಯಲಾಯಿತು ಎಂದಿದ್ದಾಳೆ.

- Advertisement -
- Advertisement -

Latest News

ಊರಿಗೆ ಬಸ್ ಇಲ್ಲವೆಂದು ಕುಡಿದು ಬಸ್ ತೆಗೆದುಕೊಂಡು ಹೊದ ಭೂಪ!

ಬೀದರ: ತನ್ನ ಊರಿಗೆ ಬಸ್‌ ಇಲ್ಲವೆಂದು ಕುಡಿದ ಮತ್ತಿನಲ್ಲಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಾರಿಗೆ ಬಸ್‌ ಚಲಾಯಿಸಿಕೊಂಡು ಹೋದ ಭೂಪ! ಗಡಿ ಬೀದರ್ ಜಿಲ್ಲೆಯ ಔರಾದ ಬಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group