ಸಿಂದಗಿ: ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ಅದೆಷ್ಟೋ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಆ ಮಕ್ಕಳನ್ನು ಗುರುತಿಸಿ ಶೈಕ್ಷಣಿಕವಾಗಿ ಮುಂದೆ ಬರುವ ನಿಟ್ಟಿನಲ್ಲಿ ಇಂದಿನ ಮಕ್ಕಳೆ ನಾಳಿನ ಪ್ರಜೆಗಳು ಎಂದು ತಿಳಿದು ಉತ್ತಮ ಗುಣಮಟ್ಟದ ಶಿಕ್ಷಣ ಕೊಡುತ್ತಿರುವ ಕಲ್ಪವೃಕ್ಷ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಹಾಗೂ ಅಧ್ಯಕ್ಷರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಹರನಾಳ ಹೇಳಿದರು.
ತಾಲೂಕಿನ ಮೋರಟಗಿ ಗ್ರಾಮದ ಕಲ್ಪವೃಕ್ಷ ವಿದ್ಯಾಸಂಸ್ಥೆಯಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಶಿಕ್ಷಕರ ದಿನಾಚರಣೆಯ ಸವಿನೆನಪಿಗಾಗಿ ಕಲ್ಪವೃಕ್ಷವಿದ್ಯಾಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗುರುಗಳು ಮತ್ತು ಗುರುಮಾತೆಯರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭವನ್ನು ಜೋತಿ ಬೆಳಗಿಸಿ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಗುರಿ ಬಹಳಷ್ಟು ಪ್ರಾಮುಖ್ಯತೆ ವಹಿಸುತ್ತದೆ ಮೊದಲುಗುರಿ ಇಟ್ಟುಕೊಳ್ಳಿ ಗುರುವಿನ ಮಾರ್ಗದರ್ಶನದಲ್ಲಿ ಸಾಗಿ ನೀವು ಕಂಡ ಕನಸು ನನಸಾಗುತ್ತದೆ ಎಂದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ಬಸವರಾಜ ಜಿಗಳೂರ ಮಾತನಾಡಿ, ಹಿಂದಿನ ಶಿಕ್ಷಣ ಗುರುಕುಲ ಪದ್ದತಿಯಲ್ಲಿತ್ತು ಎನ್ನುವುದನ್ನು ನಾವು ಕೇಳಿದ್ದೇವೆ ಆದರೆ ಇಂದಿನ ಜಾಗತೀಕರಣ ಜಗತ್ತಿನಲ್ಲಿ ವಾಟ್ಸಪ ಇಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬರುವಂತ ದೃಶ್ಯಾವಳಿಗಳಿಗೆ ಮಾರುಹೋಗಿ ಅದರಂತೆ ನಟಿಸಲು ಹೋಗಿ ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಆ ಪ್ರಮಾದಕ್ಕೆ ಕೈ ಹಾಕದೇ ತಾವೆಲ್ಲರು ಉತ್ತಮ ಶಿಕ್ಷಣವಂತರಾದರೆ ಮಾತ್ರ ಉತ್ತಮ ದೇಶ ಕಟ್ಟಲು ಸಾಧ್ಯಎಂದು ಸಲಹೆ ನೀಡಿದರು.
ಕೆರೂಟಗಿಯ ಸಿದ್ದರಾಮೇಶ್ವರ ಹಿರೇಮಠದ ಪೂಜಶ್ರೀ ಶಿವನಬಸವ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿದ್ದರು, ಶ್ರೀ ಷ,ಬ್ರ,ಗುರುಸಿದ್ದೇಶ್ವರ ಶಿವಾಚಾರ್ಯ ಹಿರೂರ ಸಾನ್ನಿಧ್ಯ ವಹಿಸಿದ್ದರು, ಸಂಸ್ಥೆಯ ಅದ್ಯಕ್ಷ ಶಿವಶರಣಗೌಡ ಬಿರಾದಾರ, ಅಕ್ಷರ ದಾಸೋಹ ಅದಿಕಾರಿ ಎಸ,ಎಸ್,ಕತ್ನಳ್ಳಿ, ಕ್ಷೇತ್ರ ಸಮನ್ವಯಾಧಿಕಾರಿ ಆಯ್.ಎಸ್.ಟಕ್ಕೆ, ನೊಡಲ್ ಅಧಿಕಾರಿ ಎಸ್,ಬಿ.ಕಮತಗಿ, ಸಂಸ್ಥೆಯ ಕಾರ್ಯದರ್ಶಿ ಎಸ್.ಎಚ್.ದುಳಬಾ, ರವಿ ಬಿರಾದಾರ, ಸಿದ್ರಾಮಪ್ಪ ಬಿರಾದಾರ, ಬಿ.ಎಸ.ಬಿರಾದಾರ, ಸೇರಿದಂತೆ ಹಲವರು ವೇದಿಕೆ ಮೇಲಿದ್ದರು.
ಪ್ರಾಥಮಿಕ ಪ್ರೌಡ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಿಬ್ಬಂದಿ ಇದ್ದರು.