ಸಿಂದಗಿ: ಪಟ್ಟಣದ ಮಹಿಳಾ ಜಾಗರಣಾ ವೇದಿಕೆಯ ಸಂಚಾಲಕಿ ಹಾಗೂ ಬಿಜೆಪಿ ಮಾಜಿ ಕಾರ್ಯದರ್ಶಿ ಶೈಲಜಾ ಸ್ವಾವರಮಠ ಅವರು ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷದ ತತ್ವ ಸಿದ್ದಾಂತವನ್ನು ಮೆಚ್ಚಿ ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಅವರನ್ನು ಸಿಂದಗಿ ಮತಕ್ಷೇತ್ರದ ಅಭ್ಯರ್ಥಿ ವಿಶಾಲಾಕ್ಷಿ ಶಿವಾನಂದ ಪಾಟೀಲ ಹಾಗೂ ತಾಲೂಕಾಧ್ಯಕ್ಷ ಸಂತೋಷ ಹರನಾಳ ಅವರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿರಸ್ತೆದಾರ ಬಿ.ಎನ್ ಪಾಟೀಲ, ನಾಗಪ್ಪ ಮನಗೂಳಿ ಸೇರಿದಂತೆ ಅನೇಕರಿದ್ದರು.