spot_img
spot_img

ಶ್ರೀ ಹಡಪದ ಅಪ್ಪಣ್ಣ ಸಹಕಾರಿ ಸಂಘದಿಂದ ಅಪಘಾತ ವಿಮಾ ಚೆಕ್ ವಿತರಣೆ

Must Read

- Advertisement -

ಸಿಂದಗಿ: ಪಟ್ಟಣದ ಶ್ರೀ ಹಡಪದ ಅಪ್ಪಣ್ಣ ವಿವಿಧೋದ್ಧೇಶಗಳ ಸಹಕಾರಿ ಸಂಘ (ನಿ) ಸಿಂದಗಿಯಲ್ಲಿ  ಸಂಘದ ಸದಸ್ಯರು ಯಾರಾದರೂ ಅಪಘಾತಕ್ಕೀಡಾಗಿ ಸಾವನ್ನಪ್ಪಿದರೆ ಈ ಸಂಘ ಒಂದು ಲಕ್ಷ ರೂಪಾಯಿ ವಿತರಿಸುತ್ತದೆ. ಅದು ಜನತಾ ಅಪಘಾತ ವಿಮಾ ಯೋಜನೆಯ ಯುನೈಟೆಡ್ ಇಂಡಿಯಾ ಇನ್ಸೂರನ್ಸ್ ಕಂ.ಲಿ ವತಿಯಿಂದ ವಿತರಿಸಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಶಿವಾನಂದ ಹಡಪದ ಹೇಳಿದರು.

ಪಟ್ಟಣದ ಶ್ರೀ ಹಡಪದ ಅಪ್ಪಣ್ಣ ವಿವಿಧೋದ್ಧೇಶಗಳ ಸಹಕಾರಿ ಸಂಘ (ನಿ) ಸಿಂದಗಿಯಲ್ಲಿ ಈ ಸಂಘದ ವತಿಯಿಂದ ಅಪಘಾತ ವಿಮೆಯ ಒಂದು ಲಕ್ಷ ರೂಪಾಯಿಯ ಚೆಕ್ಕನ್ನು ವಿತರಿಸಿ ಮಾತನಾಡಿ, ಸದರಿ ಸಂಘದ ಮೃತ ಸದಸ್ಯರಾದ ದಿವಂಗತ ಮಹಾಂತೇಶ ಸೊನ್ನದ ಇವರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದು, ಅವರ ಕುಟುಂಬಸ್ಥರಿಗೆ ಸಂಘದ ವತಿಯಿಂದ ಈ ಯೋಜನೆಯ ಒಂದು ಲಕ್ಷ ರೂಪಾಯಿ ಚೆಕ್ಕನ್ನು ವಿಜಯಪುರ ಸಹಕಾರ ಸಂಘಗಳ ಉಪ ನಿಬಂಧಕ ಸಿ ಎಸ್ ನಿಂಬಾಳ, ಸಹಕಾರಿ ಅಭಿವೃದ್ಧಿ ಅಧಿಕಾರಿ ಎಮ್ ಎಸ್ ರಾಠೋಡ,  ಕಾರ್ಯನಿರ್ವಾಹಣಾಧಿಕಾರಿ ಮಲ್ಲು ಹಡಪದ, ಕುಟುಂಬಸ್ಥರಿಗೆ ವಿತರಿಸಿದರು. 

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಕಂಠಪ್ಪ ಹಡಪದ, ಪರಶುರಾಮ ಕಾಶೆ, ಮಂಜುನಾಥ ಹಡಪದ, ಚಿದಾನಂದ ಹಡಪದ, ಸುಭಾಸ ದೇವರನಾವದಗಿ, ರಾಜು ನಾವಿ ಹಾಗೂ ಸಿಬ್ಬಂದಿಗಳಾದ ಶ್ರೀಮತಿ ವಿದ್ಯಾ ಪ್ರಕಾಶ ನಾವಿ, ಭಾಗಣ್ಣ ಹಡಪದ, ರಾಹುಲ ಹಿಂಚಗೇರಿ, ಶಿವಶರಣ ಸಿಂದಗಿ, ಪ್ರವೀಣ ಹಡಪದ, ಶರಣು ಕುಕನೂರ, ಭಾಗೇಶ ದೇವೂರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಸಿಂದಗಿ ಮಂಡಲ ವತಿಯಿಂದ ರಸ್ತಾರೋಖೋ ಪ್ರತಿಭಟನೆ

ಸಿಂದಗಿ - ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿದ್ದು, ರಾಜ್ಯದಲ್ಲಿನ ಕಾನೂನ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಹಾಗೂ ವಾಲ್ಮೀಕಿ ನಿಗಮದ ಹಗರಣದ...
- Advertisement -

More Articles Like This

- Advertisement -
close
error: Content is protected !!
Join WhatsApp Group