spot_img
spot_img

ಸಿಂದಗಿಯಲ್ಲಿ ಅಂಬೇಡ್ಕರ್ ಜಯಂತಿ

Must Read

- Advertisement -

ಸಿಂದಗಿ: ಪಟ್ಟಣದ ಡಾ.  ಅಂಬೇಡ್ಕರ್ ವೃತ್ತದಲ್ಲಿ ಧಮ್ಮ ವಿಜಯ ಬುದ್ಧವಿಹಾರ ಸಿಂದಗಿ ಉಪಾಸಕ ಉಪಾಸಕಿಯರಿಂದ ಗೌರವ ನಮನ ಸಲ್ಲಿಸಲಾಯಿತು.

ಪಟ್ಟಣದ ಡಾ. ಅಂಬೇಡ್ಕರ ವೃತ್ತದಲ್ಲಿ ತಾಲೂಕಾ ಆಡಳಿತವತಿಯಿಂದ ಹಮ್ಮಿಕೊಂಡಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ 132ನೇ ಜಯಂತ್ಯುತ್ಸವ ನಿಮಿತ್ತವಾಗಿ ಭಂತೆ ಸಂಘಪಾಲ ಇವರ ಸಮ್ಮುಖದಲ್ಲಿ ಬುದ್ಧ ವಂದನೆ, ಪಂಚಶೀಲ ಹೇಳಿದರು. 

ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿ, ಸಾರ್ವತ್ರಿಕ ಚುನಾವಣೆಯ ನೀತಿಸಂಹಿತೆ ಕಾರಣದಿಂದ ಡಾ. ಅಂಬೇಡ್ಕರಜಿಯವರ ಜಯಂತ್ಯುತ್ಸವವನ್ನು ಅತೀ ಸರಳವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿ ಗೌರವ ನಮನ ಸಲ್ಲಿಸಲು ಆಗಮಿಸಿದ ಎಲ್ಲರಿಗೂ ಅಭಿನಂದಿಸಿದರು.

- Advertisement -

ಈ ಸಂದರ್ಭದಲ್ಲಿ ಶಾಸಕ ರಮೇಶ ಭೂಸನೂರ, ಪುರಸಭೆ ಅಧ್ಯಕ್ಷ ಹಣಮಂತ ಸುಣಗಾರ, ತಹಶೀಲ್ದಾರ ನಿಂಗಣ್ಣ ಬಿರಾದಾರ, ಸಮಾಜ ಕಲ್ಯಾಣಾಧಿಕಾರಿ ಎನ್.ಎಸ್.ಭೂಸಗೊಂಡ, ಕೃಷಿ ಅಧಿಕಾರಿ ಎಚ್.ವಾಯ್.ಸಿಂಗೆಗೋಳ, ಪಿ.ಎಸ್.ಆಯ್. ಶಿವರಾಜ ನಾಯಕವಾಡಿ, ಅಶೋಕ ಮನಗೂಳಿ, ಜೆಡಿಎಸ್ ಅಭ್ಯರ್ಥೀ ವಿಶಾಲಾಕ್ಷಿ ಪಾಟೀಲ, ರಾಜ್ಯ ಲಿಂಬೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ, ಗೋಲ್ಲಾಳಪ್ಪಗೌಡ ಮಾಗಣಗೇರಿ, ಶಿವು ಹತ್ತಿ, ಜೆಡಿಎಸ್ ಅಧ್ಯಕ್ಷ ಸಂತೋಷ ಹರನಾಳ, ಪರಸುರಾಮ ಕಾಂಬಳೆ, ಶೈಲಜಾ ಸ್ಥಾವರಮಠ, ಅಶೋಕ ಸುಲ್ಪಿ, ಚಂದ್ರಕಾಂತ ಶಿಂಗೆ, ಶರಣು ಶಿಂದೆ, ಸಾಯಬಣ್ಣ ಪುರದಾಳ, ಮಹೇಶ ಜಾಬಾನವರ, ಶರಣಪ್ಪ ಸುಲ್ಪಿ, ಪುರಸಭೆ ಸದಸ್ಯರಾದ ಪ್ರತಿಭಾ ಕಲ್ಲೂರ, ಶರಣಗೌಡ ಪಾಟೀಲ ಸೇರಿದಂತೆ ಹಲವು ಅಧಿಕಾರಿಗಳು ಪೂಜೆ ಕಾರ್ಯಕ್ರಮದಲ್ಲಿ ಇದರು.

- Advertisement -
- Advertisement -

Latest News

ಸಾವಿಲ್ಲದ ಶರಣರು -ಮಹಾ ದಾಸೋಹಿ ಎಲೆ ಮಲ್ಲಪ್ಪ ಶೆಟ್ಟರು

ಎಲೆ ಮಲ್ಲಪ್ಪ ಶೆಟ್ಟರ ಅವರ ಹಿರಿಯರು ಚಿಕ್ಕಮಗಳೂರಿನ ಹತ್ತಿರ ನಂದಿಹಳ್ಳಿ ಗ್ರಾಮದವರು. ರಾಜ ಮಹಾರಾಜರಿಗೆ ಸಮಾರಂಭ ಗಳಲ್ಲಿ ವೀಳ್ಯವನ್ನು ಸರಬರಾಜು ಮಾಡುವ ಕಾಯಕದವರು. ಶರಣ ಸಂಸ್ಕೃತಿಯ...
- Advertisement -

More Articles Like This

- Advertisement -
close
error: Content is protected !!
Join WhatsApp Group