spot_img
spot_img

ಸಿಂದಗಿ ; ಕಾಂಗ್ರೆಸ್ ಅಭ್ಯರ್ಥಿಯ ವಿಜಯೋತ್ಸವ

Must Read

- Advertisement -

ಸಿಂದಗಿ– ೨೦೨೩ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಿಂದಗಿ ಮತಕ್ಷೇತ್ರದಲ್ಲಿ ಬಿಜೆಪಿಯ ಹ್ಯಾಟ್ರಿಕ್ಕನ್ನು ಮುರಿದು ಕಾಂಗ್ರೆಸ್ ಜಯಭೇರಿ ಸಾಧಿಸಿದ್ದಕ್ಕೆ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.

ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ೮೬೭೭೧ ಮತಗಳನ್ನು ಪಡೆದು ೮೦೮೦ ಮತಗಳ ಅಂತರಗಳಿಂದ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರ ವಿರುದ್ದ ಮುನ್ನಡೆಯನ್ನು ಕಾಯ್ದುಕೊಂಡು ಮನಗೂಳಿ ಅವರು ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರ ಹ್ಯಾಟ್ರಿಕ್ ಗೆಲುವಿನ ಕನಸು ಭಗ್ನಗೊಂಡಿದೆ. ಈ ಬಾರಿ ಸಿಂದಗಿಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲೇಬೇಕು ಎಂಬ ಪ್ರಯತ್ನಕ್ಕೆ ಇಂದು ಫಲ ಸಿಕ್ಕಂತಾಗಿದೆ. 

೨೦೦೪ರಿಂದ ಸತತ ೪ ಬಾರಿ ಜಯ ಗಳಿಸಿದ ಬಿಜೆಪಿ ಕಳೆದ ೨೦೧೮ರಲ್ಲಿ ಜೆಡಿಎಸ್ ಅಭ್ಯರ್ಥಿ ದಿ.ಎಂ.ಸಿ.ಮನಗೂಳಿಯವರ ವಿರುದ್ಧ ಬಿಜೆಪಿ ಅಭ್ಯರ್ಥಿ ಸೋಲು ಕಂಡಿದ್ದರು. ೨೦೨೧ರ ಜನವರಿಯಲ್ಲಿ ಮಾಜಿ ಸಚಿವ ಎಂ.ಸಿ.ಮನಗೂಳಿ ಅವರ ಅಕಾಲಿಕ ಮರಣದಿಂದ ಉಪ ಚುನಾವಣೆ ನಡೆಯಿತು ಆ ಸಂದರ್ಭದಲ್ಲಿ ಆಡಳಿತಾರೂಢ ಸರಕಾರದ ಇಡೀ ಸಚಿವ ಸಂಪುಟ ಈ ಕ್ಷೇತ್ರದಲ್ಲಿ ಬೀಡುಬಿಟ್ಟು ೮ ಜಿಪಂ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಹಣದ ಹೊಳೆ ಹರಿಸಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಸಹಕಾರಯಾಗಿದ್ದು ಆದರೆ ಈ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಸರಕಾರದಲ್ಲಿರುವ ಸಚಿವರಿಗೆ ತಮ್ಮ ಕ್ಷೇತ್ರಗಳನ್ನೆ ಉಳಿಸಿಕೊಳ್ಳದ ಸಂದಿಗ್ಧ ಪರಿಸ್ಥಿತಿ ಎದುರಾಗಿ ಚುನಾವಣೆ ಘೋಷಣೆಯಾದ ನಂತರ ಕೇಂದ್ರ, ರಾಜ್ಯ ಸರಕಾರದ ಒಬ್ಬ ಧೀಮಂತ ನಾಯಕರು ಪ್ರಚಾರಕ್ಕೆ ಆಗಮಿಸದಿರುವುದು ಮತ್ತು ಈ ಡಬಲ್ ಇಂಜಿನ ಸರಕಾರದ ದುರಾಡಳಿತಕ್ಕೆ ಬೇಸತ್ತ ಜನತೆ ಇಡೀ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ತಿರಸ್ಕಾರ ಮಾಡಿ ದಾಖಲೆ ಸೃಷ್ಟಿಸಿದಂತಾಗಿದೆ. ಆದಾಗ್ಯೂ ರಾಜ್ಯದ ವರಿಷ್ಠರು ಬಿದ್ದರು ಕೂಡ ಮೀಸೆ ಮಣ್ಣಾಗಿಲ್ಲ ಎನ್ನುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ಸಾರ್ವಜನಿಕರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. 

- Advertisement -

ಈ ಸಂದರ್ಭದಲ್ಲಿ ನೂತನ ಶಾಸಕ ಅಶೋಕ ಮನಗೂಳಿ ಅವರನ್ನು ಪತ್ರಿಕೆ ಸಂಪರ್ಕಿಸಿದಾಗ ಸುಮಾರು ೨೦ ವರ್ಷಗಳಿಂದ ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಿಂದ ವಂಚಿತವಾಗಿತ್ತು. ಇದು ನನ್ನ ಗೆಲುವು ಅಲ್ಲ ಕ್ಷೇತ್ರದ ರೈತರ, ಹಿಂದುಳಿದವರ, ಮಹಿಳೆಯರ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಗೆಲುವಾಗಿದೆ. ಕ್ಷೇತ್ರದಲ್ಲಿ ಕಳೆದ ಉಪ ಚುನಾವಣೆಯಲ್ಲಿ ಬಾರಿ ಹಿನ್ನಡೆ ಕಂಡಿದ್ದ ನನಗೆ ಈ ಬಾರಿ ಕ್ಷೇತ್ರದ ಜನತೆ ಆಶೀರ್ವಾದ ಮಾಡಿದ್ದಾರೆ. ನಾನು ಕಳೆದ ಬಾರಿಯೆ ಶಾಸಕನಾಗಿ ಆಯ್ಕೆಯಾಗಬೇಕಿತ್ತು ಇಡೀ ಆಡಳೀತಾರೂಢ ಸರಕಾರದ ಕ್ಷೇತ್ರದಲ್ಲಿ ಬೀಡು ಬಿಟ್ಟು ದುಡ್ಡಿನ ಹೊಳೆ ಹರಿಸಿದ್ದರಿಂದ  ನಾನು ಪರಾಭವಗೊಂಡಿದ್ದೆ. ಆದರೆ  ಜನರ ಮನಸ್ಸಿನಿಂದ ಸೋತಿರಲ್ಲಿಲ್ಲ. ಈ ಬಾರಿ ಬಿಜೆಪಿ ಅವರ ಯಾವ ಕುತಂತ್ರಗಳಿಗೆ ಮಾರು ಹೋಗದೇ  ಜನ ನನ್ನ ಕೈ ಹಿಡಿದು ನನಗೆ ಹಾರೈಸಿದ್ದಾರೆ. ಚುಣಾವಣೆ ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡಿ ಜನಸೇವೆ ಮಾಡಲು ಮುಂದಾಗುತ್ತೇನೆ. ನನಗೆ ಆಶೀರ್ವದಿಸಿದ ಕ್ಷೇತ್ರದ ಸಮಸ್ತ ಜನತೆಗೆ ನಾನು ಯಾವತ್ತು ಋಣಿಯಾಗಿರುತ್ತೇನೆ ಎಂದರು.

ಮೆರವಣಿಗೆ- ಪಟ್ಟಣದ ಶ್ರೀ ಬಸವೇಶ್ವರ ವೃತ್ತ, ಸಂಗೋಳ್ಳಿ ರಾಯಣ್ಣ ವೃತ್ತ, ಡಾ. ಅಂಬೇಡ್ಕರ ವೃತ್ತ, ಮಹಾಯತ್ಮಾ ಗಾಂದೀಜಿ ವೃತ್ತ, ಟಿಪ್ಪು ಸುಲ್ತಾನ ವೃತ್ತ ಸೇರಿದಂತೆ ವಿವಿಧ ವೃತ್ತಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಕ್ಷೇತ್ರದ ಆಲಮೇಲ, ಮೋರಟಗಿ, ಬಳಗಾನೂರ, ಗೋಲಗೇರಿ, ಕಕ್ಕಳಮೇಲಿ ಹಂದಿಗನೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಹಿಳೆಯರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಅದ್ದೂರಿಯಾಗಿ ವಿಜಯೋತ್ಸವವನ್ನು ಆಚರಿಸಿ ಕುಣಿದು ಕುಪ್ಪಳಿಸಿದರು.


ಕಾಂಗ್ರೆಸ್ ಪಕ್ಷದ ನಾಯಕತ್ವ, ಬಿಜೆಪಿಯ ಭ್ರಷ್ಟ ರಾಜಕೀಯ ದುರಾಡಳಿತ, ದಿವಂಗತ ಎಂ. ಸಿ. ಮನಗೂಳಿಯವರ ಶಾಶ್ವತ ಯೋಜನೆಗಳು, ಕಾಂಗ್ರೆಸ್ ಪಕ್ಷವು ನೀಡಿದ 5 ಗ್ಯಾರಂಟಿಗಳು, ಪಕ್ಷದ ಕಾರ್ಯಕರ್ತರ ನಿಸ್ವಾರ್ಥ ಶ್ರಮ ಹಾಗೂ ಸಿಂದಗಿ ಜನತೆಯ ಪ್ರೀತಿಪೂರ್ವಕ ಬೆಂಬಲವೇ ನನ್ನ ಗೆಲುವಿಗೆ ಕಾರಣ.  ಸಿಂದಗಿ ಮತಕ್ಷೇತ್ರದ ಮಹಾ ಜನತೆಗೆ ಮನಗೂಳಿ ಮನೆತನದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.

- Advertisement -

ಅಶೋಕ ಎಮ್ ಮನಗೂಳಿ 

ನೂತನ ಶಾಸಕರು ಸಿಂದಗಿ.

- Advertisement -
- Advertisement -

Latest News

ಮನೋಜ್ಞ ಅನುಭೂತಿಯ ವಿಶ್ವ ಧ್ಯಾನದ ದಿನಾಚರಣೆ 

      ಮೈಸೂರಿನ ಮಾನಸಗಂಗೋತ್ರಿಯು ಇಂದು ಮನಸ್ಸನ್ನು ಮುದಗೊಳಿಸುವ ಅಪರೂಪದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ವಿಶ್ವ ಸಂಸ್ಥೆಯು 21 ಡಿಸೆಂಬರ್ ವಿಶ್ವ ಧ್ಯಾನದ ದಿನವನ್ನಾಗಿ ಆಚರಿಸಲು...
- Advertisement -

More Articles Like This

- Advertisement -
close
error: Content is protected !!
Join WhatsApp Group