spot_img
spot_img

ಭ್ರಷ್ಟನನ್ನು ಇಟ್ಟುಕೊಂಡಿದ್ದರಿಂದ ಗಡಾದ ಅವರು ಸೋಲು ಅನುಭವಿಸಿದರೆ?

Must Read

- Advertisement -

ಮೂಡಲಗಿ: ಮಾತೆತ್ತಿದರೆ ತಾನು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಂದು ಹೇಳಿಕೊಳ್ಳುವ ಭೀಮಪ್ಪ ಗಡಾದ ಅವರು ತಮ್ಮ ಮಗ್ಗುಲಲ್ಲಿ ಭ್ರಷ್ಟನೊಬ್ಬನನ್ನು ಇಟ್ಟುಕೊಂಡಿದ್ದರಿಂದಲೇ ಈ ಚುನಾವಣೆಯಲ್ಲಿ ಹೀನಾಯ  ಸೋಲು ಅನುಭವಿಸಬೇಕಾಯಿತು ಎಂಬುದೊಂದು ಅನಿಸಿಕೆ ಎಲ್ಲಾ ಕಡೆ ಹರಿದಾಡುತ್ತಿದೆ.

ಈ ಬಗ್ಗೆ ನಮ್ಮ ಪತ್ರಿಕೆ ಕೂಡ ಗಡಾದ ಅವರಿಗೆ ಸುದ್ದಿ ಪ್ರಕಟಿಸುವ ಮೂಲಕ ಎಚ್ಚರಿಕೆ ಕೊಟ್ಟಿದ್ದರೂ ಗಡಾದ ಅವರು ಎಚ್ಚರಗೊಳ್ಳಲಿಲ್ಲವೋ ಅಥವಾ ಆ ಭ್ರಷ್ಟನೇ ಗಡಾದ ಅವರ ಗಮನಕ್ಕೆ ಈ ಸುದ್ದಿಗಳು ಬರದಂತೆ ನೋಡಿಕೊಂಡನೋ ಒಂದೂ ತಿಳಿಯಲಿಲ್ಲ. ಅಂತೂ ಗಡಾದ ಅವರ ಜೊತೆಗೆ ಇದ್ದುಕೊಂಡೇ ಅವರ ಬೆನ್ನಿಗೆ ಆತ ಎಲ್ಲಾ ರೀತಿಯಿಂದ ಚೂರಿ ಹಾಕುತ್ತಿರುವುದಂತೂ ಸತ್ಯ. 

ಯಾಕೆಂದರೆ, ಸಹಕಾರ ಸಂಘವೊಂದರಲ್ಲಿ ಭೀಮಪ್ಪ ಗಡಾದ ಅವರ ಪತ್ನಿಯನ್ನು ಸದಸ್ಯರನ್ನಾಗಿ ಮಾಡಿಕೊಂಡು ಗಡಾದ ಅವರ ವರ್ಚಸ್ಸಿನ ಉಪಯೋಗ ತೆಗೆದುಕೊಂಡು ಲಕ್ಷಾಂತರ ರೂಪಾಯಿಗಳ ಸಾರ್ವಜನಿಕರ ದೇಣಿಗೆ ಹಣವನ್ನು ದುರುಪಯೋಗ ಮಾಡಿಕೊಂಡಿರುವ ಆತನ ಬಗ್ಗೆ ಈಗಾಗಲೇ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ. ನಮ್ಮ ಮಾಮನ ಹತ್ತಿರ ಸಂವಿಧಾನವೇ ಇದೆ ನಮ್ಮನ್ನು ಯಾರೂ ಕೇಳಂಗಿಲ್ಲ ಎಂದು ಭೋಂಗು ಬಿಡುವ ಈತ ನನ್ನಂಥವರಿಗೆ, ನಮ್ಮ ಹೊಲಕ್ಕೇ ಹೋಗಲಿಕ್ಕೆ ದಾರಿ ಬಂದ್ ಮಾಡುವಷ್ಟರ ಮಟ್ಟಿಗೆ ಅಹಂಕಾರ, ಸೊಕ್ಕು ತುಂಬಿಕೊಂಡು ಕುರುಡು ಕಾಂಚಾಣದ ಭೂತದಂತೆ ಕುಣಿಯುತ್ತಲಿದ್ದು ಆ ಬಗ್ಗೆ ಕಾನೂನು ಹೋರಾಟಕ್ಕೆ ಸದ್ಯದಲ್ಲಿಯೇ ಇಳಿಯಲಿದ್ದೇನೆ ಈ ಹೋರಾಟದಲ್ಲಿ ಆತನ ಮಾಮಾ(?) ಅಂದರೆ ಗಡಾದ ಅವರಿಗೂ ಸ್ವಲ್ಪ ಬಿಸಿ ಗಾಳಿ ತಟ್ಟಿದರೆ ಅದರ ತಪ್ಪು ನನ್ನದಲ್ಲ ಎಂದು ಹೇಳಬಯಸುತ್ತೇನೆ.

- Advertisement -

ಗಡಾದ ಅವರಿಗೆ ಮಾಮಾ ಮಾಮಾ ಎನ್ನುತ್ತಲೇ ಮಾಡಬಾರದ ಕೆಲಸ ಮಾಡುತ್ತಿರುವ ಆ ವ್ಯಕ್ತಿಯ ಬಗ್ಗೆ ಗಡಾದ ಅವರಿಗೇ ನೇರವಾಗಿ ದೂರು ನೀಡಿ, ಎಚ್ಚರಿಕೆ ನೀಡಿದ್ದರೂ ಇದು ಯಾಕೋ ಗಡಾದ ಅವರ ತಲೆಗೆ ಹೋಗುತ್ತಿಲ್ಲ. ಅಷ್ಟೊಂದು ಮಂಕುಬೂದಿಗೆ ಗಡಾದ ಅವರು ಬಲಿಯಾಗಿದ್ದಾರೆಯೇ ? ಎಂಬುದು ಯಾರಿಗೂ ಅರ್ಥವಾಗಿಲ್ಲ. ಹೋಗಲಿ ಗಡಾದ ಅವರ ಉಳಿದ ಆಪ್ತರಿಗೇಕೆ ಇದು ಅರ್ಥವಾಗಿಲ್ಲವೋ ದೇವರೇ ಬಲ್ಲ. ಒಟ್ಟಿನಲ್ಲಿ ಗಡಾದ ಅವರ ಜಯಕ್ಕೆ ಇಂದು ಸ್ವಲ್ಪ ಪ್ರಮಾಣದಲ್ಲಿ ಆತನಿಂದಲೂ ಸಂಚಕಾರ ಬಂದಿದ್ದಂತೂ ನಿಜ.

ತಾನು ಬಡವ ಎಂದು ಗಡಾದ ಅವರು ಹೇಳಿಕೊಂಡು ಜನತೆಯನ್ನು ಯಾಮಾರಿಸುತ್ತಿದ್ದಾರೆಂಬುದೂ ಜನರಿಗೆ ತಿಳಿದುಹೋಯಿತು. ಯಾಕೆಂದರೆ ೧೮ ಲಕ್ಷದ ಕಾರಿನಲ್ಲಿ ತಿರುಗುವ ವ್ಯಕ್ತಿ, ಹಿರಿಯರ ಆಸ್ತಿ ಇಲ್ಲದ ವ್ಯಕ್ತಿಯೊಬ್ಬ ಇಂದು ಸಮಾಜ ಸೇವೆ ಮಾಡುತ್ತ  ಅಪಾರ ಆಸ್ತಿ ಗಳಿಸುತ್ತಾರೆಂದರೆ ಅದರ ಮೂಲದ ಮಾಹಿತಿ ಅವರು ಕೊಡಬೇಕಾಗುತ್ತದೆ. ಅಲ್ಲದೆ ಇವರ ಆಪ್ತ ಕೂಡ ಕೋಟಿ ಮೌಲ್ಯದ ಆಸ್ತಿ ಗಳಿಸಬೇಕಾದರೆ ಅದಕ್ಕೂ ಗಡಾದ ಅವರೇ ಉತ್ತರ ಕೊಡಬೇಕಾಗುತ್ತದೆ. ಅದಕ್ಕೆ ಕಾಲ ಬರಬೇಕು ಅಷ್ಟೆ.

ಇಂದಿನ ಚುನಾವಣಾ ಫಲಿತಾಂಶದಿಂದ ಒಂದಂತೂ ಸ್ಪಷ್ಟವಾಗಿದೆ. ಅದು ಏನೆಂದರೆ, ಎಲ್ಲರನ್ನೂ ಎಲ್ಲಾ ಕಾಲಕ್ಕೂ ಯಾಮಾರಿಸಲು ಆಗುವುದಿಲ್ಲ. ಭೀಮಪ್ಪ ಗಡಾದ ಅವರು ನಿಜವಾಗಲೂ ಭ್ರಷ್ಟಾಚಾರ ವಿರೋಧಿಯಾಗಿದ್ದರೆ ಅವರ ಹೋರಾಟವನ್ನು ಅವರ ಪಕ್ಕದಿಂದಲೇ ಆರಂಭಿಸಬೇಕು.

- Advertisement -

ಆ ಭ್ರಷ್ಟನನ್ನು ಆದಷ್ಟು ಬೇಗ ಒದ್ದು ಹೊರಹಾಕಿದರೆ ಅವರ ಮುಂದಿನ ರಾಜಕೀಯ ಭವಿಷ್ಯ ಒಂದು ಉತ್ತಮ ಟ್ರ್ಯಾಕ್ ಹಿಡಿಯಬಹುದು. ಇದು ನನ್ನದಷ್ಟೇ ಅಲ್ಲದೆ ಗಡಾದ ಅವರ ಅಸಂಖ್ಯ ಅಭಿಮಾನಿಗಳ ಸಲಹೆ ಎಂದು ತಿಳಿದುಕೊಂಡು ಗಡಾದ ಅವರು ಹೆಜ್ಜೆ ಇಡಬೇಕು.


ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group