ವಿನಾಯಕ ಸದ್ಭಕ್ತಿ ತಾಣ ಸ್ವಾನಂದಾಶ್ರಮದಲ್ಲಿ ಸದ್ದಿಲ್ಲದ ಅಕ್ಷರ ಕ್ರಾಂತಿ ವಿದ್ಯಾಚೇತನ

Must Read

ಬೆಂಗಳೂರು ಕನಕಪುರ ರಸ್ತೆಯ ಮೆಟ್ರೋ ನಂತರ ನೈಸ್ ರಸ್ತೆ ದಾಟಿ ಕೊಂಚದೂರ ಪಯಣಸಿದರೆ ಕುಂಬಳಗೋಡು ಕಡೆಗೆ ಸಾಗುವ ಅಗರ-ತಾತಗುಣಿ ರಸ್ತೆಯಲ್ಲಿ ಆಧ್ಯಾತ್ಮ ಆಸಕ್ತರನ್ನು ತನ್ನೆಡೆಗೆ ಸೆಳೆಯುತ್ತ ಸಾಮಾಜಿಕ ಅಭಿವೃದ್ದಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಅಪರೂಪದ  ಸಂಘಟನೆ – ಗಣೇಶೋಪಾಸನೆಯ ಕೇಂದ್ರ ಸ್ವಾನಂದಾಶ್ರಮವಿದೆ.

ಈ ದೇವಾಲಯಕ್ಕೆ ದೈವೀಕ ಹಿನ್ನೆಲೆಯಿದೆ, ಇದರ ಮೂಲದಲ್ಲಿ ತಪಸ್ಸು ಇದೆ. ಸಕಲ ಆಶೋತ್ತರ ಸಿದ್ದಿಯ ನೀಡುವ ಸ್ವಾನಂದ ಬಾಲ ಗಣಪತಿ ನೆಲೆನಿಂತಿದ್ದಾನೆ.  ಆಧುನಿಕತೆಯಲ್ಲೆ ಮಿಂಚಿದ್ದರು ಗ್ರಾಮೀಣ ಸಂಸ್ಕೃತಿಯಿಂದ ಬೇರ್ಪಡದ ವಿನಾಯಕೋಪಾಸನೆಯ ವೈವಿಧ್ಯಗಳು ಭಕ್ತರನ್ನು ನಿಬ್ಬೆರಗಾಗಿಸುತ್ತದೆ.

ಪುರೋಗಾಮಿ ಸಮಾಜಚಿಂತಕರು ಶಿರಸಿಯ ಸೋಂದಾ ಸ್ವರ್ಣವಲ್ಲಿಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ಪಾರಂಪರಿಕ ಹೊಯ್ಸಳ ಶೈಲಿಯ ಮಹಾ ಗಣಪತಿ ಪಂಚಾಯತನ ದೇಗುಲ ನಿರ್ಮಾಣಗೊಂಡಿದ್ದು ಮುದ್ಗಲ ಪುರಾಣೋಕ್ತ 32 ಗಣೇಶ ಸಹಿತ ಕೃತಯುಗಾದಿ ಗಣೇಶ ಮೂರ್ತಿ ಹಾಗೂ ಗಣೇಶ ಪುರಾಣದಲ್ಲಿನ ವರ್ಣಿತ ಗಣೇಶನ ಸ್ವ ನಿವಾಸವಾದ “ಸ್ವಾನಂದ ಭವನ”ದ ಪರಿಕಲ್ಪನೆಯ ವಿಶ್ವರೂಪಿ ವಿನಾಯಕ ಮಂಟಪ ಪ್ರೇಕ್ಷಣೀಯ.

ಮಾನವ ಸೇವೆಯೆ ಮೂಲ ಮಂತ್ರವಾಗಿರಿಸಿಕೊಂಡಿರುವ ಆಶ್ರಮ, ಆಶ್ರಮದ ಸುತ್ತಲಿನ ಗ್ರಾಮದ 15 ಸರ್ಕಾರಿ ಶಾಲೆಯ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ನೀಡುವ ಒಂದು ವಿಶಿಷ್ಟ ಸೇವಾ ಕಾರ್ಯಕ್ರಮ – ವಿದ್ಯಾಚೇತನ; ಅಲ್ಪಪ್ರಮಾಣದಲ್ಲಿ ಆರಂಭವಾದ ಈ ಯೋಜನೆಯು ಇದೀಗ 1200  ವಿದ್ಯಾರ್ಥಿಗಳಿಗೆ  ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಸ್ಕೂಲ್ ಬ್ಯಾಗ್, ಶೈಕ್ಷಣಿಕ ಸೌಲಭ್ಯವನ್ನು ನೀಡುವ ಗುರಿ ತಲುಪಿ ತನ್ಮೂಲಕ ಸಾಮಾಜಿಕ ಸೇವೆಯಲ್ಲಿ ಕಾರ್ಯಪ್ರವೃತ್ತವಾಗಿದೆ. 

ಜೂನ್ 10 , ಶನಿವಾರ ಬೆಳಿಗ್ಗೆ 11ಕ್ಕೆ ಶಿರಸಿಯ ಸೋಂದಾ ಸ್ವರ್ಣವಲ್ಲಿಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ವಿದ್ಯಾಚೇತನ ದಿನಾಚರಣೆ ಹಮ್ಮಿಕೊಳ್ಳಲಾಗಿದೆ . ಬೆಂಗಳೂರು ಉತ್ತರ ಲೋಕಸಭಾ ಸಂಸದ ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ,   ಶಾಸಕ ಎಸ್.ಟಿ.ಸೋಶೇಖರ್, ವಿಶೇಷ ಆಹ್ವಾನಿತರಾಗಿ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಶ್ರೀ ಗಣೇಶ ಸೇವೆಯಿಂದ ದೈವ ಸಾಕ್ಷಾತ್ಕಾರ ಪಡೆದು ಉದಾತ್ತ ಹಾದಿಯಲ್ಲಿ ನೀವೂ ಜತೆಗೂಡಲು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 94495 38558

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group