- Advertisement -
ಹೇ ಗುರುವರ್ಯ…
ಅಜ್ಞಾನ ಕಳೆದು ಜ್ಞಾನ ನೀಡಿ
ಜನತಾ ಗುರುಕುಲ ವಿದ್ಯಾ ಆಲಯದೊಳ್
ಮನುಜನ್ಮ ಜ್ಞಾನಜ್ಯೋತಿಯೊಳ್…
- Advertisement -
ವಿದ್ಯೆ ನೀಡಿದ ಗುರುವರ್ಯ ನಿಮಗೆ ನನ್ನ ನಮನ
ಬೆಳಕು ಕಾಣುತಿಹೆ ಮನದಾಕಾಂಕ್ಷೆಯೊಳು
ನೂರಾರು ವಿದ್ಯಾರ್ಥಿಗಳು
- Advertisement -
ವಿದ್ಯೆಯಂಚಿನ ಬುದ್ಧಿ ರತ್ನ ರಾಶಿಯ ಹೊನ್ನು
ಉತ್ಸಾಹ ಉಲ್ಲಾಸದಾ ಬುಗ್ಗೆಯೊಳ್
ನೀನ್ ಮರೆಯಲಾಗದ ಗುರುವರ್ಯ…
ಮಕ್ಕಳ ತಪ್ಪು ಹೆಜ್ಜೆಯ ಬಲೆ ಬಿಡಿಸಿ
ತಪ್ಪುದಾರಿಯ ತಡೆದು ಸರಿದಾರಿಯೊಳ್ ನಡೆಯ ಕಲಿಸಿ
ಮರೆಯಲಾಗದ ನೆನಪಾಗಿ ಹೇ ಗುರುವರ್ಯ…..
ಆತ್ಮವಿಶ್ವಾಸ, ಶಿಸ್ತಿನಾ ಬೆಳೆ ಬಿತ್ತಿ
ವಿದ್ಯಾರ್ಥಿಗಳ ಆದರ್ಶ ಪ್ರಾಯ ಹೇ ಗುರುವರ್ಯ ಜ್ಞಾನದಾ ಅಮೃತಾ
ಜನ್ಮಜನ್ಮಾಂತರದ ಬಂಧು ನಾ
ನಮಿಪಿಸುತಿಹೆ ನಿಮಗೆ……
ಮುನವಳ್ಳಿ ಪುರದಲ್ಲಿ
ಜನತಾ ಗುರುಕುಲ ಹೆಸರಿನ
ಶಿಕ್ಷಣ ಸಂಸ್ಥೆಯೊಳ್
ಜೇವೂರ್ ಸರ್ವಿ ರಾಮ ಲಕ್ಷ್ಮಣರ ರೀತಿಯೋಳ್
ಶಿಕ್ಷಣ ನೀಡಿ ಅಜರಾಮವಾಗಿರುವಿರಿ
ಓ ಗುರುವರ್ಯ ನಿಮಗೆ ನಾ ಶರಣು
ಶ್ರೀಮತಿ ನಂದಿನಿ ಸನಬಾಳ್
ಶಿಕ್ಷಕಿಯರು
ಗುಲ್ಬರ್ಗ