ಮಹಿಳೆಯ ಬರ್ಬರ ಹತ್ಯೆ

Must Read

ಸಿಂದಗಿ: ಪಟ್ಟಣದ ಹೊರವಲಯದ ಟ್ರಾಕ್ಟರ್ ಶೋ ರೂಂ ಹತ್ತಿರ ಮಹಿಳೆಯೋರ್ವಳ ಕುತ್ತಿಗೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಕೊಲೆಯಾದ ಮಹಿಳೆ ಗಂಗೂಬಾಯಿ ಯಂಕಂಚಿ (28) ಸಿಂದಗಿ ಪಟ್ಟಣದ ನಿವಾಸಿಯಾಗಿದ್ದು. ಮೃತ ಮಹಿಳೆ ಚಿಕ್ಕ ಸಿಂದಗಿ ಮಾರ್ಗವಾಗಿ ಸಿಂದಗಿಗೆ ದ್ವಿಚಕ್ರ ( ಸ್ಕೂಟಿ) ವಾಹನದಲ್ಲಿ ಸಹೋದರ ಸಂಬಂಧಿಯೋರ್ವರ ಜೊತೆ   ತೆರಳುತ್ತಿದ್ದಾಗ ಮಾರ್ಗ ಮಧ್ಯ ಅಡ್ಡಗಟ್ಟಿದ ದುಷ್ಕರ್ಮಿಗಳು ಕೊಲೆಗೈದು ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.

ಈ ಕುರಿತು ಹೇಳಿಕೆ ನೀಡಿದ ಸಹೋದರ ಸಂಬಂಧಿ ಮೂರ್ನಾಲ್ಕು ಜನ ಬಂದು ಏಕಾಏಕಿ ದಾಳಿ ನಡೆಸುತ್ತಿದ್ದಾಗ ಭಯದಿಂದ ನಾನು ಓಡಿ ಹೋದೆ ಅವರು ಕೊಲೆ ಮಾಡಿ ವಾಹನವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ. 

ಕೊಲೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ ಸ್ಥಳಕ್ಕೆ ಸಿಪಿಐ ಡಿ ಹುಲಗಪ್ಪ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Latest News

ಲೇಖನ : ಬ್ರಾಹ್ಮಣ ಪುತ್ರನಿಗಾಗಿ ಕೊಲೆಗಾರನಾದ ಶ್ರೀರಾಮಚಂದ್ರ

ಬ್ರಾಹ್ಮಣ ಪುತ್ರನಿಗಾಗಿ ಕೊಲೆಗಾರನಾದ ಶ್ರೀರಾಮಚಂದ್ರಾಮ ಚರಿತ ಕಥಾಮೃತವಾದ ರಾಮಾಯಣ, ಶ್ರೀರಾಮನನ್ನು ಮರ್ಯಾದ ಪುರುಷೋತ್ತಮ ಎಂದು ಬಿಂಬಿಸಿದೆ. ಹಾಗೆಂದ್ರೆ ತನ್ನ ಜೀವಮಾನದಲ್ಲಿ ನೀತಿ ಹಾಗೂ ತತ್ವ ಬದ್ಧವಾಗಿ...

More Articles Like This

error: Content is protected !!
Join WhatsApp Group