Dalita Devobhava: ಶೀಘ್ರದಲ್ಲೇ ‘ದಲಿತ ದೇವೋಭವ’ ಚಿತ್ರೀಕರಣ

Must Read

ಎಂ ಸಿ ಹೇಮಂತ್ ಗೌಡ ರವರು ಕಥೆ ಬರೆದು ನಿರ್ಮಾಣ ಮಾಡುತ್ತಿರುವ ಕಥೆಯನ್ನು ನೀಲೇಶ್  ಆರ್. ರವರು  ಸ್ಕ್ರೀನ್ ಪ್ಲೇ ಮಾಡಿ ಈಗ ನಿರ್ದೇಶನ ಮಾಡಲು ರೆಡಿಯಾಗಿದ್ದಾರೆ.

ಈ ಚಿತ್ರಕ್ಕೆ’ ದಲಿತ ದೇವೋಭವ’ ಎಂದು  ಟೈಟಲ್  ಇಟ್ಟು ಗಾಂಧೀ ನಗರದಲ್ಲಿ ಸದ್ದು ಮಾಡುತ್ತಿದೆ. ಈ ಹಿಂದೆ ಅಷ್ಟೇ ಬಿಟ್ಟ ಪೋಸ್ಟರ್ ತುಂಬಾ ಸದ್ದು ಮಾಡುತ್ತಿದೆ. ಈ ಸಿನಿಮಾಕ್ಕೆ ಸಚ್ಚಿನ್ ಬಸ್ರುರ್ ರವರು ಸಂಗೀತವನ್ನು ಮಾಡಲಿದ್ದಾರೆ. 

ನೀಲೇಶ್ ರವರು ಈ ಸಿನಿಮಾ ಎಲ್ಲರ ಮನಸಲ್ಲಿ  ಉಳಿಯುತ್ತದೆ ಮತ್ತು ಇಡೀ ಭಾರತಕ್ಕೆ ಒಂದೊಳ್ಳೆ ಸಂದೇಶ  ವನ್ನು ಕೊಡಲು ಈ ಸಿನಿಮಾ ರೆಡಿ ಆಗ್ತಾಯಿದೆ ಎಂದು ಹೇಳಿದ್ದಾರೆ. 

ನಿರ್ಮಾಪಕರು ಎಂ ಸಿ ಹೇಮಂತ ಗೌಡ ರವರು  ಸಿನಿಮಾಕ್ಕೆ ಎಲ್ಲಾ ರೀತಿಯ ಸೌಲಭ್ಯಗಳನ್ನು  ಕೊಡುತ್ತಿದ್ದಾರೆ. ದಲಿತ ದೇವೋಭವ ಸಿನಿಮಾ ಈಗ  ಸೇಟ್ಟೆರಲು ರೆಡಿಯಾಗಿದೆ. ಸೆಪ್ಟೆಂಬರ್ ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಆದಷ್ಟು ಬೇಗ ಬಿಡುಗಡೆ ಮಾಡುತ್ತಿದ್ದೀವಿ ಎಂದು ನಿರ್ದೇಶಕ ನೀಲೇಶ್ ಆರ್. ರವರು  ಹೇಳಿದ್ದಾರೆ. ಇಡೀ ಭಾರತಕ್ಕೆ ಒಂದೊಳ್ಳೆ ಸಂದೇಶ ಮತ್ತು ಒಂದೊಳ್ಳೆ ಸಿನಿಮಾವನ್ನು ಕೊಡಲು ರೆಡಿಯಾಗಿದ್ದಾರೆ ನಿರ್ಮಾಪಕ  ಎಂ ಸಿ ಹೇಮಂತಗೌಡ ರವರು ಮತ್ತು ನಿರ್ದೇಶಕ  ನೀಲೇಶ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group