ಎಂ ಸಿ ಹೇಮಂತ್ ಗೌಡ ರವರು ಕಥೆ ಬರೆದು ನಿರ್ಮಾಣ ಮಾಡುತ್ತಿರುವ ಕಥೆಯನ್ನು ನೀಲೇಶ್ ಆರ್. ರವರು ಸ್ಕ್ರೀನ್ ಪ್ಲೇ ಮಾಡಿ ಈಗ ನಿರ್ದೇಶನ ಮಾಡಲು ರೆಡಿಯಾಗಿದ್ದಾರೆ.
ಈ ಚಿತ್ರಕ್ಕೆ’ ದಲಿತ ದೇವೋಭವ’ ಎಂದು ಟೈಟಲ್ ಇಟ್ಟು ಗಾಂಧೀ ನಗರದಲ್ಲಿ ಸದ್ದು ಮಾಡುತ್ತಿದೆ. ಈ ಹಿಂದೆ ಅಷ್ಟೇ ಬಿಟ್ಟ ಪೋಸ್ಟರ್ ತುಂಬಾ ಸದ್ದು ಮಾಡುತ್ತಿದೆ. ಈ ಸಿನಿಮಾಕ್ಕೆ ಸಚ್ಚಿನ್ ಬಸ್ರುರ್ ರವರು ಸಂಗೀತವನ್ನು ಮಾಡಲಿದ್ದಾರೆ.
ನೀಲೇಶ್ ರವರು ಈ ಸಿನಿಮಾ ಎಲ್ಲರ ಮನಸಲ್ಲಿ ಉಳಿಯುತ್ತದೆ ಮತ್ತು ಇಡೀ ಭಾರತಕ್ಕೆ ಒಂದೊಳ್ಳೆ ಸಂದೇಶ ವನ್ನು ಕೊಡಲು ಈ ಸಿನಿಮಾ ರೆಡಿ ಆಗ್ತಾಯಿದೆ ಎಂದು ಹೇಳಿದ್ದಾರೆ.
ನಿರ್ಮಾಪಕರು ಎಂ ಸಿ ಹೇಮಂತ ಗೌಡ ರವರು ಸಿನಿಮಾಕ್ಕೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೊಡುತ್ತಿದ್ದಾರೆ. ದಲಿತ ದೇವೋಭವ ಸಿನಿಮಾ ಈಗ ಸೇಟ್ಟೆರಲು ರೆಡಿಯಾಗಿದೆ. ಸೆಪ್ಟೆಂಬರ್ ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.
ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಆದಷ್ಟು ಬೇಗ ಬಿಡುಗಡೆ ಮಾಡುತ್ತಿದ್ದೀವಿ ಎಂದು ನಿರ್ದೇಶಕ ನೀಲೇಶ್ ಆರ್. ರವರು ಹೇಳಿದ್ದಾರೆ. ಇಡೀ ಭಾರತಕ್ಕೆ ಒಂದೊಳ್ಳೆ ಸಂದೇಶ ಮತ್ತು ಒಂದೊಳ್ಳೆ ಸಿನಿಮಾವನ್ನು ಕೊಡಲು ರೆಡಿಯಾಗಿದ್ದಾರೆ ನಿರ್ಮಾಪಕ ಎಂ ಸಿ ಹೇಮಂತಗೌಡ ರವರು ಮತ್ತು ನಿರ್ದೇಶಕ ನೀಲೇಶ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.