Puttaraj Gawai: ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ

Must Read

ಯಾದಗಿರಿ – ಪೂಜ್ಯರ ಅಭಿಮಾನಿ ಭಕ್ತರ ಮಹಾಬಳಗವಾದ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಆಜೀವ ಸದಸ್ಯರಾಗಿ ಸಲ್ಲಿಸಿದ ಸೇವೆ, ಪೂಜ್ಯರ ಮೇಲಿಟ್ಟಿರುವ ಭಕ್ತಿ, ಸಮಾಜ ಸೇವೆ, ಸಂಸ್ಕೃತಿ ಚಿಂತನೆ ಮತ್ತು ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್‌ನ ಗಾನಯೋಗಿ ಪಂಚಾಕ್ಷರಿ ಅನುಗ್ರಹ ರಾಷ್ಟ್ರೀಯ ಪ್ರಶಸ್ತಿಗೆ ಭಾಜರಾಗಿರುವುದನ್ನು ಗುರುತಿಸಿ, ಚಂಡರಕಿಯ ರಾಜಲಿಂಗಪ್ಪ ಸಜ್ಜನ ಇವರನ್ನು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಯಾದಗಿರಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆಯೆಂದು ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಪೂಜ್ಯಶ್ರೀ ವೇ. ಚನ್ನವೀರ ಸ್ವಾಮಿ ಹಿರೇಮಠ (ಕಡಣಿ) ಇವರು ತಿಳಿಸಿದ್ದಾರೆ.

ತಮ್ಮ ಅಧಿಕಾರದ ಅವಧಿಯಲ್ಲಿ ತಮ್ಮದೇ ಸಮಾನ ಮನಸ್ಕ ಆಪ್ತಬಳಗವನ್ನು ಈ ಸಮಿತಿಯ ಸದಸ್ಯರಾಗಿ ಮಾಡುವ, ಯಾದಗಿರಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಸೇವಾ ಸಮಿತಿಯ ಘಟಕಗಳನ್ನು ಅಸ್ಥಿತ್ವಕ್ಕೆ ತರುವ ವಿಶ್ವಾಸವನ್ನು ಹೊಂದಿದ್ದೇವೆ. ಡಾ. ಪಂ. ಪುಟ್ಟರಾಜರ ಜೀವನ ಸಾಧನೆ ಸಂದೇಶವನ್ನು ಮತ್ತು ಅವರ ಸಾಹಿತ್ಯ ಪ್ರಚಾರ ಮತ್ತು ಪ್ರಸಾರದೊಂದಿಗೆ ಭಕ್ತಿ ಪಂಥದ ಕವಿ, ಗಾಯಕರಿಗೆ ವೇದಿಕೆಯಾಗಿ ಕಾರ್ಯ ನಿರ್ವಹಿಸುವ ಮೂಲಕ, ಗುರು ಸೇವೆ ಮಾಡುವ ಭಾಗ್ಯ ತಮ್ಮ ಪೂರ್ವ ಜನ್ಮದ ಸುಕೃತವೆಂದು ಭಾವಿಸಿ ಪ್ರಾಂಜಲ ಮನಸ್ಸಿನಿಂದ ಗುರುವಿಗೆ ಸೇವೆ ಸಲ್ಲಿಸಲು ವಿನಂತಿಸಿಕೊಳ್ಳುತಿದ್ದೇನೆ ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group