ಹೌದು ಜಮ್ಮಾಪೂರದ ಅದ್ಬುತ ಕಲಾವಿದ ಅಚ್ಚು ಮಂಜು. ಅವರು ಈಗಾಗಲೇ ರಾಮಾಚಾರಿ 2.0 ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದು ಎಲ್ಲಾ ಸಿನೆಮಾಗಳಲ್ಲಿ ವಿಭಿನ್ನವಾಗಿ ನಟನೆ ಮೂಲಕ ಗುರುತಿಸಿಕೊಂಡಿದ್ದು ನಿಮಗೆಲ್ಲ ಗೊತ್ತೇ ಇದೆ.
ಜುಲೈನಲ್ಲಿ ಸೆಟ್ಟೇರಲು ಸಜ್ಜಾಗಿರುವ ದಲಿತ ದೇವೋಭವ ಫ್ಯಾನ್ ಇಂಡಿಯಾ ಚಿತ್ರದಲ್ಲಿ ಸಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಎಂ ಸಿ ಹೇಮಂತ ಗೌಡ ಅವರು ಕಥೆ ಜೊತೆಯಲ್ಲಿ ಬಂಡವಾಳ ಹೂಡುತ್ತಿದ್ದಾರೆ ಸಚ್ಚಿನ್ ಬಸ್ರೂರ ಅವರು ಸಂಗೀತ ನೀಡುತ್ತಿದ್ದು ನೀಲೇಶ್ ಆರ್ ಎಂಬುವರು ನಿರ್ದೇಶನ ಮಾಡಲಿದ್ದಾರೆ.
ಇಷ್ಟರಲ್ಲಿ ಚಿತ್ರೀಕರಣ ಶುರು ಮಾಡುವ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ. ಏನೇ ಆಗಲಿ ಒಳ್ಳೆಯ ಸಿನೆಮಾ ಕಲಾವಿದ ಆಗಬೇಕೆಂದು ಕನಸು ಕಂಡಿದ್ದ ಅಚ್ಚು ಮಂಜು ಅವರಿಗೆ ಗ್ರಾಮದ ಜನರು ಇನ್ನೂ ದೊಡ್ಡ ಅವಕಾಶಗಳು ಸಿಗಲಿ ಎಂದು ಹಾರೈಸುತ್ತಿದ್ದಾರೆ.