ಗುತ್ತಿ ಬಸವಣ್ಣ ಏತ ನೀರಾವರಿ ಸಮಸ್ಯೆ ಪರಿಹಾರಕ್ಕೆ ಸಚಿವರ ಭರವಸೆ

Must Read

ಸಿಂದಗಿ: ಸಿಂದಗಿ ಮತಕ್ಷೇತ್ರದ ತಾಂಬಾ ಭಾಗದ ಸುತ್ತಮುತ್ತಲಿನ ರೈತರ ಬೇಡಿಕೆಯಾಗಿದ್ದ ಗುತ್ತಿ ಬಸವಣ್ಣ ಏತ ನೀರಾವರಿ ಸಮಸ್ಯೆ ಪರಿಹಾರಕ್ಕೆ ಸುಮಾರು 473 ದಿನಗಳಿಂದ ನಡೆದ ಉಪವಾಸ ಸತ್ಯಾಗ್ರಹಕ್ಕೆ ಇಂದು ಬಹುತೇಕ ಅಂತಿಮ ರೂಪ ಸಿಕ್ಕಿದೆ.

ನೀರಾವರಿ ಸಚಿವರಾದ ಡಿ.ಕೆ. ಶಿವಕುಮಾರ ಅವರಿಗೆ  ಸಿಂದಗಿ ಮತಕ್ಷೇತ್ರದ ಶಾಸಕರಾದ ಅಶೋಕ ಮನಗೂಳಿ ಅವರು ಗುತ್ತಿ ಬಸವಣ್ಣ ಹೋರಾಟ ಸಮಿತಿಯ ರೈತರ ನಿಯೋಗ ಕರೆತಂದು ಸಚಿವರಿಗೆ ಮನವರಿಕೆ ಮಾಡಿದರು.

ಪ್ರತಿಕ್ರಿಯಿಸಿದ ಸಚಿವರು ಶಾಸಕರಾದ ಅಶೋಕ ಮನಗೂಳಿ ಯವರಿಗೆ ಸ್ಥಳಕ್ಕೆ ಭೇಟಿ ನೀಡಿ ರೈತರ ಸತ್ಯಾಗ್ರಹ ಅಂತ್ಯಗೊಳಿಸಲು ಸೂಚಿಸಿದರು. ಬೇಡಿಕೆ ಈಡೇರಿಸುವುದಾಗಿ ಶಾಸಕ ಅಶೋಕ ಮನಗೂಳಿ ಯವರಿಗೆ ಹಾಗೂ ರೈತರಿಗೆ ಸದ್ಯದಲ್ಲೇ ಕಾಡಾ ಗೇಟ ಓಪನ್ ಮಾಡುವ ಮೂಲಕ ಕಾಲುವೆಗೆ ನೀರು ಹರಿಸುವ ಭರವಸೆ ನೀಡಿದರು.

ಇದೆ ಸಂದರ್ಭದಲ್ಲಿ ರೈತರಾದ  ಮಲ್ಲಯ್ಯ ಸಾರಂಗಮಠ  (ಗುತ್ತಿ ಬಸವಣ್ಣ ಹೋರಾಟ ಸಮಿತಿ ಅಧ್ಯಕ್ಷರು ), ಸದಸ್ಯರಾದ, ಮಹಾದೇವ ಮೂಲಿಮನಿ, ಅಪ್ಪಣ್ಣ ಕಲ್ಲೂರ, ಸಿದ್ದು ಹತ್ತಳ್ಳಿ, ಸಿದ್ದಪ್ಪ ಕಿಣಗಿ, ಪರಸು ಬಿಸನಾಳ, ಬೀರಪ್ಪ ವಗ್ಗಿ, ಅಡಿವೆಪ್ಪ ರೊಟ್ಟಿ, ಶಾಂತಪ್ಪ ಹಂಚಿನಾಳ, ಬಸವರಾಜ ಉಪ್ಪಿನ, ಬಸವರಾಜ ಅವಟಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಮಲ್ಲಣ್ಣ ಸಾಲಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮಹಾಂತಗೌಡ ಪಾಟೀಲ, ಅರವಿಂದ ಹಂಗರಗಿ, ರಮೇಶ ಭಂಟನೂರ, ಸಂಗನಗೌಡ ಬಿರಾದಾರ, ರಾವುತಗೌಡ ಬಿರಾದಾರ, ಸಿದ್ದನಗೌಡ ಪಾಟೀಲ, ಷಣ್ಮುಖಯ್ಯ ಹಿರೇಮಠ, ಸಂದೀಪ ಚೌರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group